ಎಸ್ ಪಿ ಸಾಂಗ್ಲಿಯಾನ ಚಿತ್ರದಲ್ಲಿ ಶಂಕರ್ ನಾಗ್ ನಾಯಕನಾಗಿ ಮಾತು ಭವ್ಯ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಯಿಸಿದ್ದಾರೆ. ಅಂಬರೀಶ್, ದೇವರಾಜ್, ವಜ್ರಮುನಿ, ದೊಡ್ಡಣ್ಣ, ಡಿಸ್ಕೋ ಶಾಂತಿ, ಸುಧೀರ್, ಲೋಹಿತಾಶ್ವ ಟಿ ಎಸ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ನಂಜುಂಡಪ್ಪ ಅವರ ನಿರ್ದೇಶನ ಮತ್ತು ಹಂಸಲೇಖ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಮಾರುವೇಷದಲ್ಲಿ ಬಂದು ದುಷ್ಟರ ಜಾಲವನ್ನು ಅರಿತ ನಿಷ್ಟಾವಂತ ಮತ್ತು ನಿಷ್ಟುರ ಪೋಲಿಸ್ ಅಧಿಕಾರಿ ನಂತರ ಅವರನ್ನೆಲ್ಲ ಕಂಬಿ ಹಿಂದೆ ಕಳಿಸಲು ಯಶಸ್ವಿಯಾಗುತ್ತಾನೆ. ಖಡಕ್ ಪೋಲಿಸ್ ಅಧಿಕಾರಿ ಮತ್ತು ರಾಜಕಾರಣಿ ಹೆಚ್.ಟಿ.ಸಾಂಗ್ಲಿಯಾನರ ಹೆಸರನ್ನು ಶಂಕರನಾಗ್ ಅಜರಾಮರ ಮಾಡಿದರು.