ಜೀಬ್ರಾ ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ. ಜೀಬ್ರಾದಲ್ಲಿ ಇಬ್ಬರು ಹೀರೋ. ಕನ್ನಡದಿಂದ ಡಾಲಿ ಧನಂಜಯ್ ಹೀರೊ ಆಗಿದ್ದರೆ, ತೆಲುಗಿನ ನಟ ಸತ್ಯದೇವ್ ಮತ್ತೊಬ್ಬ ಹೀರೋ. ಉಳಿದಂತೆ ಸುನೀಲ್, ಹಾಸ್ಯ ನಟ ಸತ್ಯ, ತಮಿಳಿನ ಸತ್ಯರಾಜ್, ಪ್ರಿಯಾ ಭವಾನಿ ಶಂಕರ್, ಹಾಲಿವುಡ್ ನಟಿ ಜೆನ್ನಿಫರ್ ಪಿಕ್ಕಿನಾಟೊ ಮುತಾದವರು ತಾರಾಗಣದಲ್ಲಿದ್ದಾರೆ.
ರವಿ ಬಸ್ರೂರು ಸಂಗೀತ, ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣ ಹಾಗೂ ಅನಿಲ್ ಕ್ರಿಶ್ ಸಂಕಲನ ಸಿನಿಮಾಗಿದೆ. ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದು ಮೂಲತಃ ತೆಲುಗು ಸಿನಿಮಾವಾಗಿದ್ದು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗಿದೆ.