twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಸಿನಿಮಾಗಳ ಅರ್ಧ ವಾರ್ಷಿಕ ಪೋಸ್ಟ್ ಮಾರ್ಟಂ ವರದಿ

    By * ಮಲೆನಾಡಿಗ
    |

    ಕಳೆದ ಆರು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳತ್ತ ಸಿಂಹಾವಲೋಕನ ಮಾಡಿದರೆ, ಜ 7 ರಂದು ಶ್ರೀ ನಾಗ ಶಕ್ತಿ ಮೂಲಕ ಆರಂಭವಾದ ವರ್ಷದ ಸಿನಿಮಾ ಬೆಳೆ ಭರ್ಜರಿಯಾಗಿರಲಿ ಎಂದು ದೇವಿ ಹೆಸರಲ್ಲಿ ಈಡುಗಾಯಿ, ಕುಂಬಳಕಾಯಿ ಹೊಡೆದು ವರ್ಷದ ವ್ಯಾಪಾರ ಆರಂಭಿಸಿದರು ಗಾಂಧಿನಗರದ ಚಿತ್ರಕರ್ಮಿಗಳು. ಆದರೆ ಎಂದಿನಂತೆ ಕನ್ನಡದ ಫಲವತ್ತಾದ ನೆಲದಲ್ಲಿ ಈ ಬಾರಿ ಪ್ರೇಕ್ಷಕರಿಗೆ ಕಾಳಿಗಿಂತ ಹೆಚ್ಚು ಜೊಳ್ಳು ಸಿಕ್ಕಿದ್ದು ಸುಳ್ಳಲ್ಲ.

    ಆರು ತಿಂಗಳಲ್ಲಿ ಬಿಡುಗಡೆಗೊಂಡ ಒಟ್ಟು 57 ಕ್ಕೂ ಮಿಕ್ಕ ಚಿತ್ರಗಳಲ್ಲಿ ಜನಮೆಚ್ಚುಗೆ, ಗಲ್ಲಾಪೆಟ್ಟಿಗೆ ತುಂಬಿಸಿದ ಚಿತ್ರಗಳ ಎಣಿಕೆ ಹೆಬ್ಬೆರಳಿನಿಂದ ಶುರುವಾಗಿ ಕಿರುಬೆರಳಿಗೆ ನಿಲ್ಲುತ್ತದೆ. ಜನವರಿಯಲ್ಲಿ 7, ಫೆಬ್ರವರಿಯಲ್ಲಿ 14, ಮಾರ್ಚ್ ನಲ್ಲಿ 6, ಏಪ್ರಿಲ್ ನಲ್ಲಿ 11 , ಮೇನಲ್ಲಿ 7 ,ಜೂನ್ ನಲ್ಲಿ 10 ಹಾಗೂ ಜುಲೈ ಮೊದಲ ವಾರದಲ್ಲಿ 6 ಚಿತ್ರಗಳು ತೆರೆ ಕಂಡಿವೆ.

    ಕಾದಂಬರಿ ಆಧಾರಿತ ಚಿತ್ರಗಳು:
    * ಶಿವರುದ್ರಯ್ಯ ನಿರ್ದೇಶನದ ಮಾಗಿಯ ಕಾಲ(ಜು 24); ನಿಶಾಂತ್ , ಬಿಂದುಶ್ರೀ; ಈಶ್ವರ್ ಚಂದ್ರ ಬರೆದ ಒಂದು ಸೂರಿನ ಕಥೆ ಆಧಾರಿತ,
    * ಪಿ ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ(ಜು 17); ದತ್ತಣ್ಣ, ಸುಚೇಂದ್ರ ಪ್ರಸಾದ್, ರಾಮೇಶ್ವರಿ ವರ್ಮ;ಕೋಟ ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿ

    ರಿಮೇಕ್ ಚಿತ್ರಗಳು:
    * ಕಿರಾತಕ(ತಮಿಳಿನ ಕಲಾವನಿ), ಮಲ್ಲಿಕಾರ್ಜುನ(ತಮಿಳಿನ ಥವಸಿ), ಹುಡುಗರು(ತಮಿಳಿನ ನಾಡೋಡಿಗಳ್), ಹೋರಿ(ಮಲೆಯಾಳಂ ಮೀಸ ಮಾಧವನ್),ಧೂಳ್(ತಿರುವಿಲೈಯಾಡಲ್ ಆರಂಭಂ, ತಮಿಳು), ಡಬ್ಬಲ್ ಡೆಕ್ಕರ್ (ಸ್ಯಾಂಡ್ ವಿಚ್, ಹಿಂದಿ), ದಂಡಂ ದಶಗುಣಂ(ಕಾಕ್ಕಾ ಕಾಕ್ಕಾ, ತಮಿಳು), ಜರ್ನಿ(ರೋಡ್ ಹಿಂದಿ), ಕೆಂಪೇಗೌಡ(ಸಿಂಗಂ, ತಮಿಳು), ಕಳ್ ಮಂಜ(ಚಥಿಕ್ಕಥ ಚಂಥು ಮಲೆಯಾಳಂ), ಮನಸಿನ ಮಾತು(ರೋಜಂ ಕೂಟಂ, ತಮಿಳು), ಕಂಠೀರವ(ಸಿಂಹಾದ್ರಿ, ತೆಲುಗು)

    ಕಿರಿಕ್ ಮಾಡಿಕೊಂಡ ಚಿತ್ರಗಳು:
    * ಒಲವೇ ಮಂದಾರ: ಲಹರಿ ವೇಲು ಆಡಿಯೋ ವಿತರಣೆ ಅಸಮಪರ್ಕ ಕಿಡ್ನಾಪ್ ಪ್ರಕರಣ
    * ಗನ್: ನಟ ಹರೀಶ್ ರಾಜ್ ಆತ್ಮಹತ್ಯೆ ಪ್ರಸಂಗ
    * ಕೆಂಪೇಗೌಡ: ಪ್ರಭಾವ ಬೀರಿ ಥೇಟರ್ ಗಳಿಸಿಕೊಂಡ ಆರೋಪ
    * ದಂಡಂ ದಶಗುಣಂ : ರಮ್ಯಾ ಪ್ರೆಸ್ ಮೀಟ್, ಅಳು, ನಿರ್ಮಾಪಕ ಗಣೇಶ್ ಜೊತೆ ಲೇವಾದೇವಿ, ಅಂಬರೀಷ್ ಮಧ್ಯಸ್ಥಿಕೆ ಸುಖಾಂತ್ಯ
    * ಕೂಲ್: ನಿರ್ದೇಶಕ ಮುಸ್ಸಂಜೆ ಮಹೇಶ್ ನಿರ್ಮಾಪಕಿ ಶಿಲ್ಪಾ ಗಣೇಶ್ ಕಿತ್ತಾಟ, ಗಣೇಶ್ ಪ್ರಥಮ ಬಾರಿಗೆ ನಿರ್ದೇಶನ
    * ಐಯಾಮ್ ಸ್ಸಾರಿ ಮತ್ತೆ ಬನ್ನಿ ಪ್ರೀತ್ಸೋಣ: ಪ್ರೇಮ್ ಕುಮಾರ್ ಹಸಿಬಿಸಿ ದೃಶ್ಯ, [ಹೆಚ್ಚಿನ ಮಾಹಿತಿಗೆ ಪಾಪ್ ಕಾರ್ನ್ ತಾಣ ವೀಕ್ಷಿಸಿ]

    ಹೊಸ ನಿರ್ದೇಶಕರು:
    ತವರಿನ ಋಣ:ರಮೇಶ್ ರಾಜ;
    ಬಾಸ್ : ಪಿ ರಘುರಾಜ್;
    ಈ ಸಂಜೆ: ಶ್ರೀ;
    ಬಾಸ್:ಪಿ ರಘುರಾಜ್
    ಒಲವೇ ಮಂದಾರ:ಜಯತೀರ್ಥ
    ಮನಸಿನ ಮಾತು:ಅನಂತರಾಜು
    ಕಾಲ್ಗೆಜ್ಜೆ: ಎ ಬಂಗಾರು
    ಕೋಟೆ : ಶ್ರೀನಿವಾಸ ರಾಜು
    ರಂಗಪ್ಪ ಹೋಗ್ಬಿಟ್ನ: ಎಂಎಲ್ ಪ್ರಸನ್ನ
    ಸೂಸೈಡ್: ಪ್ರಸಾದ್ ಗುರು
    ಕಾರ್ತಿಕ್ : ಸತೀಶ್ ಶೆಟ್ಟಿ
    ಸಾಚಾ: ಐಸಾಕ್ ಬಾಜಿ
    ಗನ್: ಹರೀಶ್ ರಾಜ್
    ಟೇಕ್ ಇಟ್ ಈಸಿ: ಅನಂತ್ ಪದ್ಮನಾಭ್
    ಶ್ರಾವಣ: ರಾಜಶೇಖರ್
    ಉಯ್ಯಾಲೆ: ದಿನೇಶ್ ಎಸ್
    ಜರ್ನಿ: ಬಿಎಸ್ ಸಂಜಯ್
    106 ಕನಸು: ಅವಿರಾಮ್
    ಮುರಳಿ ಮೀಟ್ಸ್ ಮೀರಾ: ಮಹೇಶ್ ರಾವ್
    ಧೂಳ್: ಧರಣಿ
    ದೇವದಾಸ್ : ಶಾಂತಕುಮಾರ್
    ನಮಿತಾ ಐಲವ್ ಯೂ: ಎಂ ಜಯಸಿಂಹ ರೆಡ್ಡಿ
    ಐಯಾಮ್ ಸ್ಸಾರಿ ಮತ್ತೆ ಬನ್ನಿ ಪ್ರೀತ್ಸೋಣ: ರವೀಂದ್ರ
    ಆಸ್ಕರ್: ಕೃಷ್ಣ
    ಕಿರಾತಕ: ಪ್ರದೀಪ್ ರಾಜ್
    ರಾಜಧಾನಿ: ರಘು ಜಯ
    ಕೂಲ್: ಗಣೇಶ್
    ಈ ಪೈಕಿ ರಾಜಧಾನಿ, ಐ ಯಾಮ್ ಸ್ಸಾರಿ.. ಕಿರಾತಕ, ಒಲವೇ ಮಂದಾರ ಚಿತ್ರದ ನಿರ್ದೇಶಕರು ಗಮನ ಸೆಳೆದರು.

    ನಿರ್ದೇಶಕರ ರಿಪೋರ್ಟ್: ಶಿವರುದ್ರಯ್ಯ, ಪಿ ಶೇಷಾದ್ರಿ, ಎಸ್ ನಾರಾಯಣ್, ಪ್ರೀತಂ ಗುಬ್ಬಿ, ಬಿ ಸುರೇಶ, ಮಾದೇಶ್, ರಿಚರ್ಡ್ ಕ್ಯಾಸ್ಟಲಿನೋ, ಓಂ ಪ್ರಕಾಶ್ ರಾವ್, ಸೀತಾರಾಮ್ ಕಾರಂತ್, ಎಸ್ ಮಹೇಂದರ್, ಓಂ ಸಾಯಿ ಪ್ರಕಾಶ್ ಮತ್ತೆ ನಿರ್ದೇಶನದ ಹಾದಿಗೆ ಬಂದಿರುವುದು ಒಳ್ಳೆಯ ಬೆಳವಣಿಗೆ. ಶೇಷಾದ್ರಿ, ಬಿ ಸುರೇಶಗೆ ಮಾರ್ಡ್

    ಹಿಟ್ ಚಿತ್ರಗಳು: ಕೆಂಪೇಗೌಡ, ಹುಡುಗರು
    ಕೂಲ್, ಒಲವೇ ಮಂದಾರ, ಸಂಜು ವೆಡ್ಸ್ ಗೀತಾ ಹಿಟ್ ಆಗಿದೆಯಂತೆ ಹಾಗಂತ ಚಿತ್ರತಂಡ ಹೇಳಿಕೊಂಡಿದೆ. ಆದರೆ ಅಧಿಕೃತ ಮಾಹಿತಿ ಇಲ್ಲ. ಗಾಂಧಿನಗರ ಯಾವುದೇ ಚಿತ್ರದ ಹಣಗಳಿಕೆ ವಿವರ ಯಾರೂ ನೀಡುವುದಿಲ್ಲ. ಬೇಕಾದರೆ RTI ಬಳಸಿ ಪ್ರಯತ್ನಿಸಿ. ಇಲ್ಲಿ ಕೊಟ್ಟಿರುವ ಮಾಹಿತಿ ಬದಲಾವಣೆಗೆ ಒಳಪಟ್ಟಿದೆ.

    ಫ್ಲಾಪ್ ಚಿತ್ರಗಳು: ಪಟ್ಟಿ ಮಾಡುವುದು ಅಪಮಾನಕರ ಎಂದು ಕೈ ಬಿಡಲಾಗಿದೆ.

    ನಟ ನಟಿಯರು:
    ದರ್ಶನ್: ಬಾಸ್, ಪ್ರಿನ್ಸ್
    ಸುದೀಪ್ : ಕೆಂಪೇಗೌಡ
    ಅಜಯ್ ರಾವ್ : ಮನಸಿನ ಮಾತು
    ಪುನೀತ್ ರಾಜ್ ಕುಮಾರ್ : ಹುಡುಗರು
    ಯೋಗೀಶ್: ಹುಡುಗರು, ದೇವದಾಸ್, ಧೂಳ್
    ಶ್ರೀನಗರ ಕಿಟ್ಟಿ: ಹುಡುಗರು
    ಪಜ್ವಲ್ ದೇವರಾಜ್ : ಕೋಟೆ, ಮುರಳಿ ಮೀಟ್ಸ್ ಮೀರಾ
    ಯಶ್: ರಾಜಧಾನಿ, ಕಿರಾತಕ
    ಹರೀಶ್ ರಾಜ್: ಗನ್, ನಾವು ನಮ್ಮ ಹೆಂಡತಿಯರು
    ದುನಿಯಾ ವಿಜಯ್: ಜಾನಿ ಮೇರಾ ನಾಮ್, ಕಂಠೀರವ
    ಪ್ರೇಮ್ ಕುಮಾರ್ : ಧನ್ ಧನಾ ಧನ್, ಐಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೊಣ
    ಶ್ರುತಿ: ಶ್ರೀ ನಾಗಶಕ್ತಿ, ಪುಟ್ಟಕ್ಕನ ಹೈವೇ,

    ಸೋವು ನೋವು: ಟೈಗರ್ ಮಧು, ಕಾಂಚನಾ,

    ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಕೊಂಚ ಸುಧಾರಣೆ ಕಂಡು ಬಂದಿದೆ. ಆದರೆ, ಯಶಸ್ಸಿನ ರೇಟ್ ಹಾಗೆ ಇದೆ. ಕಳೆದ ವರ್ಷ ಆಪ್ತ ರಕ್ಷಕ ಮಾತ್ರ ಯಶಸ್ವಿ ಚಿತ್ರ ಎನಿಸಿತ್ತು. ಈ ಬಾರಿ ಕೆಂಪೇಗೌಡ ಹಾಗೂ ಹುಡುಗರು ಎರಡು ಚಿತ್ರಗಳು ಗೆದ್ದಿರುವುದು ಸಂತಸದ ವಿಷಯ. ಆದ್ರೆ 60ರಲ್ಲಿ ಎರಡೇ ಚಿತ್ರ ಗೆದ್ದಿರುವುದು ಹೇಳಿಕೊಳ್ಳುವ ವಿಷಯವಲ್ಲ. ಈ ಬಾರಿ ಹೊಸ ಹೊಸ ನಿರ್ದೇಶಕರ ಆಗಮನವಾಗಿದೆ. ನಿರ್ಮಾಪಕರ ಜೋಳಿಗೆ ಹಾಗೂ ಚಿತ್ರಗಳ ಗುಣಮಟ್ಟ ಮಾತ್ರ ಬರಿದಾಗಿದೆ.

    English summary
    Kannada Films 2011 Box office Success rate Half yearly report. Out of 60 odd movies only Hudugaru and Kempegowda are considered as run away hit movies. Here is a report on Kannada film industry in past six months
    Tuesday, June 21, 2016, 23:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X