For Quick Alerts
ALLOW NOTIFICATIONS  
For Daily Alerts

ನಮಿತಾ ಐ ಲವ್ ಯು ನೋಡಿ ಆದರೆ ಅನಾಸಿನ್ ಮರೀಬೇಡಿ

By * ಉದಯರವಿ
|

'ನಮಿತಾ ಐ ಲವ್ ಯು' ಚಿತ್ರವನ್ನು ನೋಡಲೇ ಬೇಕು ಎಂದು ಬಯಸುವುದಾದರೆ ಜೊತೆಗೆ ಒಂದು ಅನಾಸಿನ್ ಮಾತ್ರೆಯನ್ನೂ ಕೊಂಡೊಯ್ಯಿರಿ. ಯಾವುದಕ್ಕೂ ಮುಂಜಾಗ್ರತೆಗಾಗಿ ಒಂದು ಝಂಡುಬಾಮ್ ನಿಮ್ಮ ಜೇಬಿನಲ್ಲಿರಲಿ. ಪ್ರೇಮಿಗಳು ಕೂಡ ಲವ್ ಎಂಬ ಪದ ಕೇಳಿದರೆ ಸಾಕು ಕಿವಿಗೆ ಕಾದ ಸೀಸ ಸುರಿದಂತೆ ಓಡಿ ಹೋಗುವಷ್ಟರ ಮಟ್ಟಿಗೆ 'ನಮಿತಾ ಐ ಲವ್ ಯು' ಚಿತ್ರ ಯಶಸ್ವಿಯಾಗಿದೆ.

ಚಿತ್ರಕತೆಗೆ ಒಂದು ಲಂಗು ಲಗಾಮು ಇಲ್ಲದಂತೆ ಓಡಿಸಿದ್ದಾರೆ ನಿರ್ದೇಶಕ ಜಯಸಿಂಹ ರೆಡ್ಡಿ. ಕತೆ, ಚಿತ್ರಕತೆ,ಸಂಭಾಷಣೆ ಕಡೆಗೆ ಸಂಗೀತವನ್ನೂ ಅವರೆ ನುಡಿಸಿರುವ ಕಾರಣ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಲ್ಟಿ ಟ್ಯಾಲೆಂಟ್ ನಿರ್ದೇಶಕ ದೊರೆತಂದಾಗಿದೆ. ಆದರೆ ನಿಮಗೆ ಅವರ ಈ ಬಹುಮುಖ ಪ್ರತಿಭೆಯನ್ನು ಸಹಿಸಿಕೊಳ್ಳುವ ಸಹನೆಇರಬೇಕು ಅಷ್ಟೆ!

ಯೋಗ ಶಿಕ್ಷಕಿಯಾಗಿ Love ಕಾಲೇಜಿಗೆ ಎಂಟ್ರಿ ಕೊಡುತ್ತಾರೆ ಸುನಂದಾ (ನಮಿತಾ) ಮೇಡಂ. ಆದರೆ ಆ ಕಾಲೇಜು ಪಕ್ಕಾ ಲೋಕಲ್. ಡ್ರಗ್ಸ್, ಲವ್ವು, ಸೆಕ್ಸು ಹಾಳು ಮೂಳು ಎಂದು ವಿದ್ಯಾರ್ಥಿಗಳು ಹಳ್ಳಹಿಡಿದಿರುತ್ತಾರೆ. ನೀವೆಲ್ಲಾ ಒಳ್ಳೆ ಪರ್ಸೆಂಟೇಜ್ ತಗೊಂಡ್ರೆ ನೀವು ಕೇಳಿದ್ದನ್ನು ಕೊಡ್ತೀನಿ ಎಂದು ಸುನಂದಾ ಮೇಡಂ ವಿದ್ಯಾರ್ಥಿಗಳಿಗೆ ಪ್ರಾಮಿಸ್ ಮಾಡ್ತಾರೆ.

ಒಳಗೊಳಗೆ ಮಂಡಿಕ್ಕಿ ತಿನ್ನುತ್ತಿದ್ದ ಕೆಲವು ಪಡ್ಡೆ ವಿದ್ಯಾರ್ಥಿಗಳು ನಮಿತಾರೊಂದಿಗೆ ಏನೇನೋ ಕಲ್ಪಿಸಿಕೊಂಡು ಡಿಂಗು ಡಾಂಗ್ ಎಂದು ಡಾನ್ಸ್ ಮಾಡುತ್ತಾರೆ. ಕೊನೆಗೆ ವಿದ್ಯಾರ್ಥಿಗಳ ಆಸೆಯನ್ನು ಸುನಂದಾ ಮೇಡಂ ಈಡೇರುಸುತ್ತಾರಾ ಇಲ್ಲವೆ ಎಂಬುದೇ ಚಿತ್ರದ ಕತೆ. ಅಂದಹಾಗೆ Love ಕಾಲೇಜು ಎಂದರೆ Loyala Oriental Versatile Education College ಎಂದರ್ಥ. ಅದಕ್ಕೆ ಹೇಳಿದ್ದು ನಿರ್ದೇಶಕ ಮಲ್ಟಿಟ್ಯಾಲೆಂಟ್ ಎಂದು.

ಇತ್ತ ಸುನಂದಾ ಮೇಡಂ ವಿದ್ಯಾರ್ಥಿಗಳಿಗೆ ಆಸೆ ಹುಟ್ಟಿಸಿ ಅವರನ್ನು ಓದಿನಲ್ಲಿ ಮುಂದೆ ಬರುವಂತೆ ಮಾಡುತ್ತಾರೆ. ಇನ್ನೊಂದು ಕಡೆ ಮತ್ತೊಂದು ಲವ್ ಸ್ಟೋರಿ ದುರಂತದಲ್ಲಿ ಅಂತ್ಯವಾಗುತ್ತದೆ. ಇದು ಏನು ಎತ್ತ ಎಂಬುದನ್ನು ನೀವು ತೆರೆಯ ಮೇಲೆಯೇ ನೋಡಿ ಆನಂದಿಸಬೇಕು. ಆದರೆ ಅನಾಸಿನ್ ಗುಳಿಗೆ ಕೊಂಡೊಯ್ಯುವುದನ್ನು ಮರೆತರೋ ಕೆಟ್ಟಿರಿ. ಚಿತ್ರದ ಪ್ರಮುಖ ಹೈಲೈಟ್ ನಮಿತಾ ಡಾನ್ಸ್. ಅಬ್ಬಬ್ಬಾ ಕಣ್ಣಮುಂದೆ ಭೂತಗನ್ನಡಿ ಇಟ್ಟ ಅನುಭವ!

ಚಿತ್ರದ ಉಳಿದ ಪಾತ್ರವರ್ಗದಲ್ಲಿರುವ ಪೃಥ್ವಿರಾಜ್, ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ ಹಾಗೂ ಡಿಂಗ್ರಿ ನಾಗರಾಜ್ ಅವರಿಂದ ನಟನೆ ತೆಗೆಸುವಲ್ಲಿ ನಿರ್ದೇಶಕರು ಸಂಪೂರ್ಣ ಸೋತು ಸುಣ್ಣವಾಗಿದ್ದಾರೆ. ಕೆಲವೊಂದು ಕಡೆ ತುಟಿ ಚಲನೆಗೂ ಡೈಲಾಗ್ ಡೆಲಿವರಿಗೂ ಅಜಗಜಾಂತರ. ಛಾಯಾಗ್ರಹಣದ ಬಗ್ಗೆ ದಯವಿಟ್ಟು ಏನೂ ಕೇಳಬೇಡಿ. ಒಟ್ಟಾರೆಯಾಗಿ ನಾವು ಪದೇ ಪದೇ ವಿನಂತಿಸಿಕೊಳ್ಳುವುದೇನೆಂದರೆ ಈ ಚಿತ್ರ ತಪ್ಪದೆ ನೋಡಿ ಆದರೆ ಅನಾಸಿನ್ ಮರೆಯಬೇಡಿ.

ಈ ಚಿತ್ರಕ್ಕೆ ವಯಸ್ಕರ ಚಿತ್ರದ ಮುದ್ರೆ ಯಾಕೆ ಬಿತ್ತು, ಇದಕ್ಕೆ ಕಾರಣವಾದರೂ ಏನೂ, ನಮಿತಾ ಕನ್ನಡ ಚಿತ್ರದಲ್ಲಿ ಮುಂದೆಯೂ ನಟಿಸುತ್ತಾರಾ, ಅಥವಾ ಇದೇ ಅವರ ಕೊನೆಯ ಚಿತ್ರವೆ ಎಂಬ ಪ್ರಶ್ನೆಗಳು ನಮ್ಮನ್ನು ಕಡೆಗೂ ಕಾಡದೆ ಬಿಡುವುದಿಲ್ಲ. ಇದಕ್ಕೆಲ್ಲಾ ಒಂದೇ ಉತ್ತರ ಹೀಗೂ ಉಂಟೆ!?

English summary
Here is the review of Kannada movie Namitha I Love You. If you are a die-hard fan of Namitha, the diva from south, don't expect too much from this film.Our advise is families and sane people are advised to skip this insult to cinema.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more