For Quick Alerts
  ALLOW NOTIFICATIONS  
  For Daily Alerts

  ಸಾಲದ ಸುಳಿಯಲ್ಲಿ ದಂಡಂದಶಗುಣಂ ನಿರ್ಮಾಪಕ

  By * ದೀಕ್ಷಿತ್
  |

  'ದಂಡಂ ದಶಗುಣಂ' ಗಣೇಶ್ ಸಾಲದ ಹೊರೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ದಂಡಂ ದಶಗುಣಂ ಚಿತ್ರದ ವಿವಾದ ಸಂದರ್ಭದಲ್ಲಿ ರಮ್ಯಾಗೆ ಕೊಡಬೇಕಿದ್ದ ಒಂದಷ್ಟು ಲಕ್ಷವನ್ನು ಕೆಲವೇ ದಿನಗಳಲ್ಲಿ ಹಿಂದಿರುಗಿಸಿದ್ದು ನಿಮಗೆಲ್ಲಾ ಗೊತ್ತಿದೆ. ಇದೇ ರಮ್ಯಾ ಖಾಸಗಿ ವಾಹಿನಿಯೊಂದರ ಮುಂದೆ ಗೊಳ ಗೊಳ ಅಳಲು ಶುರುಮಾಡಿದಾಗ ಗಣೇಶ್ ಸಿಂಗಲ್ ಪೇಮೆಂಟ್‌ನಲ್ಲಿ ಮೂಟೆಗಟ್ಟಲೇ ದುಡ್ಡು ತಂದು ಅದೇ ವಾಹಿನಿಯ ಸ್ಟುಡಿಯೋದಲ್ಲಿ ಸುರಿದಿದ್ದನ್ನು ಹೆಚ್ಚಿನವರು ಮರೆತಿರಲಿಕ್ಕಿಲ್ಲ.

  ಹಾಗಾದರೆ ಆ ದುಡ್ಡು ಎಲ್ಲಿಂದ ಬಂತು? ಅದಕ್ಕೆ ಉತ್ತರ ಈಗ ಸಿಕ್ಕಿದೆ. ಗಣೇಶ್ ತತ್‌ಕ್ಷಣ ಆ ದುಡ್ಡನ್ನು ಟೀವಿ ರೈಟ್ಸ್ ದಂಧೆ ಮಾಡುವ ಮಹೇಶ್ ಕೊಥಾರಿ ಮತ್ತು ಒರಟ ಚಿತ್ರದ ನಿರ್ಮಾಪಕ ಮನೋಹರ್ ಅವರ ಬಳಿ ಕಾಡಿಬೇಡಿ ತಂದಿದ್ದು ಈಗ ಬೆಳಕಿಗೆ ಬಂದಿದೆ. ಈಗ ಗಣೇಶ್‌ಗೆ ಮಹೇಶ್ ಮತ್ತು ಮನೋಹರ್ ಕೊಡಬೇಕಾದ ಬಾಕಿ ವಸೂಲಿಗೆ ಬೆನ್ನುಬಿದ್ದಿದ್ದಾರೆ.

  ಗಣೇಶ್‌ಗೆ ಅವರ ನಂಬರ್‌ನಿಂದ ಕಾಲು ಬಂದರೆ ಕೂಡಲೇ ಸ್ವಿಚ್‌ಆಫ್ ಮಾಡಿಕೊಳ್ಳುವುದನ್ನು ರೂಢಿಮಾಡಿಕೊಂಡಿದ್ದಾರೆ! ಮನೋಹರ್ ಸುಮ್ಮನಿದ್ದರೂ ಕೊಥಾರಿ ನಯಾಪೈಸಕ್ಕೂ ಲೆಕ್ಕ ಇಡುವ ಗಿರಾಕಿ. ಟೀವಿ ರೈಟ್ಸ್ ಮಾರಿಯೇ ಕೋಟ್ಯಂತರ ರೂಪಾಯಿ ಬರಗಿಕೊಳ್ಳುವ ವ್ಯಕ್ತಿ. ಇದೇ ರೀತಿ ಗಣೇಶ್ ಇನ್ನೂ ಒಂದಷ್ಟು ಮಂದಿಯಿಂದ ಸಾಲ ಕೇಳಿದ್ದಾರೆ ಎಂಬ ಮಾಹಿತಿಯೂ ಇದೆ.

  ಇತ್ತ ಮಾಸ್, ಮಾಯಾ ಸೇರಿದಂತೇ ಒಂದಷ್ಟು ಚಿತ್ರಗಳಿಗೆ ಮುಹೂರ್ತ ಮಾಡುತ್ತಲೇ ಇದ್ದಾರೆ ಗಣೇಶ್! ಅದೇ ಗಣೇಶ್ ನಿರ್ಮಾಣದ ಜಗ್ಗೇಶ್ ಅಭಿನಯದ ಹಾಸಿಗೆ ಇದ್ದಷ್ಟು ಕಾಲ್ ಚಾಚು ಚಿತ್ರ ಎಂಟು ವರ್ಷವಾದರೂ ಇನ್ನೂ ಡಬ್ಬಾದಲ್ಲೇ ಇದೆ. ಹೇ ಸರಸು ಚಿತ್ರ ಮೂರು ವರ್ಷವಾದರೂ ಸೆಟೆದುನಿಂತಿಲ್ಲ! ಇತ್ತ ಗಣೇಶ್ ಪಾಟ್ನರ್ ಉಮೇಶ್ ಬಣಕಾರ್ ಕೂಡ ಸಾಕಪ್ಪಾ ಸಹವಾಸ ಎಂದು ಹಿಂದೆ ಸರಿದಿದ್ದಾರೆ! ಗಣೇಶಣ್ಣಾ, ಹಿಂಗಾದ್ರೆ ಕಷ್ಟಾ ಅಣ್ಣಾ.. .

  English summary
  Sources says that Kannada movie Dandam Dashagunam producer A Ganesh is facing financial crisis. Ganesh contended that he 
 made the full payment of Rs 32 lakh, including the loan, to Ramya, is in deep financial crunch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X