»   » 'ಉಪೇಂದ್ರ ಅತೃಪ್ತ ವ್ಯಕ್ತಿ' - ಸಾಧು ಕೋಕಿಲ ಕಾಮೆಂಟ್!

'ಉಪೇಂದ್ರ ಅತೃಪ್ತ ವ್ಯಕ್ತಿ' - ಸಾಧು ಕೋಕಿಲ ಕಾಮೆಂಟ್!

By Harshitha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ''ಇವತ್ತಿಗೂ ಏನೂ Satisfy ಆಗದೇ ಇರುವ ಒಬ್ಬ ಮನುಷ್ಯ ಅಂದ್ರೆ ಅದು ಉಪೇಂದ್ರ. ಅವರಿಗೆ satisfaction ಇಲ್ಲವೇ ಇಲ್ಲ'' - ಹೀಗಂತ ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಕಾಮೆಂಟ್ ಮಾಡಿದವರು ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಸಾಧು ಕೋಕಿಲ.

  ಅಷ್ಟಕ್ಕೂ ಸಾಧು ಕೋಕಿಲ ಈ ರೀತಿ ಕಾಮೆಂಟ್ ಮಾಡಲು ಕಾರಣ ಉಪೇಂದ್ರ ರವರ ವೃತ್ತಿಪರತೆ. ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ ಚಿತ್ರಗಳನ್ನ ನಿರ್ದೇಶನ ಮಾಡುವ ಉಪೇಂದ್ರ ಕೆಲಸದ ವಿಷಯದಲ್ಲಿ ಮಾತ್ರ ತೃಪ್ತರಾಗುವುದಿಲ್ಲವಂತೆ. [ವೀಕೆಂಡ್ ನಲ್ಲಿ ಬಹಿರಂಗವಾದ ಸಾಧು ಕೋಕಿಲ ನಿಜ ಬದುಕಿನ ಕಷ್ಟ-ನಷ್ಟ]

  ಉಪೇಂದ್ರ ನಿರ್ದೇಶನದ 'ಶ್' ಚಿತ್ರಕ್ಕೆ ಮೊದಲ ಬಾರಿ ಸಂಗೀತ ನೀಡಿದ್ದ ಸಾಧು ಕೋಕಿಲ, ಉಪೇಂದ್ರ ರವರ ವರ್ಕಿಂಗ್ ಸ್ಟೈಲ್ ಬಗ್ಗೆ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದೆ ಓದಿ....

  ಆರ್ಕೇಸ್ಟ್ರಾ ಶುರುವಾಗಿದ್ದು...

  ''ಆರ್ಕೇಸ್ಟ್ರಾ ನುಡಿಸುತ್ತಾ ನುಡಿಸುತ್ತಾ ಅಪ್ ಡೇಟ್ ಆಗ್ತಾ ಹೋದೆ. ಮೊದಲು ವಾದ್ಯಗಳನ್ನ ನುಡಿಸುತ್ತಾ ಇದ್ದೆ. ನಂತರ ಹಾಡುವುದಕ್ಕೆ ಶುರು ಮಾಡಿದೆ. ನಂತರ ನನ್ನದೇ ಒಂದು ಗುಂಪು ಮಾಡಿ ನನ್ನದೇ ಆರ್ಕೇಸ್ಟ್ರಾ ಶುರುಮಾಡಿದೆ. ಆ ನಂತರ ಮ್ಯೂಸಿಕ್ ಕಂಡಕ್ಟರ್ ಆದೆ'' - ಸಾಧು ಕೋಕಿಲ ['ವೀಕೆಂಡ್..' ಕಾರ್ಯಕ್ರಮಕ್ಕೆ ಸಾಧು ಕೋಕಿಲ ಪತ್ನಿ ಬರ್ಲಿಲ್ಲ! ಯಾಕ್ಗೊತ್ತಾ?]

  ವಿ.ಮನೋಹರ್ ಬಳಿ ಕೆಲಸ

  ''ವಿ.ಮನೋಹರ್ ಅವರಿಗೂ ನಾನು ಮ್ಯೂಸಿಕ್ ಕಂಡಕ್ಟರ್ ಆಗಿ ಕೆಲಸ ಮಾಡ್ತಿದ್ದೆ. 'ಜನುಮದ ಜೋಡಿ', 'ಜೋಡಿ ಹಕ್ಕಿ' ಚಿತ್ರಗಳಿಗೆಲ್ಲಾ ನಾನು ವಿ.ಮನೋಹರ್ ಗೆ ಮ್ಯೂಸಿಕ್ ಕಂಡಕ್ಟ್ ಮಾಡಿ ಕೊಡ್ತಿದ್ದೆ. ಅವರ ಬಳಿ ನಾನು ಕೀ ಬೋರ್ಡ್ ನುಡಿಸುತ್ತಿದ್ದೆ'' - ಸಾಧು ಕೋಕಿಲ [ಆತ್ಮಹತ್ಯೆ ಮಾಡಿಕೊಳ್ಳಲು ಸಾಧು ಕೋಕಿಲ ನಿರ್ಧರಿಸಿದ್ದು ಯಾಕೆ?]

  ಉಪೇಂದ್ರ ಪರಿಚಯ ಆಗಿದ್ದು...

  ''ವಿ.ಮನೋಹರ್ ಬಳಿ 'ಲವ್ ಟ್ರೇನಿಂಗ್' ಚಿತ್ರದ ಬಗ್ಗೆ ಉಪೇಂದ್ರ ಓಡಾಡುತ್ತಿದ್ದರು. 'ತರ್ಲೆ ನನ್ಮಗ' ಸಿನಿಮಾಗೆ ವಿ.ಮನೋಹರ್ ಮ್ಯೂಸಿಕ್ ಡೈರೆಕ್ಟರ್. ಅದಾದ ಮೇಲೆ ವಿ.ಮನೋಹರ್ ತುಂಬಾ ಬಿಜಿ ಆಗ್ಬಿಟ್ರು. ತುಂಬಾ ಸಿನಿಮಾಗಳು ಬಂತು ಅವರಿಗೆ. ಆ ಟೈಮ್ ನಲ್ಲಿ ಅವರು ಉಪೇಂದ್ರ ಅವರ 'ಶ್' ಸಿನಿಮಾಗೆ ಸಂಗೀತ ಮಾಡ್ಬೇಕಿತ್ತು. ಉಪೇಂದ್ರ ತುಂಬಾ ಕೇಳಿದರು. ಆದ್ರೆ, ಅವರಿಗೆ ಟೈಮ್ ಇರ್ಲಿಲ್ಲ. ಆಗ ನನ್ನನ್ನ ಉಪೇಂದ್ರ ರವರಿಗೆ ಇಂಟ್ರೊಡ್ಯೂಸ್ ಮಾಡಿದರು'' - ಸಾಧು ಕೋಕಿಲ [ಗಾಯಕ ಸಿ.ಅಶ್ವಥ್ ಬಗ್ಗೆ ಸಾಧು ಕೋಕಿಲ ಏನಂದ್ರು ಗೊತ್ತೇ?]

  'ಒಳ್ಳೆ ಕಂಪೋಸರ್'

  ''ಒಳ್ಳೆ ಕಂಪೋಸರ್, ಮಾಡಿಸು'' ಅಂತ ಉಪೇಂದ್ರ ರವರಿಗೆ ನನ್ನ ಮನೋಹರ್ ಪರಿಚಯ ಮಾಡಿಸಿದರು. ಆಮೇಲೆ ನಾನು ಕಂಪೋಸಿಂಗ್ ಶುರು ಮಾಡಿದೆ. ಒಬ್ಬ ಮ್ಯೂಸಿಕ್ ಡೈರೆಕ್ಟರ್ ಆದೆ. ನಾನು ಸಂಗೀತ ನಿರ್ದೇಶಕ ಆಗುವುದಕ್ಕೆ ಕಾರಣ ವಿ.ಮನೋಹರ್'' - ಸಾಧು ಕೋಕಿಲ

  ವಿ.ಮನೋಹರ್ ಏನಂತಾರೆ?

  ''ಹೆಸರು ಮಾತ್ರ ಸಾಧು. ಆದ್ರೆ ತುಂಬಾ ಕಿಲಾಡಿ. ಕೇಡಿ ಅಲ್ಲ ಗೊತ್ತು. ನನ್ನದೇ ನಿರ್ದೇಶನದ 'ಓ ಮಲ್ಲಿಗೆ' ಚಿತ್ರದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದಾರೆ. ನನ್ನ ಸಂಗೀತ ನಿರ್ದೇಶನದ ಸಿನಿಮಾಗಳಿಗೆ ಕೀ-ಬೋರ್ಡ್ ನುಡಿಸಿದ್ದಾರೆ. ನನಗೆ ಬಹಳ ಸಂತೋಷ. ನಿಮಗೆ ಯಶಸ್ಸು ಸಿಗಲಿ ಅಂತ ನಾನು ಹಾರೈಸುತ್ತೇನೆ'' - ವಿ.ಮನೋಹರ್

  ಉಪೇಂದ್ರಗೆ ಟ್ಯೂನ್ಸ್ ಇಷ್ಟ ಆಗ್ತಿರ್ಲಿಲ್ಲ!

  ''ಶ್' ಸಿನಿಮಾ ಟೈಮ್ ನಲ್ಲಿ ಉಪೇಂದ್ರ ಕೂಡ ಕಷ್ಟದಲ್ಲಿದ್ದರು. ಒಂದು ಬಾರಿ ಸಿನಿಮಾ ಆಗಲ್ಲ ಅಂತ ಬಿಟ್ಟು ಹೋಗಿದ್ರು. ನಾನು ಯಾವ ಟ್ಯೂನ್ ಕಂಪೋಸ್ ಮಾಡಿದ್ರೂ, ಅವರಿಗೆ ಇಷ್ಟ ಆಗ್ತಿರ್ಲಿಲ್ಲ'' - ಸಾಧು ಕೋಕಿಲ

  ಉಪೇಂದ್ರಗೆ ತೃಪ್ತಿ ಇಲ್ಲ!

  ''ಇವತ್ತಿಗೂ ಏನೂ Satisfy ಆಗದೇ ಇರುವ ಒಬ್ಬ ಮನುಷ್ಯ ಅಂದ್ರೆ ಅದು ಉಪೇಂದ್ರ. ಅವರಿಗೆ satisfaction ಇಲ್ಲವೇ ಇಲ್ಲ. ಒಂದು ಶಾಟ್ ತೆಗೆದ್ರೆ, ಇನ್ನೊಂದು ತೆಗೆಯೋಣ ಅಂತ ಏನಾದರೂ ಮಾಡ್ತಿರ್ತಾರೆ'' - ಸಾಧು ಕೋಕಿಲ

  ಆಕ್ಟಿಂಗ್ ಶುರು ಮಾಡಿದ್ದು!

  ''ಒಂದು ದಿನ ಮನೆಗೆ ಅಸಿಸ್ಟೆಂಟ್ ಗಳನ್ನ ಕಳುಹಿಸಿದ್ರು, 'ಸಾಂಗ್ ಚೆನ್ನಾಗಿಲ್ಲವಂತೆ ಅರ್ಜೆಂಟ್ ಬರಬೇಕಂತೆ' ಅಂತ. ನಾನು ಹೋದರೆ, ಯಾವುದೋ ಗೌನ್ ಹಾಕಿ, ಮೀಸೆ ಹಾಕಿ ಆಕ್ಟ್ ಮಾಡು ಅಂದರು. ಜಾನಿ ಲಿವರ್ ತರಹ ರಿಯಾಕ್ಷನ್ ಕೊಟ್ಟೆ. ಅದು ವರ್ಕೌಟ್ ಆಯ್ತು. ಅವತ್ತಿಂದ ಆಕ್ಟಿಂಗ್ ಕೂಡ ಶುರು'' - ಸಾಧು ಕೋಕಿಲ

  ಮುಸ್ತಫಾ...

  ''ಇವತ್ತಿಗೂ ನನ್ನ ಪ್ರತಿಯೊಬ್ಬರು ನನ್ನನ್ನ ಗುರುತಿಸುವುದು 'ಓ ಮಲ್ಲಿಗೆ' ಚಿತ್ರದ ಫೋಟೋಗ್ರಾಫರ್ ಮುಸ್ತಫಾ ಅಂತ. ಆ ಕ್ಯಾರೆಕ್ಟರ್ ನನಗೆ ತುಂಬಾ ಹೆಸರು ಕೊಡ್ತು'' - ಸಾಧು ಕೋಕಿಲ

  ಸಾಧು ಬಗ್ಗೆ ಉಪೇಂದ್ರ ಏನಂದ್ರು?

  ''ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ Multi-talented, Versatile ಆಕ್ಟರ್ ಅವರು. ಫಾಸ್ಟೆಸ್ಟ್ ಕೀ ಬೋರ್ಡ್ ಪ್ಲೇಯರ್ ಅಂತ ಹೆಸರು ಮಾಡಿದವರು. ನನ್ನ ಲೈಫ್ ನಲ್ಲಿ ಸಾಧು ರವರದ್ದು ತುಂಬಾ contribution ಇದೆ. ನಾವೆಲ್ಲಾ ಅವರನ್ನ ಸಾಧು ಮಹಾರಾಜ್ ಅಂತ ಗೌರವದಿಂದ ಕರೆಯುತ್ತೇವೆ. 'ಶ್' ಸಿನಿಮಾ ಹಿಟ್ ಆಗುವುದಕ್ಕೆ ಪ್ರಮುಖ ಕಾರಣ ಚಿತ್ರದ ಸಂಗೀತ. ನನ್ನ ಅದೃಷ್ಟ ಅವರು ನನ್ನ ಚಿತ್ರಕ್ಕೆ ಸಂಗೀತ ಮಾಡಿದ್ದು. ಜೊತೆಗೆ ಆಕ್ಟಿಂಗ್ ಕೂಡ ಮಾಡಿದ್ರು. ಅವಾಗ್ಲೇ ಗೊತ್ತಾಗಿದ್ದು, ಅವರು ಎಂತಹ ಗ್ರೇಟ್ ಆರ್ಟಿಸ್ಟ್ ಅಂತ'' - ಉಪೇಂದ್ರ

  'ಗಾಡ್ ಫಾದರ್' ಉಪೇಂದ್ರ

  ''ನನ್ನ ಜೀವನದಲ್ಲಿ ನಾನು ಸಂಗೀತ ನಿರ್ದೇಶಕ ಆಗಿದ್ದು, ನಟನೆ ಶುರು ಮಾಡಿದ್ದು, ನಿರ್ದೇಶಕ ಆಗಿದ್ದು ಉಪೇಂದ್ರ ರವರಿಂದ. ನನ್ನ ನಿಜವಾದ ಗಾಡ್ ಫಾದರ್ ಅಂದ್ರೆ ಉಪೇಂದ್ರ. ನನ್ನಲ್ಲಿ ಒಬ್ಬ ಕಲಾವಿದ ಇದಾನೆ ಅಂತ ಗುರುತಿಸಿ ಆಕ್ಟ್ ಮಾಡಿಸಿದ್ದು ಅವರೇ'' - ಸಾಧು ಕೋಕಿಲ

  ನಿರ್ದೇಶಕನಾಗಲು ಉಪ್ಪಿ ಕಾರಣ

  ''ರಕ್ತ ಕಣ್ಣೀರು' ಟೈಮ್ ನಲ್ಲಿ ಸಂಗೀತ ನಿರ್ದೇಶನ ಮಾಡುವುದಕ್ಕೆ ನಾನು ಹೋಗಿದ್ದು. ಅಲ್ಲಿ, ನನ್ನ ನಿರ್ದೇಶಕನಾಗಿ ಬಡ್ತಿ ಮಾಡಿದ್ದು ಉಪೇಂದ್ರ'' - ಸಾಧು ಕೋಕಿಲ

  English summary
  Kannada Actor, Music Director, Director, Singer Sadhu Kokila spoke about Actor, Director Real Star Upendra in Zee Kannada Channel's popular show Weekend With Ramesh.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more