For Quick Alerts
  ALLOW NOTIFICATIONS  
  For Daily Alerts

  'ಬೆಳ್ಳಿ ಹೆಜ್ಜೆ': 'ಜೂಲಿ' ಲಕ್ಷ್ಮಿ ಅವರ ಹಳೇ ನೆನಪುಗಳತ್ತ ಒಂದು ಇಣುಕು ನೋಟ

  By Suneetha
  |

  ಕನ್ನಡ ಚಿತ್ರರಂಗದಲ್ಲಿ ಸಾಧನೆಗೈದ ಗಣ್ಯರನ್ನು ಕರೆತಂದು, ಚಿತ್ರರಂಗದಲ್ಲಿ ಅವರು ನಡೆದು ಬಂದ ದಾರಿ ಮತ್ತು ಸಾಧನೆಗಳನ್ನು ಮೆಲುಕು ಹಾಕುವ ಅಪೂರ್ವ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯು 'ಬೆಳ್ಳಿ ಹೆಜ್ಜೆ' ಎಂಬುದಾಗಿ ಹಮ್ಮಿಕೊಳ್ಳುತ್ತದೆ.

  ಈ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಈ ಬಾರಿ ಕನ್ನಡ ಚಿತ್ರರಂಗದ 'ಜೂಲಿ' ಎಂದೇ ಖ್ಯಾತಿ ಗಳಿಸಿರುವ ಹಿರಿಯ ನಟಿ ಕಮ್ ಚತುರ್ಭಾಷಾ ತಾರೆ ಲಕ್ಷ್ಮಿ ಅವರು ಪಾಲ್ಗೊಂಡು ತಮ್ಮ ಹಳೆಯ ನೆನಪುಗಳ ಬುತ್ತಿ ಬಿಚ್ಚಿಡಲಿದ್ದಾರೆ.['ಬೆಳ್ಳಿಹೆಜ್ಜೆ': ಕನ್ನಡ ಚಿತ್ರರಂಗದಲ್ಲಿ ಸುಧಾರಾಣಿ ನಡೆದು ಬಂದ ಹಾದಿ]

  ಆಗಸ್ಟ್ 7, ಶನಿವಾರದಂದು ಸಂಜೆ 5 ಗಂಟೆಗೆ ಬೆಂಗಳೂರಿನ ಕುಮಾರ ಕೃಪಾ ರಸ್ತೆಯ ಗಾಂಧಿ ಭವನದಲ್ಲಿರುವ, ಮಹದೇವ ದೇಸಾಯಿ ಸಭಾಂಗಣದಲ್ಲಿ ಹಿರಿಯ ನಟಿ ಲಕ್ಷ್ಮಿ ಅವರ ಜೊತೆ 'ಬೆಳ್ಳಿ ಹೆಜ್ಜೆ' ಸಂವಾದ ಕಾರ್ಯಕ್ರಮವನ್ನು ಚಲನಚಿತ್ರ ಅಕಾಡೆಮಿ ಏರ್ಪಡಿಸಿದೆ.

  ಈ ಸಂಭ್ರಮದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಟ ಜೈ ಜಗದೀಶ್, ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರು ಪಾಲ್ಗೊಳ್ಳಲ್ಲಿದ್ದಾರೆ.[ನಟಿ ಲಕ್ಷ್ಮಿ ಕೊಟ್ಟ 'ತೊಂದರೆ' ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ ಸತ್ಯ]

  Karnataka Chalanachitra Academy 'Belli Hejje': Actress Lakshmi Guest

  ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೇ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಹಿರಿಯ ನಟಿ ಲಕ್ಷ್ಮಿ ಅವರ ಕುರಿತಾದ ಛಾಯಾಚಿತ್ರ ಪ್ರದರ್ಶನ ಹಾಗೂ 'ಕಿರು ಚಿತ್ರ' ಪ್ರದರ್ಶನವನ್ನು ಏರ್ಪಡಿಸಲಾಗಿದೆ.[ಚೆನ್ನೈ ಪ್ರವಾಹ; ಸಾವಿನ ಕೊನೆ ಕ್ಷಣಗಳನ್ನು ಕಂಡು ಕಣ್ಣೀರಿಟ್ಟಿದ್ದ ನಟಿ ಲಕ್ಷ್ಮಿ]

  English summary
  Belli - Hejje program organized by Karnataka Chalana Chitra Academy on 7th August 5 pm in Gandhi Bhavan Mahadev Desai Hall, Kumara Park Road Bengaluru. Kannada Actress Lakshmi will be guest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X