»   » ಈತ ಜಗತ್ತಿನ ಜನಮನ ಗೆದ್ದ ನಟ, ಗುರುತಿಸಿ ನೋಡೋಣ?

ಈತ ಜಗತ್ತಿನ ಜನಮನ ಗೆದ್ದ ನಟ, ಗುರುತಿಸಿ ನೋಡೋಣ?

Posted By:
Subscribe to Filmibeat Kannada

ಈ ಫೋಟೋದಲ್ಲಿರುವ ನಟ ಯಾರು ಅಂತ ಗುರುತಿಸಬಲ್ಲಿರಾ? ಯಾರು ಎಂಬುದು ಸ್ವಲ್ಪ ಕಷ್ಟವಾಗುತ್ತಿದೆಯಾ? ಅಥವಾ ಯಾರು ಅಂತ ಗೊತ್ತಾಗಿದ್ರೂ ಅವರೇನಾ ಎಂಬ ಅನುಮಾನ ಕಾಡುತ್ತಿದೆಯಾ? ಇವರು 'ಬಾಹುಬಲಿ' ಚಿತ್ರದಿಂದ ಜಗತ್ತಿನ ಜನರ ಮನಸ್ಸು ಗೆದ್ದವರು. ಭಾರತದ ಚಿತ್ರಜಗತ್ತಿನ ಕೀರ್ತಿ ಪತಾಕೆಯನ್ನ ವಿಶ್ವಾದ್ಯಂತ ಹಾರಾಡಿಸಿದವರು.[ಕಡೆಗೂ 'ಹ್ಞೂಂ' ಎಂದು ಕುತ್ತಿಗೆ ಆಡಿಸಿದ 'ಬಾಹುಬಲಿ' ಹೀರೋ ಪ್ರಭಾಸ್.!]

ಹೋಗ್ಲಿ ಬಿಡಿ, ಈ ನಟ ಯಾರು ಎಂದು ಗೆಸ್ ಮಾಡದೆ ಇರುವವರಿಗೆ ನಾವೇ ಹೇಳ್ತಿವಿ. ಇವರು ಬಾಹುಬಲಿ ನಟ ಪ್ರಭಾಸ್. ಈ ಫೋಟೋವನ್ನ ಸ್ವತಃ ಪ್ರಭಾಸ್ ಅವರೇ ಇನ್ಸ್ಟಾಗ್ರಾಮ್ (instagram) ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

Baahubali Actor Prabhas New Look

ಸದ್ಯ, ಯುಎಸ್ ನಲ್ಲಿದ್ದ ಪ್ರಭಾಸ್ ಭಾರತಕ್ಕೆ ಮರುಳಿದ್ದಾರೆ. ಈ ವೇಳೆ ಈ ಫೋಟೋವನ್ನ ವಿಮಾನದಲ್ಲಿ ಕ್ಲಿಕ್ಕಿಸಿರುವುದು ಎನ್ನಲಾಗುತ್ತಿದೆ. ಬಾಹುಬಲಿ ಚಿತ್ರಕ್ಕಾಗಿ ಉದ್ದನೆಯ ಕೂದಲು ಬಿಟ್ಕೊಂಡು ಸ್ಟೈಲಿಶ್ ಗಡ್ಡ ಬಿಟ್ಟಿದ್ದ ಪ್ರಭಾಸ್, ಈಗ ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ. ಇನ್ನು ಪ್ರಭಾಸ್ ಅಭಿನಯಿಸಲಿರುವ 'ಸಾಹೋ' ಚಿತ್ರದಲ್ಲಿ ಇದೇ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.[ಪ್ರಭಾಸ್ ಜೊತೆ ಮದುವೆ ಸುದ್ದಿ ಹಬ್ಬಿಸಿದವನಿಗೆ ಅನುಷ್ಕಾ ಫುಲ್ ಕ್ಲಾಸ್.!]

ಪ್ರಭಾಸ್ ಅವರ ಈ ಗೆಟಪ್ ನ್ನ ಕೆಲವರು ಇಷ್ಟಪಟ್ಟಿದ್ದರೇ, ಮತ್ತೆ ಕೆಲವರು ಇದು ಚೆನ್ನಾಗಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅದೇನೆ ಇರಲಿ, 'ಬಾಹುಬಲಿ'ಗಾಗಿ 5 ವರ್ಷ ತನ್ನನ್ನು ತಾನೆ ಮುಡಿಪಾಗಿಟ್ಟಿದ್ದ ನಟ ಈಗ ರಿಲೀಫ್ ಆಗಿ ಹೊಸ ಚಿತ್ರಗಳಿಗಾಗಿ ಗೆಟಪ್ ಬದಲಿಸುತ್ತಿದ್ದಾರೆ.['ಬಾಹುಬಲಿ' ಪ್ರಭಾಸ್ ಗೆ ಮನೆಯವರು ನೋಡಿರುವ ಹುಡುಗಿ ಇವರೇ?]

English summary
Prabhas' US holiday was his much needed break after he committed five years for Baahubali. Now, Prabhas has shed his bearded look from Baahubali and Looking Unrecognisable. See viral photo

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada