»   » 'ಬಾಹುಬಲಿ' ಪ್ರಭಾಸ್ ಗೆ ಮನೆಯವರು ನೋಡಿರುವ ಹುಡುಗಿ ಇವರೇ?

'ಬಾಹುಬಲಿ' ಪ್ರಭಾಸ್ ಗೆ ಮನೆಯವರು ನೋಡಿರುವ ಹುಡುಗಿ ಇವರೇ?

Posted By:
Subscribe to Filmibeat Kannada

'ಬಾಹುಬಲಿ' ಚಿತ್ರದ ಮೂಲಕ ವರ್ಲ್ಡ್ ವೈಡ್ ಸುದ್ದಿಯಾದ ನಟ ಪ್ರಭಾಸ್, ಈಗ ಮದುವೆ ವಿಚಾರಕ್ಕೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದಾರೆ. ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಮದುವೆ ವಿಚಾರದಂತೆ ಸೌತ್ ನಲ್ಲಿ ಪ್ರಭಾಸ್ ಮದುವೆ ವಿಚಾರ ಕೂಡ ಟಾಕ್ ಆಫ್ ದಿ ಟೌನ್ ಆಗಿದೆ.

ಪ್ರಭಾಸ್ ಅವರನ್ನ ಮದುವೆ ಆಗಲು ಸುಮಾರು 6000 ಸಾವಿರ ಹುಡುಗಿಯರು ಮುಂದೆ ಬಂದಿದ್ದರು ಎಂಬುದು ಹಳೇ ಸುದ್ದಿ. ಮತ್ತೊಂದೆಡೆ ಪ್ರಭಾಸ್, ಬಾಹುಬಲಿ ನಾಯಕಿ ಅನುಷ್ಕಾ ಶೆಟ್ಟಿ ಅವರೊಂದಿಗೆ ಪ್ರೀತಿಯಲ್ಲಿದ್ದಾರೆ. ಹೀಗಾಗಿ, ಬೇರೆ ಹುಡುಗಿಯರನ್ನ ಒಪ್ಪುತ್ತಿಲ್ಲವೆಂಬ ಅಂತೆ-ಕಂತೆಗಳು ಹರಿದಾಡುತ್ತಿದೆ.[ಎಷ್ಟು ಮದುವೆ ಪ್ರಪೋಸಲ್ ಗಳನ್ನ ಪ್ರಭಾಸ್ ರಿಜೆಕ್ಟ್ ಮಾಡಿರಬಹುದು ಹೇಳಿ ನೋಡೋಣ.. ]

ಇಷ್ಟೆಲ್ಲಾ ಸುದ್ದಿಗಳ ಮಧ್ಯೆ ಪ್ರಭಾಸ್ ಮದುವೆ ಆಗುವ ಹುಡುಗಿಯನ್ನ ಮನೆಯವರು ನಿಶ್ಚಯ ಮಾಡಿದ್ದಾರಂತೆ. ಖ್ಯಾತ ಉದ್ಯಮಿಯ ಮೊಮ್ಮಗಳನ್ನ ಯಂಗ್ ರೆಬೆಲ್ ಸ್ಟಾರ್ ವರಿಸಲಿದ್ದಾರಂತೆ. ಯಾರದು? ಮುಂದೆ ನೋಡಿ.....

ಪ್ರಭಾಸ್ ಗೆ ಹುಡುಗಿ ಫಿಕ್ಸ್!

'ಬಾಹುಬಲಿ' ನಟ ಪ್ರಭಾಸ್ ಮದುವೆ ಆಗುವ ಹುಡುಗಿಯನ್ನ ನಿಶ್ಚಯ ಮಾಡಲಾಗಿದೆಯಂತೆ. ಪ್ರಭಾಸ್ ಮದುವೆ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿದೆ. ಆದ್ರೆ, ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಕುಟುಂಬದವರು ಸೈಲಾಂಟ್ ಆಗಿ ಪ್ರಭಾಸ್ ಗೆ ವಧುವನ್ನ ಹುಡುಕಿದ್ದಾರಂತೆ.['ಬಾಹುಬಲಿ 2' ಸಕ್ಸಸ್ ನಂತರ ಪ್ರಭಾಸ್ ಬಗ್ಗೆ ಕೇಳಿಬಂದ ಹೊಸ ಸುದ್ದಿ!]

ಖ್ಯಾತ ಉದ್ಯಮಿ ಮೊಮ್ಮಗಳು

ರಾಶಿ ಸಿಮೆಂಟ್ ಮಾಲೀಕರಾದ ಭೂಪತಿ ರಾಜು ಅವರ ಮೊಮ್ಮಗಳನ್ನ ನಟ ಪ್ರಭಾಸ್ ಗೆ ನಿಶ್ಚಯ ಮಾಡಲಾಗಿದೆಯಂತೆ. ಅಧಿಕೃತವಾಗಿ ಈ ಮಾಹಿತಿ ಹೊರಬೀಳಬೇಕಾಗಿದೆ ಅಷ್ಟೇ.

ಮದುವೆ ಯಾವಾಗ?

ಹಿರಿಯ ನಟ ಕೃಷ್ಣಂ ರಾಜು, ಈಗಾಗಲೇ ಪ್ರಭಾಸ್ ಮದುವೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ. 2017ರ ಅಂತ್ಯ ಅಥವಾ 2018ರ ಆರಂಭದಲ್ಲಿ ಪ್ರಭಾಸ್ ಮದುವೆಯಾಗಲಿದ್ದಾರಂತೆ. ಹೀಗಾಗಿ, ಮದುವೆಗೆ ಎಲ್ಲ ತಯಾರಿಗಳು ಶುರುವಾಗಿದೆ ಎನ್ನಲಾಗುತ್ತಿದೆ.

ಅನುಷ್ಕಾ-ಪ್ರಭಾಸ್ ಕಥೆಯೇನು?

ಇನ್ನು ನಟ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅವರ ನಡುವೆ ಪ್ರೇಮಾಂಕರವಾಗಿದೆ, ಇವರಿಬ್ಬರು ಮದುವೆಯಾಗುವ ಸಾಧ್ಯತೆಯಿದೆ ಎಂಬ ಸುದ್ದಿಗಳು ಮಾಯಾನಗರಿಯಲ್ಲಿ ರೌಂಡ್ ಹೊಡಿತಿದೆ. ಆದ್ರೆ, ಇದೆಲ್ಲಾ ಕೇವಲ ವದಂತಿಗಳು ಎನ್ನಲಾಗಿದೆ.['ಬಾಹುಬಲಿ' ಜೋಡಿಯ ರಿಯಲ್ ಪ್ರೇಮ್ ಕಹಾನಿಗೆ ಸಾಕ್ಷಿ ಸಿಕ್ಕಿದೆ.!]

ಅನುಷ್ಕಾ ಶೆಟ್ಟಿ ಬೇಸರ

ಪ್ರಭಾಸ್ ಜೊತೆ ಲವ್ ವಿಚಾರಕ್ಕೆ ಸಂಬಂಧಪಟ್ಟಂತೆ ನಟಿ ಅನುಷ್ಕಾ ಶೆಟ್ಟಿ ಬೇಸರವಾಗಿದ್ದಾರಂತೆ. ಅನುಷ್ಕಾ ಎಲ್ಲೇ ಹೋದ್ರು ಈ ಪ್ರಶ್ನೆ ಎದುರಾಗುತ್ತಿರುವುದರಿಂದ ಮುಜುಗರಕ್ಕೆ ಒಳಗಾಗುತ್ತಿದ್ದಾರಂತೆ.

English summary
As Per the Latest Buzz, Prabhas is Likely to Marry a Bheemavaram-Based Businessman's Granddaughter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada