»   » ಕಡೆಗೂ 'ಹ್ಞೂಂ' ಎಂದು ಕುತ್ತಿಗೆ ಆಡಿಸಿದ 'ಬಾಹುಬಲಿ' ಹೀರೋ ಪ್ರಭಾಸ್.!

ಕಡೆಗೂ 'ಹ್ಞೂಂ' ಎಂದು ಕುತ್ತಿಗೆ ಆಡಿಸಿದ 'ಬಾಹುಬಲಿ' ಹೀರೋ ಪ್ರಭಾಸ್.!

Posted By:
Subscribe to Filmibeat Kannada

'ಬಾಹುಬಲಿ-2' ಸಿನಿಮಾ ಯದ್ವಾತದ್ವಾ ಹಿಟ್ ಆದ್ಮೇಲೆ, ಪ್ರಭಾಸ್ ಬಹುಬೇಡಿಕೆಯ ನಟನಾಗಿ ಬೆಳೆದಿದ್ದಾರೆ. ಬರೀ ಚಿತ್ರರಂಗದಲ್ಲಿ ಮಾತ್ರ ಅಲ್ಲ, ಜಾಹೀರಾತು ವಲಯದಲ್ಲಿಯೂ ಪ್ರಭಾಸ್ ಡಿಮ್ಯಾಂಡ್ ಹೆಚ್ಚಾಗಿದೆ.

ಅನೇಕ ಬ್ರ್ಯಾಂಡ್ ಗಳಿಗೆ ಪ್ರಚಾರ ರಾಯಭಾರಿ ಅಗುವ ಆಫರ್ ಗಳು ಪ್ರಭಾಸ್ ರವರನ್ನ ಹುಡುಕಿಕೊಂಡು ಬಂದಿದ್ವು. 'ಫೇರ್ ನೆಸ್' ಬ್ರ್ಯಾಂಡ್ ಒಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಲು ಪ್ರಭಾಸ್ ಗೆ ಬರೋಬ್ಬರಿ 18 ಕೋಟಿ ನೀಡಲು ಕಂಪನಿಯೊಂದು ರೆಡಿ ಇತ್ತು. ಅದನ್ನೆಲ್ಲ ರಿಜೆಕ್ಟ್ ಮಾಡಿದ್ದ ಪ್ರಭಾಸ್, ಈಗ ಕಡೆಗೂ ಬ್ರ್ಯಾಂಡ್ ಒಂದಕ್ಕೆ ಪ್ರಚಾರ ರಾಯಭಾರಿ ಆಗಲು 'ಹ್ಞೂಂ' ಎಂದಿದ್ದಾರೆ. ಮುಂದೆ ಓದಿರಿ...[ಬರೋಬ್ಬರಿ 18 ಕೋಟಿ ಗಿಟ್ಟಿಸುವ ಅವಕಾಶವನ್ನ ಎಡಗಾಲಿನಲ್ಲಿ ಒದ್ದ ಪ್ರಭಾಸ್.!]

ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗೆ ಪ್ರಭಾಸ್ ರಾಯಭಾರಿ

'ಜಿಯೋನಿ' ಸ್ಮಾರ್ಟ್ ಫೋನ್ ಗೆ ಪ್ರಚಾರ ರಾಯಭಾರಿ ಆಗಲು ನಟ ಪ್ರಭಾಸ್ ಒಪ್ಪಿಕೊಂಡಿದ್ದಾರೆ.

ಖಚಿತ ಮಾಹಿತಿ

'ಜಿಯೋನಿ' ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗೆ ಪ್ರಭಾಸ್ ಬ್ರ್ಯಾಂಡ್ ಅಂಬಾಸಿಡರ್ ಅಗಿದ್ದಾರೆ ಎಂದು ಸ್ವತಃ 'ಜಿಯೋನಿ' ಭಾರತದ ಸಿ.ಇ.ಓ ಹಾಗೂ ಎಂ.ಡಿ ಅರವಿಂದ್.ಆರ್.ವೋಹ್ರ ಖಚಿತ ಪಡಿಸಿದ್ದಾರೆ.

ಅಮೇರಿಕಾದಿಂದ ವಾಪಸ್ ಆದ ಪ್ರಭಾಸ್

'ಬಾಹುಬಲಿ-2' ಚಿತ್ರ ಸಕ್ಸಸ್ ಆದ ಬಳಿಕ ಸುಮಾರು ಒಂದು ತಿಂಗಳ ಕಾಲ ಅಮೇರಿಕಾದಲ್ಲಿ ವೆಕೇಷನ್ ಮೂಡ್ನಲ್ಲಿದ್ದ ಪ್ರಭಾಸ್ ಇದೀಗ ವಾಪಸ್ ಆಗಿದ್ದಾರೆ. ಮುಂದಿನ ಚಿತ್ರ 'ಸಾಹೋ' ತಯಾರಿಯಲ್ಲಿ ಪ್ರಭಾಸ್ ತೊಡಗಿದ್ದಾರೆ.

ಹೊಸ ಲುಕ್ ನೋಡಿದ್ರಾ.?

'ಸಾಹೋ' ಚಿತ್ರಕ್ಕಾಗಿ ಪ್ರಭಾಸ್ ತಾಳಿರುವ ಹೊಸ ಲುಕ್ ಇದು... ಬಾಲಿವುಡ್ ನ ಪ್ರಖ್ಯಾತ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್, ನಟ ಪ್ರಭಾಸ್ ಗಾಗಿ ಹೊಸ ಹೇರ್ ಸ್ಟೈಲ್ ಮಾಡಿದ್ದಾರೆ.

English summary
Tollywood Actor Prabhas finally agreed to become the Brand Ambassador of Gionee Smart phone.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada