ಪ್ರಭಾಸ್ ಜೊತೆ ಮದುವೆ ಸುದ್ದಿ ಹಬ್ಬಿಸಿದವನಿಗೆ ಅನುಷ್ಕಾ ಫುಲ್ ಕ್ಲಾಸ್.!
'ಅನುಷ್ಕಾ-ಪ್ರಭಾಸ್ ಜೋಡಿ ಇನ್ನೇನು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅತಿ ಶೀಘ್ರದಲ್ಲಿ ಇಬ್ಬರು ವಿವಾಹವಾಗಲಿದ್ದಾರೆ. ಇವರಿಬ್ಬರ ಜೋಡಿ 'ಮೇಡ್ ಫಾರ್ ಈಚ್ ಅದರ್' ಎಂಬ ಸುದ್ದಿಗಳು ದಿನಬೆಳಗಾದರೇ ಸಿನಿಮಾ ಲೋಕದಲ್ಲಿ ಬಿಸಿಬಿಸಿ ಚರ್ಚೆಯಾಗಿಬಿಟ್ಟಿದೆ.
ಇದರ ಪರಿಣಾಮ ನಟಿ ಅನುಷ್ಕಾ ಶೆಟ್ಟಿ ಎಲ್ಲೇ ಹೋದರು ಅವರಿಗೆ ಎದುರಾಗುವುದು ಒಂದೇ ಪ್ರಶ್ನೆ. ''ಪ್ರಭಾಸ್ ಮತ್ತು ನಿಮ್ಮ ಮಧ್ಯೆ ಲವ್ ಇದ್ಯಾಂತೆ? ಯಾವಾಗ ಮಧ್ವೆ'' ಎಂದು. ಇದರಿಂದ ಬೇಸರಗೊಂಡಿದ್ದ ಅನುಷ್ಕಾ ಈ ಸುದ್ದಿಯನ್ನ ಹರಡಿಸಿದ್ದು ಯಾರು ಎಂದು ಹುಡುಕಿಕೊಂಡು ಹೋಗಿದ್ದಾರೆ.['ಬಾಹುಬಲಿ' ಪ್ರಭಾಸ್ ಗೆ ಮನೆಯವರು ನೋಡಿರುವ ಹುಡುಗಿ ಇವರೇ?]
ಗಾಸಿಪ್ ಮೂಲವನ್ನ ಹುಡುಕಿಕೊಂಡು ಹೋದ ಅನುಷ್ಕಾ ಶೆಟ್ಟಿಗೆ ಅಚ್ಚರಿ ಕಾದಿತ್ತು. ಆದ್ರೂ, ಆ ವ್ಯಕ್ತಿಗೆ ಸಿಕ್ಕಾಪಟ್ಟೆ ಕ್ಲಾಸ್ ತಗೊಂಡು, ಮತ್ತೊಮ್ಮೆ ಹೀಗೆ ಮಾಡಿದ್ರೆ, ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾರಂತೆ. ಯಾರದು? ಮುಂದೆ ಓದಿ......

ಗಾಸಿಪ್ ರೂವಾರಿಗೆ ಅನುಷ್ಕಾ ಕ್ಲಾಸ್!
ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ಆಗ್ತಿದ್ದಾರೆ ಎಂಬ ಸುದ್ದಿಯನ್ನ ಸೃಷ್ಠಿಸಿದವನಿಗೆ ನಟಿ ಅನುಷ್ಕಾ ಫುಲ್ ಕ್ಲಾಸ್ ತಗೊಂಡಿದ್ದಾರಂತೆ. ಮತ್ತೊಮ್ಮೆ ಹೀಗೆ ಮಾಡಿದರೇ ಸರಿ ಇರಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದಾರಂತೆ.['ಬಾಹುಬಲಿ' ಜೋಡಿಯ ರಿಯಲ್ ಪ್ರೇಮ್ ಕಹಾನಿಗೆ ಸಾಕ್ಷಿ ಸಿಕ್ಕಿದೆ.!]

ಯಾರು 'ಆ' ವ್ಯಕ್ತಿ?
ಅಂದ್ಹಾಗೆ, ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮಧ್ಯೆ ಲವ್ ಇದೆ ಎಂಬ ವದಂತಿ ಹಬ್ಬಿಸಿದವನು ಬೇರೆ ಯಾರು ಅಲ್ಲ. ಸದಾ ಅನುಷ್ಕಾ ಶೆಟ್ಟಿ ಜೊತೆಯಲ್ಲೇ ಇರುವ ವ್ಯಕ್ತಿಯಂತೆ. ಆದ್ರೆ, ಖಚಿತವಾಗಿ ಅವರ ಬಗ್ಗೆ ವಿವರ ಬಹಿರಂಗಪಡಿಸಿದ ಅನುಷ್ಕಾ ಹಿಗ್ಗಾಮುಗ್ಗಾ ಜಾಡಿಸಿದ್ದಾರಂತೆ.[ಎಷ್ಟು ಮದುವೆ ಪ್ರಪೋಸಲ್ ಗಳನ್ನ ಪ್ರಭಾಸ್ ರಿಜೆಕ್ಟ್ ಮಾಡಿರಬಹುದು ಹೇಳಿ ನೋಡೋಣ..]

ವದಂತಿಯಿಂದ ಕೈತಪ್ಪಿತಾ ಅವಕಾಶ!
ಇನ್ನು ಮೂಲಗಳ ಪ್ರಕಾರ ಪ್ರಭಾಸ್ ಅಭಿನಯಿಸುತ್ತಿರುವ 'ಸಾಹೋ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಾಯಕಿ ಆಗುವ ಸಾಧ್ಯತೆ ಇತ್ತಂತೆ. ಆದ್ರೆ, ಈ ವದಂತಿಗಳಿಗೆ ಬ್ರೇಕ್ ಹಾಕುವ ಸಲುವಾಗಿ ಅನುಷ್ಕಾ ಅವರನ್ನ ಈ ಚಿತ್ರದಿಂದ ಕೈಬಿಡಲಾಗಿದೆಯಂತೆ.[ತೆಲುಗು ನಿರ್ಮಾಪಕರ ಜೊತೆ ಅನುಷ್ಕಾ ಶೆಟ್ಟಿ ಮದುವೆ! ಹೌದೇ.?]

'ಸಾಹೋ'ಗೆ ಪೂಜಾ ಹೆಗ್ಡೆ ನಾಯಕಿ!
ಪ್ರಭಾಸ್ ಅಭಿನಯದ 'ಸಾಹೋ' ಚಿತ್ರಕ್ಕೆ ನಾಯಕಿ ಆಗಿ ಅಂತಿಮ ಕ್ಷಣದವರೆಗೂ ಅನುಷ್ಕಾ ಶೆಟ್ಟಿ ಹೆಸರೆ ಕೇಳಿ ಬರುತ್ತಿತ್ತು. ಆದ್ರೀಗ, ಅನುಷ್ಕಾ ಬದಲಿಗೆ ಪೂಜಾ ಹೆಗಡೆಗೆ ಪ್ರಭಾಸ್ ಜೊತೆ ನಟಿಸುವ ಅವಕಾಶ ಸಿಕ್ಕಿದೆಯಂತೆ.

ಪ್ರಭಾಸ್ ಎಲ್ಲಿದ್ದಾರೆ?
ಸದ್ಯ, ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ನಡುವಿನ ಗಾಸಿಪ್ ಗಳಿಗೆ ಅನುಷ್ಕಾ ತಲೆ ಕೆಡಿಸಿಕೊಂಡಿದ್ದಾರೆ. ಆದ್ರೆ, ಯುಎಸ್ ಗೆ ಪ್ರವಾಸಕ್ಕೆ ಹೋಗಿರುವ ಪ್ರಭಾಸ್ ಸಮ್ಮರ್ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಜೂನ್ 5 ರಂದು ಭಾರತಕ್ಕೆ ಬರಲಿದ್ದು 'ಸಾಹೋ' ಚಿತ್ರದ ಶೂಟಿಂಗ್ ಶುರು ಮಾಡಲಿದ್ದಾರಂತೆ.


Click it and Unblock the Notifications











