'ಬಂಗಾರದ ಮನುಷ್ಯ'ನಿಗೆ ಆತಂಕವಿಲ್ಲ: ಮೇ 19ರಂದೇ ರಿಲೀಸ್
ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನಲೆ, ಇಂದು ಮಧ್ಯಾಹ್ನ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಅದಕ್ಕೆ ಪುಷ್ಠಿ ಕೊಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಕೂಡ ಹಬ್ಬಿದ್ದವು. ಕೊನೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯರು ಮತ್ತು ನಟ ಶಿವರಾಜ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಪಾರ್ವತಮ್ಮ ಅವರ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದರು.[ಅಮ್ಮನ ಆರೋಗ್ಯ ಸ್ಥಿತಿ ವಿವರಿಸಿದ ನಟ ಶಿವರಾಜ್ ಕುಮಾರ್]
ಈ ಮಧ್ಯೆ ನಟ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ಬಿಡುಗಡೆಯಾಗುವುದು ಅನುಮಾನ ಎಂಬ ಮಾತುಗಳು ಕೇಳಿಬಂದವು. ಆದ್ರೆ, ಚಿತ್ರಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲ. ನಿಗಧಿಯಾಗಿರುವಂತೆ ಸಿನಿಮಾ ನಾಳೆ (ಮೇ 19) ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.[ಗಾಂಧಿನಗರದಲ್ಲಿ ದಾಖಲೆ ನಿರ್ಮಿಸಿದ ಶಿವಣ್ಣನ ಕಟೌಟ್]

ಮತ್ತೊಂದೆಡೆ ಪಾರ್ವತಮ್ಮ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಇದರಿಂದ ಸಿನಿಮಾಗೆ ತೊಂದರೆಯಾಗುವುದಿಲ್ಲ ಎನ್ನಲಾಗಿದೆ. ಅಂದ್ಹಾಗೆ, 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ನಾಳೆ (ಮೇ 19) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯೋಗಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹ್ಯಾಟ್ರಿಕ್ ಹೀರೋ ಎನ್.ಆರ್.ಐ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[ಜೂನಿಯರ್ 'ಬಂಗಾರದ ಮನುಷ್ಯ'ನಿಗೆ ಶುಭ ಹಾರೈಸಿದ ಜಗ್ಗೇಶ್]
ತಮಿಳು ನಟಿ ವಿದ್ಯಾ ಪ್ರದೀಪ್ ಚಿತ್ರದ ನಾಯಕಿಯಾಗಿದ್ದು, ವಿಶಾಲ್ ಹೆಗಡೆ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಿವರಾಂ, ಹೊನ್ನವಳ್ಳಿ ಕೃಷ್ಣ ಮುಂತಾದವರು ಅಭಿನಯಿಸಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತವಿದ್ದು, ಜೈ ಆನಂದ್ ಛಾಯಾಗ್ರಹಣ, ಡಾ.ಕೆ ರವಿವರ್ಮ ಮತ್ತು ಮಾಸ್ ಮಾದ ಸ್ಟಂಟ್ಸ್ ಚಿತ್ರಕ್ಕಿದೆ.


Click it and Unblock the Notifications











