»   » ಮದುವೆ ಹುಡುಗನಾಗಿ ರಶ್ಮಿಕಾಗೆ 'ಚಮಕ್' ಕೊಟ್ಟ ಗಣೇಶ್

ಮದುವೆ ಹುಡುಗನಾಗಿ ರಶ್ಮಿಕಾಗೆ 'ಚಮಕ್' ಕೊಟ್ಟ ಗಣೇಶ್

Posted By:
Subscribe to Filmibeat Kannada

ನಟ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಈಗ 'ಚಮಕ್' ಜೋಡಿ ಎನಿಸಿಕೊಂಡಿದ್ದಾರೆ. 'ಚಮಕ್' ಚಿತ್ರದ ಅನೇಕ ಫೋಟೋಗಳು ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡಿದೆ. ಇದೀಗ ಚಿತ್ರದ ಹೊಸದೊಂದು ಫೋಟೋ ರಿವಿಲ್ ಆಗಿದೆ.

ಗಣೇಶ್ ಇಲ್ಲಿ ಮದುವೆ ಹುಡುಗನಾಗಿ ಮಿಂಚಿದ್ದಾರೆ. ಬಿಳಿ ಶರ್ಟ್, ಪಂಚೆ, ಪೇಟ ತೊಟ್ಟು ಥೇಟ್ ಮದುಮಗನಾಗಿ ಕಂಗೊಳಿಸಿದ್ದಾರೆ. ಅಂದ್ಹಾಗೆ, 'ಚಮಕ್' ಸಿನಿಮಾದಲ್ಲಿ ಗಣೇಶ್ ಡಿಫ್ರೆಂಟ್ ಲುಕ್ ಗಳಲ್ಲಿ ಎಂಟ್ರಿ ಕೊಡುತ್ತಿದ್ದು, ಈ ಹಿಂದಿನ ಸಿನಿಮಾಗಳಿಗಿಂತ ಇನ್ನಷ್ಟು ಸ್ಟೈಲಿಶ್ ಆಗಿ ಮಿಂಚಲಿದ್ದಾರೆ.[ಕಣ್ಣು ಕುಕ್ಕುತ್ತಿದೆ 'ಚಮಕ್' ಜೋಡಿಯ ಸ್ಟೈಲಿಶ್ ಲುಕ್]

Ganesh's Chamak Kannada Movie New look out

'ಚಮಕ್' ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದು, ಇದು ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಆಗಿದೆಯಂತೆ. ಮೊದಲ ಬಾರಿಗೆ ಸುನಿ ನಿರ್ದೇಶನದ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಹಾಡುಗಳ ಮೇಲೆ ಕೂಡ ನಿರೀಕ್ಷೆ ಹೆಚ್ಚಿದೆ.[ಗೋಲ್ಡನ್ ಸ್ಟಾರ್ ಗಣೇಶ್ ಗೆ ಹೊಸ ಬಿರುದು: ಏನಿರಬಹುದು ಹೇಳಿ.?]

Ganesh's Chamak Kannada Movie New look out

'ಚಮಕ್' ಸಿನಿಮಾದಲ್ಲಿ ಗಣೇಶ್ ಮತ್ತು ರಶ್ಮಿಕಾ ಹೊಸ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ಜೋಡಿ ಮೇಲೆ ಈಗಾಗಲೇ ಎಕ್ಸ್ ಪೆಕ್ಟೇಶನ್ ಹುಟ್ಟುಕೊಂಡಿದ್ದು, ಗೋಲ್ಡನ್ ಸ್ಟಾರ್ ಅಭಿಮಾನಿಗಳು ಕಾಯುವಂತಾಗಿದೆ.[ವಿಮರ್ಶೆ: ಗಣೇಶ 'ಪಟಾಕಿ'ಯಲ್ಲಿ ನಗುವಿನ ಸದ್ದೇ ಹೆಚ್ಚು]

English summary
Goldan Star Ganesh starrer Kannada Movie 'chamak' new look poster is out. The movie is direted by suni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada