»   » ಟ್ರೈಲರ್: ಖಾಕಿ ಖದರ್ ನಲ್ಲಿ ಗಣೇಶ್ ಹೊಡೆದ 'ಪಟಾಕಿ'

ಟ್ರೈಲರ್: ಖಾಕಿ ಖದರ್ ನಲ್ಲಿ ಗಣೇಶ್ ಹೊಡೆದ 'ಪಟಾಕಿ'

Posted By:
Subscribe to Filmibeat Kannada

'ಶ್ರಾವಣಿ ಸುಬ್ರಮಣ್ಯ' ಅಂತಹ ಹಿಟ್ ಚಿತ್ರವನ್ನ ಸಿನಿ ಪ್ರಿಯರಿಗೆ ನೀಡಿದ ನಿರ್ದೇಶಕ ಮಂಜು ಸ್ವರಾಜ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ 'ಪಟಾಕಿ' ಚಿತ್ರ ನಿರ್ದೇಶನ ಮಾಡುವ ಬಗ್ಗೆ ಹೇಳಿ ವರ್ಷಕ್ಕಿಂತ ಹೆಚ್ಚಿನ ದಿನಗಳೇ ಆಯಿತು. ಎಲ್ಲೂ 'ಪಟಾಕಿ' ಸೌಂಡೇ ಆಗುತ್ತಿಲ್ಲವಲ್ಲ ಎಂದು ಪ್ರೇಕ್ಷಕರು ಪಿಸುಗುಟ್ಟುತ್ತಿದ್ದರು. ಈಗ ಇದಕ್ಕೆಲ್ಲ ಮಂಜು ಸ್ವರಾಜ್ ಬ್ರೇಕ್ ಹಾಕಿದ್ದಾರೆ.[ಪ್ರೇಮಿಗಳ ದಿನಕ್ಕೆ' ಸ್ಪೆಷಲ್ ಗಿಫ್ಟ್ ಕೊಟ್ಟ 'ಮುಗುಳುನಗೆ' ಚಿತ್ರತಂಡ]

ಯಾಕಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರನ್ಯ ರಾವ್ ಅಭಿನಯದ 'ಪಟಾಕಿ' ಚಿತ್ರದ ಅಫೀಶಿಯಲ್ ಟ್ರೈಲರ್ ಬಿಡುಗಡೆ ಆಗಿದೆ. ಇದೇ ಮೊಟ್ಟ ಮೊದಲ ಬಾರಿಗೆ ಖಾಕಿ ಗೆಟಪ್ ಧರಿಸಿರುವ ಗಣೇಶ್ ಖದರ್ ಮಾಸ್ ಪ್ರೇಕ್ಷಕರಿಗೆ ಆಕರ್ಷಿಸುವಲ್ಲಿ ಯಾವುದೇ ಸಂಶಯವಿಲ್ಲ.


Kannada Actor Ganesh Starrer 'Pataki' movie Official Trailer

ಗಣೇಶ್ ಖಾಕಿ ಖದರ್ ನಲ್ಲಿ ಅಭಿನಯಿಸಿದ್ದರೂ ಟ್ರೈಲರ್ ನಲ್ಲಿರುವ 'ಪಟಾಕಿ ಬ್ಯುಸಿನೆಸ್ ಮಾಡಿಕೊಂಡೆ ಫೀಲ್ಡ್ ಗೆ ಎಂಟ್ರಿ ಕೋಟ್ಟೋನು ನಾನು. ಪಟಾಕಿನು ನಂದೇ. ಸೌಂಡು ನಂದೇ' ಎಂಬ ಖಡಕ್ ಡೈಲಾಗ್ ಚಿತ್ರದ ಮನರಂಜನೆಯ ಬಗ್ಗೆ ಕ್ರೇಜ್ ಹೆಚ್ಚಿಸಿದೆ.[ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ 'ಆರೆಂಜ್']


Kannada Actor Ganesh Starrer 'Pataki' movie Official Trailer

ಇನ್ನು 'ಪಟಾಕಿ' ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಸಹ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಕುರಿ ಪ್ರತಾಪ್, ರಾಕ್ ಲೈನ್ ಸುಧಾಕರ್ ಮತ್ತು ಇತರೆ ತಾರಾಬಳಗವಿದೆ. 'ಪಟಾಕಿ' ಚಿತ್ರ ತೆಲುಗು ಹಿಟ್ ಮೂವಿ ನಂದಮುರಿ ಕಲ್ಯಾಣ್ ರಾಮ್ ಅಭಿನಯದ 'ಪಟಾಸ್' ರೀಮೇಕ್.['ಮುಗುಳುನಗೆ' ಚಿತ್ರಕ್ಕಾಗಿ ಹೇಗಿದ್ದ ಗಣೇಶ್ ಹೇಗಾದ್ರೂ ನೋಡಿ!]


ಮಂಜು ಸ್ವರಾಜ್ ನಿರ್ದೇಶನದ 'ಪಟಾಕಿ' ಚಿತ್ರವನ್ನು ಎಸ್ ವಿ ಬಾಬು ಅವರು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ವಿಕ್ರಮ್ ಸುಧಾಕರ್ ಸ್ಟಂಟ್ಸ್, ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ.

English summary
Kannada Actor Ganesh Starrer 'Pataki' movie Official Trailer released Yesterday (April 2).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada