»   » 'ಮುಗುಳುನಗೆ' ಚಿತ್ರಕ್ಕಾಗಿ ಹೇಗಿದ್ದ ಗಣೇಶ್ ಹೇಗಾದ್ರೂ ನೋಡಿ!

'ಮುಗುಳುನಗೆ' ಚಿತ್ರಕ್ಕಾಗಿ ಹೇಗಿದ್ದ ಗಣೇಶ್ ಹೇಗಾದ್ರೂ ನೋಡಿ!

Written By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ 'ಮುಗುಳುನಗೆ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ಹೀಗಿರುವಾಗ ಗಣೇಶ್ ಅವರ ಹೊಸ ಲುಕ್ ಬಹಿರಂಗಪಡಿಸಿದ್ದು, ಮತ್ತಷ್ಟು ನಿರೀಕ್ಷೆ ಜಾಸ್ತಿ ಆಗಿದೆ.

ಇಷ್ಟು ದಿನ 'ಮುಗುಳುನಗೆ' ಚಿತ್ರದಲ್ಲಿ ಗಣೇಶ್ ಅವರ ಸ್ಟೈಲಿಶ್ ಲುಕ್ ಗಳನ್ನ ನೋಡಿದ್ದ ನಿಮಗೆ, ಈಗೊಂದು ಹೊಸ ಗೆಟಪ್ ರಿವಿಲ್ ಆಗಿದೆ. ಕಣ್ಣಿಗೆ ಕನ್ನಡಕ ಹಾಕ್ಕೊಂಡು, ಶಾರ್ಟ್ ಹೇರ್ ಸ್ಟೈಲ್ ನಲ್ಲಿ ಗೋಲ್ಡನ್ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನ ನೋಡುತ್ತಿದ್ದರೇ, ಒಮ್ಮೆ ದೇವದಾಸ ನೆನಪಾಗುವುದಂತೂ ಗ್ಯಾರೆಂಟಿ.[ಫೋಟೋ ನೋಡಿ: ಸ್ಟೈಲಿಶ್ ಆಗಿದೆ ಗಣೇಶ್ 'ಮುಗುಳ್ನಗೆ']

Ganesh Starring 'Mugulunage' Movies New Look Release

ಅಂದ್ಹಾಗೆ, 'ಮುಗುಳುನಗೆ' ಚಿತ್ರವನ್ನ ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ. ಗಾಳಿಪಟ ಚಿತ್ರದ ನಂತರ ಗಣೇಶ್ ಮತ್ತು ಭಟ್ಟರು ಮತ್ತೆ ಒಟ್ಟಾಗಿ ಮಾಡುತ್ತಿರುವ ಸಿನಿಮಾ 'ಮುಗುಳುನಗೆ'.['ಪ್ರೇಮಿಗಳ ದಿನಕ್ಕೆ' ಸ್ಪೆಷಲ್ ಗಿಫ್ಟ್ ಕೊಟ್ಟ 'ಮುಗುಳುನಗೆ' ಚಿತ್ರತಂಡ]

Ganesh Starring 'Mugulunage' Movies New Look Release

ಇನ್ನೂ ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ 'ಸಿದ್ಧಾರ್ಥ್' ಖ್ಯಾತಿಯ ಅಪೂರ್ವ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ನಾಯಕಿಯಾಗಿ ಅಮೂಲ್ಯ ಕಾಣಿಸಿಕೊಂಡಿದ್ದರು, ಆದ್ರೆ, ಅಮೂಲ್ಯ ಮದುವೆಯ ತಯಾರಿಯಲ್ಲಿರುವುದ್ರಿಂದ ಆ ಜಾಗಕ್ಕೆ ಹೊಸ ನಾಯಕಿಯ ಎಂಟ್ರಿ ಆಗಿದೆ. ಹೀಗಾಗಿ, ಅಮೂಲ್ಯ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರಂತೆ. ಉಳಿದಂತೆ ಜೊತೆಯಲ್ಲಿ 'ಕ್ರೇಜಿಬಾಯ್' ಚಿತ್ರದ ನಾಯಕಿ ಆಶಿಕಾ, ಮತ್ತು ನಿಖಿತಾ ನಾರಾಯಣ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.[ಮದುವೆ ನಿಕ್ಕಿ ಆಯ್ತು: ನಟಿ ಅಮೂಲ್ಯ 'ಮುಗುಳ್ನಗೆ' ಬಿಟ್ಟಾಯ್ತು.!]

'ಮುಗುಳುನಗೆ' ಚಿತ್ರವನ್ನ ಸೈಯದ್ ಸಲಾಂ ನಿರ್ಮಾಣ ಮಾಡುತ್ತಿದ್ದು, ಯೋಗರಾಜ್ ಭಟ್ ಹಾಗೂ ಗಣೇಶ್ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದು, ಜಯಂತ್ ಕಾಯ್ಕಿಣಿ ಹಾಗೂ ಭಟ್ ಅವರು ಸಾಹಿತ್ಯ ಬರೆಯಲಿದ್ದಾರೆ.

English summary
Ganesh starring 'Mugulunage' Movies New Look Release. The Movie Directed by Yogaraj Bhat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada