For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ 'ಆರೆಂಜ್'

  By Bharath Kumar
  |

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಪಟಾಕಿ' ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಯೋಗರಾಜ್ ಭಟ್ ನಿರ್ದೇಶನ 'ಮುಗುಳುನಗೆ' ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಮಧ್ಯೆ ಸಿಂಪಲ್ ಸುನಿ ಜೊತೆ 'ಚಮಕ್' ಅಂತಹ ಸಿನಿಮಾವೊಂದನ್ನ ಮಾಡಲಿದ್ದಾರಂತೆ. ಇನ್ನೂ 'ಗಾಳಿಪಟ-2' ಚಿತ್ರಕ್ಕೆ ಗಣೇಶ್ ಸಿದ್ದವಾಗುತ್ತಿದ್ದಾರೆ ಎನ್ನಲಾಗುತ್ತಿದೆ.

  ಇಷ್ಟೇಲ್ಲಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಗಣೇಶ್ ಅವರು, ಇದೀಗ 'ಆರೆಂಜ್' ಚಿತ್ರವನ್ನ ಸೈಲಾಂಟ್ ಆಗಿ ಕೈಗೆತ್ತಿಕೊಂಡಿದ್ದಾರೆ. ಹೌದು, 'ಜೂಮ್' ಖ್ಯಾತಿಯ ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಗಣೇಶ್ ಹೊಸ ಚಿತ್ರವನ್ನ ಶುರು ಮಾಡಿದ್ದು, ಈ ಚಿತ್ರಕ್ಕೆ 'ಆರೆಂಜ್' ಎಂದು ಟೈಟಲ್ ಕೂಡ ಫಿಕ್ಸ್ ಆಗಿದೆ.[ಗಣೇಶ್-ಭಟ್ ಕಾಂಬಿನೇಷನ್ ನಲ್ಲಿ 'ಗಾಳಿಪಟ-2' ಬರಲಿದೆ.. ನಿರೀಕ್ಷಿಸಿ..]

  ಇತ್ತೀಚೆಗಷ್ಟೇ 'ಶಿರಡಿ ಸಾಯಿಬಾಬ ಮಂದಿರ'ದಲ್ಲಿ 'ಆರೆಂಜ್' ಚಿತ್ರಕ್ಕೆ ಪೂಜೆ ಮಾಡಿಸಿದ್ದಾರೆ. ಇಂದು (ಫೆಬ್ರವರಿ 11) ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರ ವಿವಾಹ ಮಹೋತ್ಸವ ಹಿನ್ನಲೆ ಸ್ವತಃ ಗಣೇಶ್ ಅವರೇ ಈ ಸುದ್ದಿಯನ್ನ ಅನೌನ್ಸ್ ಮಾಡಿದ್ದಾರೆ.['ಮುಗುಳುನಗೆ'ಗೆ ಪಾಂಡಿಚೇರಿಯಲ್ಲಿ ಮಳೆ ಕಾಟ!]

  ಅಂದ್ಹಾಗೆ, ಈ ಚಿತ್ರವನ್ನ ನಮ್ಮ ಸಿನಿಮಾ ಬ್ಯಾನರ್ ಅಡಿಯಲ್ಲಿ ನವೀನ್ ಜಿ ಎಸ್ ಅವರು ನಿರ್ಮಾಣ ಮಾಡುತ್ತಿದ್ದು, ಆದಷ್ಟೂ ಬೇಗ ಚಿತ್ರೀಕರಣವನ್ನ ಪ್ರಾರಂಭಿಸಲಿದೆ.

  English summary
  After 'Zoom', Prashanth Raj is all set to Direct Ganesh once again in a new film called 'Orange'. The film is being produced by Naveen G S under the Nimma Cinema banner.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X