»   » ಒಂದೊಂದು ಹನಿಯು ಅತ್ಯಮೂಲ್ಯ.. ನೀರನ್ನು ಕಾಳಜಿಯಿಂದ ಬಳಸಿ: ಯಶ್

ಒಂದೊಂದು ಹನಿಯು ಅತ್ಯಮೂಲ್ಯ.. ನೀರನ್ನು ಕಾಳಜಿಯಿಂದ ಬಳಸಿ: ಯಶ್

Posted By:
Subscribe to Filmibeat Kannada

ಬರದ ನಾಡಿನ ಜನತೆಗೆ ಕುಡಿಯುವ ನೀರಿನ ನೆರವಿಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ 'ಯಶೋಮಾರ್ಗ ಫೌಂಡೇಶನ್' ಮೂಲಕ ಸ್ಪಂದಿಸುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ನಟನೆಯ ಜೊತೆ ಸದಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಯಶ್ ಈಗ ಜನರಿಗೆ ನೀರಿನ ಅಭಾವದ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.[ದಾಹ ತೀರಿಸಿ ಉತ್ತರ ಕರ್ನಾಟಕ ಜನತೆಯ ಹೃದಯ ಗೆದ್ದ ಯಶ್]

ರೈತರ ಪರ ಸದಾ ನಿಂತಿರುವ ಯಶ್, ಈಗಲು 'ಯಶೋಮಾರ್ಗ ಫೌಂಡೇಶನ್' ಮೂಲಕ ನೀರಿಲ್ಲದ ಊರುಗಳಿಗೆ ನೀರು ಪೂರೈಕೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಅದರ ಜೊತೆಗೆ ಈಗ ಜನರಲ್ಲಿ ನೀರಿನ ಅಭಾವದ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.

ಸೇವ್ ವಾಟರ್

"ಹತ್ತು ವರ್ಷಗಳಲ್ಲಿ ಎಂದೂ ಕಂಡಿರದ ಬರ ಪರಿಸ್ಥಿತಿಯನ್ನು ಇಂದು ನಾವು ಎದುರಿಸುತ್ತಿದ್ದೇವೆ. ನೀವು ಉಳಿಸುವ ಪ್ರತಿ ನೀರಿನ ಹನಿಯೂ ಬಾಯಾರಿದವರ ದಾಹ ತಣಿಸಲಿದೆ" ಎಂದು ಯಶ್ ನೀರಿನ ಅಭಾವದ ದೃಷ್ಟಿಯಿಂದ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದಿದ್ದಾರೆ.[ಬರಪೀಡಿತ ಜನರ ದಾಹ ನೀಗಿಸಲು ಯಶ್ ಕೈ ಹಿಡಿದ 'ಅಕಿರ' ತಂಡ]

ನೀರನ್ನು ಕಾಳಜಿಯಿಂದ ಬಳಸಿ

ನೀರನ್ನು ಬಳಸುವ ಬಗ್ಗೆ ಅರಿವು ಮೂಡಿಸಲು ಮುಂದಾಗಿರುವ ಯಶ್ "ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ.. ಮುಂದಿನ ಮಳೆಗಾಲದವರೆಗೂ ಯಾವುದೇ ಕಾರಣಕ್ಕೂ ಹೆಚ್ಚದೇ ಇರುವ ಕಾರಣ, ಇದೇ ನಮ್ಮ ಜೀವಜಲ.. ಈ ನೀರನ್ನೇ ಕಾಳಜಿಯಿಂದ ಬಳಸಿ..' ಎಂಬ ಕರೆಕೊಟ್ಟಿದ್ದಾರೆ.['ಅನಿಲ್-ಉದಯ್' ಕುಟುಂಬಕ್ಕೆ ನೆರವಾದ 'ಯಶೋಮಾರ್ಗ']

ಜಲಾಶಯಗಳ ನೀರಿನ ಮಟ್ಟ ವರದಿ ನೀಡಿದ ಯಶ್

ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಾಗಿದ್ದು, ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಯಶ್ ತಮ್ಮ ಟ್ವಿಟರ್ ಪೇಜ್‌ ನಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜಲಾಶಯಗಳ ನೀರಿನ ಮಟ್ಟದ ವರದಿಯನ್ನು ಪ್ರಕಟಿಸಿದ್ದಾರೆ.

ಉತ್ತರ ಕರ್ನಾಟಕ ಜನತೆಯ ಹೃದಯ ಗೆದ್ದ ಯಶ್

ಯಶ್ ಕಳೆದ ವರ್ಷದ ಆರಂಭದಲ್ಲಿ 'ಯಶೋಮಾರ್ಗ' ಫೌಂಡೇಶನ್ ಮೂಲಕ ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆಯ 25 ಹಳ್ಳಿಗಳಿಗೆ, ಬಿಜಾಪುರದ 25 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಿ, ಉತ್ತರ ಕರ್ನಾಟಕ ಜನತೆಯ ಹೃದಯ ಗೆದ್ದಿದ್ದರು.

English summary
Kannada Actor Yash says, 'We are facing one of the worst drought in decades.Every drop of water you save will quench a thirst.Let us #SaveWater before it's too late' in his twitter page.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada