»   » ದಾಹ ತೀರಿಸಿ ಉತ್ತರ ಕರ್ನಾಟಕ ಜನತೆಯ ಹೃದಯ ಗೆದ್ದ ಯಶ್

ದಾಹ ತೀರಿಸಿ ಉತ್ತರ ಕರ್ನಾಟಕ ಜನತೆಯ ಹೃದಯ ಗೆದ್ದ ಯಶ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಬಹು ಬೇಡಿಕೆಯ ನಟನಾಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಸಮಾಜ ಸೇವೆ ಮಾಡುವತ್ತ ಮನಸ್ಸು ಮಾಡಿದ್ದಾರೆ. ಭೀಕರ ಬರಗಾಲದಿಂದ ತತ್ತರಿಸುತ್ತಿರುವ ಹಳ್ಳಿಗಳಿಗೆ ಸಹಾಯ ಮಾಡಲು ಯಶ್ ಪಣ ತೊಟ್ಟಿದ್ದಾರೆ.

ಇಡೀ ರಾಜ್ಯವೇ ಭೀಕರ ಬರ ಎದುರಿಸುತ್ತಿರುವ ಹಿನ್ನಲೆಯಲ್ಲಿ ನಟ ಯಶ್ ಅವರು ಉತ್ತರ ಕರ್ನಾಟಕದ ಮಂದಿಯ ನೆರವಿಗೆ ಧಾವಿಸಿದ್ದಾರೆ. ಹೌದು ಯಶೋಮಾರ್ಗ ಎಂಬ ಫೌಂಡೇಶನ್ ಮೂಲಕ ಜನರ ಸೇವೆ ಮಾಡಲು ಯಶ್ ಮುಂದಾಗಿದ್ದಾರೆ.[ಕುಡಿಯುವ ನೀರಿನ ನಿರೀಕ್ಷೆಯಲ್ಲಿ ಖಾಲಿ ಬಿಂದಿಗೆ ಸಾಲು]

Actor Yash provides drinking water to drought hit area of Uttara Karnataka

ಬರದಿಂದ ತತ್ತರಿಸಿರುವ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ರಾಕಿಂಗ್ ಸ್ಟಾರ್ ಯಶ್ ಅವರು ಮುಂದಾಗಿದ್ದು, ಉತ್ತರ ಕರ್ನಾಟಕದ 50 ಹಳ್ಳಿಗಳಿಗೆ ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಸುವ ಯೋಜನೆ ಹಾಕಿಕೊಳ್ಳಲಾಗಿದೆ.

"ನಾನು ಈಗ ಈ ಸ್ಥಾನದಲ್ಲಿ ಇದ್ದೇನೆ ಅಂದ್ರೆ ಅದಕ್ಕೆ ಕಾರಣ ಈ ಜನರು. ಅವರ ಅಭಿಮಾನ-ಪ್ರೀತಿಯಿಂದ ನಾನು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದೇನೆ, ಆದ್ದರಿಂದ ಜನರ ಋಣವನ್ನು ತೀರಿಸುವ ಒಂದು ಅವಕಾಶ ಸಿಕ್ಕಿದೆ. ಅದನ್ನು ಈ ಮೂಲಕ ತೀರಿಸಿಕೊಳ್ಳುತ್ತೇನೆ" ಎಂದು ರಾಕಿಂಗ್ ಸ್ಟಾರ್ ಯಶ್ ಅವರು ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆಯ 25 ಹಳ್ಳಿಗಳಿಗೆ ಈಗಾಗಲೇ ನೀರು ಪೂರೈಕೆಗೆ ಚಾಲನೆ ನೀಡಿದ್ದು, ಸದ್ಯದಲ್ಲಿಯೇ ಬಿಜಾಪುರದ 25 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಆರಂಭವಾಗಲಿದೆ.[ಅದು ಬಿಟ್ಟು, ಇದು ಬಿಟ್ಟು, ಮತ್ಯಾವುದು? ಯಶ್-ರಾಧಿಕಾ ಚಿತ್ರದ ಹೆಸರು?]

Actor Yash provides drinking water to drought hit area of Uttara Karnataka

ಈ ನೀರು ಪೂರೈಕೆ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿದ್ದಾರೆ, ಅಧಿಕಾರಿಗಳು ಮತ್ತು ಅಭಿಮಾನಿಗಳ ಸಹಯೋಗದೊಂದಿಗೆ ಯಶಸ್ವಿಯಾಗುತ್ತಿದ್ದೇವೆ ಎಂದು ಯಶ್ ಅವರು ಹೇಳಿದ್ದಾರೆ.['ಅಭಿಮಾನಿಗಳೇ ಏಪ್ರಿಲ್ ಫೂಲ್ ಆಗಬೇಡಿ' ಅಂತ ಯಶ್ ಯಾಕಂದ್ರು?]

ನೀರು ಪೂರೈಕೆ ಅಭಿಯಾನದ ಬಗ್ಗೆ ಯಶ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹೇಳಿಕೊಂಡಿದ್ದಾರೆ. ಯಶ್ ಅವರ ದೀರ್ಘ ಫೇಸ್ ಬುಕ್ ಸ್ಟೇಟಸ್ ಇಲ್ಲಿದೆ ನೋಡಿ...

English summary
Kannada Actor Yash provides drinking water to drought hit areas of Uttara Karnataka.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada