'ದೊಡ್ಮನೆ ಅಮ್ಮ'ನಿಗೆ ಕನ್ನಡ ಚಿತ್ರರಂಗದ ಗಣ್ಯರ ನುಡಿ ನಮನ

By Naveen

ಪಾರ್ವತಮ್ಮ ರಾಜ್ ಕುಮಾರ್ ರವರನ್ನ ಕಳೆದುಕೊಂಡ ಕನ್ನಡ ಚಿತ್ರರಂಗ ನೋವಿನಲ್ಲಿದೆ. ಇಡೀ ಚಿತ್ರರಂಗ 'ಅಮ್ಮ'ನ ಅಗಲಿಕೆ ತುಂಬಲಾರದ ನಷ್ಟ ಅಂತ ಹೇಳಿ ಕಣ್ಣೀರಿಡುತ್ತಿದೆ.

ಕನ್ನಡ ಸಿನಿಮಾರಂಗದ ನಟ, ನಟಿ, ನಿರ್ದೇಶಕರು ಸೇರಿದಂತೆ ಚಿತ್ರೋದ್ಯಮದ ಅನೇಕ ಗಣ್ಯರು ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ನುಡಿ ನಮನ ಸಲ್ಲಿಸಿದ್ದಾರೆ. ಮುಂದೆ ಓದಿ...

 ಬಿ.ಸರೋಜ ದೇವಿ, ಹಿರಿಯ ನಟಿ

ಬಿ.ಸರೋಜ ದೇವಿ, ಹಿರಿಯ ನಟಿ

''ಪಾರ್ವತಮ್ಮ ಕಷ್ಟ, ಸುಖ ಎಲ್ಲವನ್ನು ಅನುಭವಿಸಿ ಇಂದು ಮಹಾ ದೇವತೆಯಾಗಿದ್ದಾರೆ. ರಾಜ್ ಕುಮಾರ್ ಪತ್ನಿ ಅಂತ ಎಂದಿಗೂ ಅವರು ಜಂಬ ಮಾಡಲಿಲ್ಲ. ಅವರು ಕಳೆದುಕೊಂಡು ತುಂಬ ನೋವಾಗಿದೆ''

 ದ್ವಾರಕೀಶ್, ಹಿರಿಯ ನಟ, ನಿರ್ಮಾಪಕ

ದ್ವಾರಕೀಶ್, ಹಿರಿಯ ನಟ, ನಿರ್ಮಾಪಕ

''ಕನ್ನಡ ಚಿತ್ರರಂಗದ ಎಲ್ಲ ಸಮಸ್ಯೆಯನ್ನು ಬಗೆ ಹರಿಸುತ್ತಿದ್ದರು. ಅವರು ನನಗೆ ಅಮ್ಮ, ಅಕ್ಕ, ತಂಗಿ ಎಲ್ಲವೂ ಆಗಿದ್ದರು. ನಮ್ಮ ಮನೆ ಬೇರೆ ಅಲ್ಲ...ಅವರ ಮನೆ ಬೇರೆ ಆಗಿರಲಿಲ್ಲ... ಅಷ್ಟೊಂದು ಹತ್ತಿರವಾಗಿದ್ದರು.''['ದೊಡ್ಮನೆ ದೇವತೆ'ಯ ಜೀವನದ ಹಿನ್ನೋಟ]

 ಜಯಂತಿ, ಹಿರಿಯ ನಟಿ

ಜಯಂತಿ, ಹಿರಿಯ ನಟಿ

''ನಮ್ಮ ಸಿನಿಮಾರಂಗಕ್ಕೆ ಅವರು ಧ್ವಜ ಸ್ತಂಭದ ರೀತಿ ಇದ್ದರು. ಆದರೆ ಇಂದು ಆ ಧ್ವಜಸ್ತಂಭ ಮುರಿದು ಬಿದ್ದಿದೆ. ಪಾರ್ವತಮ್ಮ ಅವರ ಕೈನಲ್ಲಿ ನಾನು ಊಟ ಮಾಡಿದ್ದೇನೆ. ಮೊದಲು ಅಣ್ಣ ಹೋದರು, ಈಗ ಅಮ್ಮನನ್ನು ದೇವರು ಕರುಣೆ ಇಲ್ಲದೆ ಕರೆದುಕೊಂಡುಬಿಟ್ಟ''

 ಹಂಸಲೇಖ, ಸಂಗೀತ ನಿರ್ದೇಶಕ

ಹಂಸಲೇಖ, ಸಂಗೀತ ನಿರ್ದೇಶಕ

''ಪಾರ್ವತಮ್ಮ ಅವರು ಕನ್ನಡ ಚಿತ್ರರಂಗದಲ್ಲಿ ಒಂದು ಪರ್ವ. ಅವರ ಸಾಧನೆ ಬಹಳ ದೊಡ್ಡದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ''['ಶ್ರೇಷ್ಠ ಹೆಣ್ಣು' ಪಾರ್ವತಮ್ಮ ರನ್ನ ನೆನೆದು ಕಣ್ಣೀರಿಟ್ಟ ಹಿರಿಯ ನಟಿ ಲೀಲಾವತಿ]

 ತಾರಾ ಅನುರಾಧ, ನಟಿ

ತಾರಾ ಅನುರಾಧ, ನಟಿ

''ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಅವರನ್ನು ನೋಡಿ ಬಂದಿದ್ದೆ. ಆಗ ಹುಷಾರಾಗಿ ಮನೆಗೆ ಬರುತ್ತಾರೆ ಅಂತ ಭಾವಿಸಿದ್ದೆ. ಆದರೆ ಈ ರೀತಿ ಆಗುತ್ತದೆ ಅಂತ ಅಂದುಕೊಂಡಿರಲಿಲ್ಲ''

 ಪ್ರೇಮಾ, ನಟಿ

ಪ್ರೇಮಾ, ನಟಿ

''ನಾನು ಅವರ 'ವಜ್ರೇಶ್ವರಿ' ಬ್ಯಾನರ್ ನ ಮೂಲಕ ಚಿತ್ರರಂಗಕ್ಕೆ ಬಂದೆ. ನನ್ನನ್ನು ಕಲಾವಿದೆ ಮಾಡಿದ್ದು ಅವರೇ. ನನ್ನಲ್ಲಿ ಧೈರ್ಯ ತುಂಬಿದ್ದು ಅವರೇ. ನಾನು ಅವರಿಂದ ಬಹಳ ವಿಷಯಗಳನ್ನು ಕಲಿತುಕೊಂಡಿದ್ದೇನೆ''[ಪಾರ್ವತಮ್ಮ ರಾಜ್ ಕುಮಾರ್ ಕುರಿತು ನಟ ಅಂಬರೀಶ್ 'ನುಡಿ'ನಮನ]

 ಜಗ್ಗೇಶ್, ನಟ

ಜಗ್ಗೇಶ್, ನಟ

''ಇವತ್ತು ತುಂಬ ದುಃಖ ಆಗುವ ದಿನ. ರಾಜ್ ಕುಮಾರ್ ಅಂತಹ ನಟ ಕನ್ನಡ ನಾಡಿನಲ್ಲಿ ಇದ್ದಾರೆ ಅಂದರೆ ಅವರ ಬೆನ್ನಹಿಂದೆ ಇದ್ದಿದ್ದು ತಾಯಿ ಪಾರ್ವತಮ್ಮ. ಗಂಡ, ಮಕ್ಕಳು ಮತ್ತು ಉದ್ಯಮ ಎಲ್ಲವನ್ನೂ ನೋಡಿಕೊಂಡಿದ್ದರು''

 ಉಮಾಶ್ರೀ, ಹಿರಿಯ ನಟಿ

ಉಮಾಶ್ರೀ, ಹಿರಿಯ ನಟಿ

''ನಾನು ಪಾರ್ವತಮ್ಮ ಅವರ ಬ್ಯಾನರ್ ನಲ್ಲಿ ಸಿನಿಮಾ ಮಾಡಿದ್ದು ಕಡಿಮೆ. ಆದರೆ ಅಣ್ಣ, ಅಕ್ಕ ಇಬ್ಬರೂ ನನ್ನ ಅನೇಕ ಸಿನಿಮಾಗಳನ್ನು ನೋಡಿ ಪ್ರೋತ್ಸಾಹ ನೀಡುತ್ತಿದ್ದರು''[ಪಾರ್ವತಮ್ಮ ಪಾರ್ಥೀವ ಶರೀರದ ಅಂತಿಮ ಯಾತ್ರೆ ಆರಂಭ]

 ಶೃತಿ, ನಟಿ

ಶೃತಿ, ನಟಿ

''ನನಗೆ ನಾಮಕರಣ ಮಾಡಿದವರು ಪಾರ್ವತಮ್ಮ ಅವರು. ನನ್ನನ್ನ ಚಿತ್ರರಂಗಕ್ಕೆ ಪರಿಚಯ ಮಾಡಿದ್ದು ಸಹ ಅವರೇ. ಅವರು ಇಡೀ ಚಿತ್ರರಂಗಕ್ಕೆ ತಾಯಿಯಾಗಿದ್ದರು. ನಾವೆಲ್ಲ ಅವರನ್ನು ಕಳೆದುಕೊಂಡು ಅನಾಥರಾಗಿದ್ದೇವಿ''

 ನಾಗಭರಣ, ನಿರ್ದೇಶಕ

ನಾಗಭರಣ, ನಿರ್ದೇಶಕ

''ಕೆಲವೇ ವ್ಯಕ್ತಿತ್ವಗಳು ತಮ್ಮ ವ್ಯಕ್ತಿತ್ವದ ಮೂಲಕ ನಮ್ಮನ್ನು ಸ್ಪರ್ಶಿಸುತ್ತವೆ. ಅಂತಹ ಅದ್ಭುತ ಪರಂಪರೆಯನ್ನು ಮಾದರಿಯಾಗಿ ಬಿಟ್ಟುಹೋದ ಮಹಾತಾಯಿ ಪಾರ್ವತಮ್ಮ ರಾಜ್ ಕುಮಾರ್''

 ಭಾರ್ಗವ, ಹಿರಿಯ ನಿರ್ದೇಶಕ

ಭಾರ್ಗವ, ಹಿರಿಯ ನಿರ್ದೇಶಕ

''ಪಾರ್ವತಮ್ಮ ಅವರನ್ನು ಬಹಳ ದಿನಗಳಿಂದ ಬಲ್ಲೆ. ಅವರ ಮನೆಯಲ್ಲಿ 25 ಮಕ್ಕಳಿರುತ್ತಿದ್ದರು. ಎಲ್ಲರನ್ನೂ ಅವರ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದರು''

 ಗಣೇಶ್ , ನಟ

ಗಣೇಶ್ , ನಟ

''ನನಗೆ ಮಾತ್ರ ಅಲ್ಲ ಕನ್ನಡ ಚಿತ್ರರಂಗಕ್ಕೆ ಅವರು ದಾರಿ ದೀಪ ಆಗಿದ್ದರು. ಕನ್ನಡದ ಯಾವುದೇ ಸಮಸ್ಯೆ ಇದ್ದರೂ ಮೊದಲು ಧ್ವನಿ ಎತ್ತುತ್ತಿದ್ದರು''

 ಶರಣ್, ನಟ

ಶರಣ್, ನಟ

''ಕನ್ನಡ ಚಿತ್ರರಂಗ ಇವತ್ತು ಅನಾಥವಾಗಿದೆ. ಕನ್ನಡ ಚಿತ್ರರಂಗದ ಬೆನ್ನೆಲುಬು ಪಾರ್ವತಮ್ಮ ರಾಜ್ ಕುಮಾರ್. ಕನ್ನಡ ಚಿತ್ರರಂಗಕ್ಕೆ ಇವತ್ತು ತುಂಬಲಾರದ ನಷ್ಟವಾಗಿದೆ''

 ಭಾರತಿ ವಿಷ್ಣುವರ್ಧನ್, ಹಿರಿಯ ನಟಿ

ಭಾರತಿ ವಿಷ್ಣುವರ್ಧನ್, ಹಿರಿಯ ನಟಿ

''ಪಾರ್ವತಮ್ಮ ರಾಜ್ ಕುಮಾರ್ ರವರು ಮಹಾನ್ ವ್ಯಕ್ತಿ. ಮಹಾನ್ ತಾಯಿ. ಆಕೆ ಪತ್ನಿಯಾಗಿ, ತಾಯಿಯಾಯಿ, ನಿರ್ಮಾಪಕಿಯಾಗಿ, ಎಲ್ಲರಿಗೂ ಮಾರ್ಗದರ್ಶಕರಾಗಿ, ಸ್ಫೂರ್ತಿಯಾಗಿದವರು. ನಮಗೆಲ್ಲ ಅವರು ಶಕ್ತಿ ಆಗಿದ್ದರು. ಅಂಥ ಒಂದು ಶಕ್ತಿಯನ್ನ ನಾವು ಇವತ್ತು ಕಳೆದುಕೊಂಡಿದ್ದೇವೆ. ತುಂಬಾ ದುಃಖ ಆಗುತ್ತಿದೆ. ಮಕ್ಕಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ''

 ಉಪೇಂದ್ರ, ನಟ

ಉಪೇಂದ್ರ, ನಟ

''ಇಡೀ ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ಒಂದು ಶಕ್ತಿ ಆದರೆ, ಅದರ ಹಿಂದೆ ಇರುವ ಭಕ್ತಿ ಪಾರ್ವತಮ್ಮ ರಾಜ್ ಕುಮಾರ್. ಎಲ್ಲರೂ ಹೇಳುವಂತೆ ಇದು ತುಂಬಲಾರದ ನಷ್ಟ. ಚಿತ್ರರಂಗಕ್ಕೆ ಬರುವವರು ಅಣ್ಣಾವ್ರ ಪುಸ್ತಕವನ್ನ ಹೇಗೆ ಓದಿಕೊಂಡು ಬರುತ್ತಾರೋ, ಅದೇ ತರಹ ಪಾರ್ವತಮ್ಮ ರವರ ಬಗ್ಗೆ ಒಂದು ಪಠ್ಯ ಪುಸ್ತಕ ಬರೆಯಬೇಕು''

 ಯಶ್, ನಟ

ಯಶ್, ನಟ

''ಅವರು ಮಾಡಿರುವ ಸಾಧನೆ ಮೂಲಕ ಪಾರ್ವತಮ್ಮ ರಾಜ್ ಕುಮಾರ್ ಸದಾ ಜೀವಂತವಾಗಿ ಇರುತ್ತಾರೆ. ಕರ್ನಾಟಕದ ಇತಿಹಾಸದಲ್ಲಿ ನಾವು ಹೇಗೆ ಡಾ.ರಾಜ್ ಕುಮಾರ್ ರವರನ್ನ ಮರೆಯಲು ಆಗುವುದಿಲ್ಲವೋ, ಹಾಗೇ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ರವರನ್ನೂ ಮರೆಯಲು ಸಾಧ್ಯ ಇಲ್ಲ. ಇಡೀ ಸಮಾಜಕ್ಕೆ ಅವರು ಮಾದರಿ''

More from Filmibeat

English summary
Parvathamma Rajkumar, wife of Late Dr.Rajkumar, Kannada Movie Producer, passes away in Bengaluru today (May 31st). Kannada Celebrities Condoles Death of Parvathamma Rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X