For Quick Alerts
  ALLOW NOTIFICATIONS  
  For Daily Alerts

  ಪಾರ್ವತಮ್ಮ ರಾಜ್ ಕುಮಾರ್ ಕುರಿತು ನಟ ಅಂಬರೀಶ್ 'ನುಡಿ'ನಮನ

  By Harshitha
  |

  ''ಹಳ್ಳಿಯಿಂದ ಬಂದ ಪಾರ್ವತಮ್ಮ ರಾಜ್ ಕುಮಾರ್ ಗಾಂಧಿನಗರದಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿದರು'' - ಹೀಗಂತ ಉದ್ಘಾರ ಮಾಡಿದವರು ಬೇರೆ ಯಾರೂ ಅಲ್ಲ, ರೆಬೆಲ್ ಸ್ಟಾರ್ ಅಂಬರೀಶ್.

  ಅಣ್ಣಾವ್ರ ಕುಟುಂಬಕ್ಕೆ ಆಪ್ತರಾಗಿರುವ ಅಂಬರೀಶ್ ಗೆ ಇಂದು ಪಾರ್ವತಮ್ಮ ರಾಜ್ ಕುಮಾರ್ ರವರ ನಿಧನದ ಸುದ್ದಿ ಬರಸಿಡಿಲಿನಂತೆ ಬಡಿಯಿತು. ನಿಧನವಾರ್ತೆ ತಿಳಿದ ಕೂಡಲೆ ಸದಾಶಿವನಗರಕ್ಕೆ ಧಾವಿಸಿದ ಅಂಬರೀಶ್, ಪಾರ್ವತಮ್ಮ ರಾಜ್ ಕುಮಾರ್ ರವರ ಅಂತಿಮ ದರ್ಶನ ಪಡೆದರು.[ಆರಿದ 'ದೊಡ್ಮನೆ' ದೀಪ: ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಇನ್ನಿಲ್ಲ]

  ಬಳಿಕ ಮಾಧ್ಯಮಗಳ ಜೊತೆ ಹಿರಿಯ ನಿರ್ಮಾಪಕಿ, ಡಾ.ರಾಜ್ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ 'ಮಂಡ್ಯದ ಗಂಡು' ಅಂಬರೀಶ್ ಹೇಳಿದಿಷ್ಟು -

  ಒನ್ ಆಫ್ ದಿ ಗ್ರೇಟ್ ಲೇಡಿ

  ಒನ್ ಆಫ್ ದಿ ಗ್ರೇಟ್ ಲೇಡಿ

  ''ಅವರ ಮನೆಯವರಿಗೆ ಏನು ಆಸೆ ಇದೆಯೋ.. ಆ ರೀತಿ ಅಂತ್ಯಕ್ರಿಯೆ ಆಗಬೇಕು. ಅದೇ ನಮ್ಮ ಆಸೆ. ಒನ್ ಆಫ್ ದಿ ಗ್ರೇಟ್ ಲೇಡಿ ಇನ್ ದಿ ಸಿನಿಮಾ ಇಂಡಸ್ಟ್ರಿ ವಿ ಹ್ಯಾವ್ ಲಾಸ್ಟ್'' - ಅಂಬರೀಶ್, ನಟ [ಡಾ.ರಾಜ್ ಸಮಾಧಿ ಪಕ್ಕದಲ್ಲಿಯೇ ಪತ್ನಿ ಪಾರ್ವತಮ್ಮ ಅಂತ್ಯಕ್ರಿಯೆ]

  ಹಳ್ಳಿಯಿಂದ ಬಂದು ಸಾಮ್ರಾಜ್ಯ ಕಟ್ಟಿದರು

  ಹಳ್ಳಿಯಿಂದ ಬಂದು ಸಾಮ್ರಾಜ್ಯ ಕಟ್ಟಿದರು

  ''ಅವರು ಒಂದು ಹಳ್ಳಿ ಹೆಂಗಸು. ಹಳ್ಳಿಯಿಂದ ಬಂದು ಇಲ್ಲಿ ಸಾಮ್ರಾಜ್ಯ ಕಟ್ಟಿದರು'' - ಅಂಬರೀಶ್, ನಟ [ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ]

  ಡಾ.ರಾಜ್ ಗೆ ಏನೂ ಗೊತ್ತಿರಲಿಲ್ಲ

  ಡಾ.ರಾಜ್ ಗೆ ಏನೂ ಗೊತ್ತಿರಲಿಲ್ಲ

  ''ಡಾ.ರಾಜ್ ಕುಮಾರ್ ಗೆ ಏನೂ ಗೊತ್ತಿರಲಿಲ್ಲ. ಅವರಿಗೆ ಬರೀ ಹಾಡು, ಸಾಹಿತ್ಯ, ಮೇಕಪ್... ಬರೀ ಇಷ್ಟರ ಬಗ್ಗೆ ಮಾತ್ರ ಧ್ಯಾನ. ಹೀ ವಾಸ್ ಎ ವೆರಿ ಡೆಡಿಕೇಟೆಡ್ ಮ್ಯಾನ್'' - ಅಂಬರೀಶ್, ನಟ

  ಡಾ.ರಾಜ್ ಹಿಂದೆ ಇದ್ದ ಶಕ್ತಿ

  ಡಾ.ರಾಜ್ ಹಿಂದೆ ಇದ್ದ ಶಕ್ತಿ

  ''ಡಾ.ರಾಜ್ ಕುಮಾರ್ ಯೋಗ ಮಾಡುತ್ತಿದ್ದರು. ಆ ತರಹದ ಯೋಗವನ್ನ ನಾವು-ನೀವು ಮಾಡಲು ಸಾಧ್ಯ ಇಲ್ಲ. ಅಷ್ಟು ಶ್ರದ್ಧೆ-ಭಕ್ತಿಯಿಂದ ಮಾಡುತ್ತಿದ್ದರು. ಅವರ ಹಿಂದೆ ನಿಂತಿದ್ದವರು ಪಾರ್ವತಮ್ಮನವರು'' - ಅಂಬರೀಶ್, ನಟ

  ಸ್ಫೂರ್ತಿಯ ಚಿಲುಮೆ ಪಾರ್ವತಮ್ಮ ರಾಜ್ ಕುಮಾರ್

  ಸ್ಫೂರ್ತಿಯ ಚಿಲುಮೆ ಪಾರ್ವತಮ್ಮ ರಾಜ್ ಕುಮಾರ್

  ''ಅವರದ್ದು ದೊಡ್ಡ ಫ್ಯಾಮಿಲಿ. ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಜೊತೆಗೆ ಚಿತ್ರ ನಿರ್ಮಾಣ, ವಿತರಣೆಯನ್ನೂ ಮಾಡಿದ್ದಾರೆ. ನಾವೆಲ್ಲರೂ ಅವರನ್ನ admire ಮಾಡುತ್ತೇವೆ'' - ಅಂಬರೀಶ್, ನಟ

  English summary
  Parvathamma Rajkumar, wife of Late Dr.Rajkumar, Kannada Movie Producer, passes away in Bengaluru today (May 31st). Kannada Actor, Congress Politician Ambareesh condoles death of Parvathamma Rajkumar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X