»   » ಅನಂತ್ ಅಭಿನಯದ 'ಪ್ಲಸ್' ರಿಲೀಸ್ ಡೇಟ್ ಘೋಷಣೆ

ಅನಂತ್ ಅಭಿನಯದ 'ಪ್ಲಸ್' ರಿಲೀಸ್ ಡೇಟ್ ಘೋಷಣೆ

Posted By:
Subscribe to Filmibeat Kannada

ಯೋಗರಾಜ್ ಮೂವೀಸ್ ಬ್ಯಾನರ್ ಅಡಿಯಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಸ್ಯಾಂಡಲ್ ವುಡ್ದಿನ ಬಹುನಿರೀಕ್ಷಿತ ಸೈಕೋ ಥ್ರಿಲ್ಲರ್ ಚಿತ್ರ 'ಪ್ಲಸ್' ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಅನಂತ್ ನಾಗ್ ಲುಕ್, ಚೇತನ್ ಚಂದ್ರ ಬಾಡಿ ಪ್ಯಾಕ್, ಪಾತ್ರಧಾರಿಗಳ ವಿಚಿತ್ರ ಗೆಟಪ್, ಪಂಚ್ ಡೈಲಾಗ್ ಗಳುಳ್ಳ 'ಪ್ಲಸ್' ಚಿತ್ರ ಅಕ್ಟೋಬರ್ 16ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ ಕಾಣಬಹುದು.

ದ್ಯಾವ್ರೇ ಚಿತ್ರದ ನಂತರ ಗಡ್ಡ ವಿಜಿ ಅವರು ಆಕ್ಷನ್ ಕಟ್ ಹೇಳಿರುವ ಪ್ಲಸ್ ಚಿತ್ರದಲ್ಲಿ ಅಂಥ ಮೈನಸ್ ಅಂಶಗಳಿಲ್ಲ ಎಂದು ಹೇಳಿ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡುವ ಮೂಲಕ ಪಾಸಿಟಿವ್(+) ರೆಸ್ಪಾನ್ಸ್ ಕೊಟ್ಟಿರುವ ಸುದ್ದಿ ಓದಿರುತ್ತೀರಿ.

Kannada movie 'Plus' set to release worldwide on October 16

ಪ್ಲಸ್ ಚಿತ್ರ ಕ್ಲಿಕ್ ಆದರೆ ಹಲವಾರು ಯುವ ನಟ, ನಟಿಯರ ವೃತ್ತಿ ಬದುಕಿಗೆ ಪಾಸಿಟಿವ್ ಆಗಲಿದೆ. ಚೇತನ್ ಚಂದ್ರ ಜೊತೆಗೆ ರಿತೇಶ್, ಐಶಾನಿ ಶೆಟ್ಟಿ, ಶಾಲಿನಿ ಮುಂತಾದವರಿಗೆ ಅದೃಷ್ಟ ಪರೀಕ್ಷೆಯಾಗಲಿದೆ. [ಅನಂತ್ ನಾಗ್ 'ಪ್ಲಸ್' ಆ ಇನ್ನಿಬ್ಬರು ಯಾರು?]

ಇವರೆಲ್ಲರ ಜೊತೆಗೆ ಎವರ್ ಗ್ರೀನ್ ನಟ ಅನಂತ್ ನಾಗ್ ಅವರ ಗೆಟಪ್, ಮ್ಯಾನರೀಸಂ ನೋಡಲು ಒಮ್ಮೆಯಾದರೂ ಚಿತ್ರ ನೋಡಬೇಕು ಎಂದು ಸಿನಿರಸಿಕರು ಆಗಲೇ ನಿರ್ಧರಿಸಿಬಿಟ್ಟಿದ್ದಾರೆ. ['ಅನಂತ್ ನಾಗ್ ಗೆ ಡಿಫರೆಂಟ್ ಲುಕ್ ಕೊಟ್ಟ ಹೆಗ್ಗಳಿಕೆ ನನ್ನದು']

ಸೆ. 18ಕ್ಕೆ ತೆರೆಗೆ ಬರಬೇಕಿದ್ದ ಪ್ಲಸ್ ಅನಿವಾರ್ಯ ಕಾರಣಗಳಿಂದ ಅಕ್ಟೋಬರ್ 16ರಂದು ವಿಶ್ವದೆಲ್ಲೆಡೆ ತೆರೆ ಕಾಣಲಿದೆ. ಚಿತ್ರಮಂದಿರಗಳ ಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಇನ್ನಷ್ಟು ಮಾಹಿತಿಗೆ ಫಿಲ್ಮಿಬೀಟ್ ನೋಡುತ್ತಿರಿ.

English summary
Kannada movie 'Plus' set to release worldwide on October 16. Kannada movie 'Plus' recently got U/A Certificate from the Censor Board. 'Plus' features Kannada actor Anant Nag, Actress Aishani Shetty, Actor Chetan Chandra in the lead role. The movie is directed by Gadda Viji.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada