»   » ಅನಂತ್ ನಾಗ್ 'ಪ್ಲಸ್' ಆ ಇನ್ನಿಬ್ಬರು ಯಾರು?

ಅನಂತ್ ನಾಗ್ 'ಪ್ಲಸ್' ಆ ಇನ್ನಿಬ್ಬರು ಯಾರು?

Posted By:
Subscribe to Filmibeat Kannada

ನಿರ್ದೇಶಕ ಕಮ್ ನಿರ್ಮಾಪಕ ಯೋಗರಾಜ್ ಭಟ್ರ ಶಿಷ್ಯ ಗಡ್ಡ ವಿಜಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ '+' (ಪ್ಲಸ್ ಸಿಂಬಲ್). ಬರೀ ಸಿಂಬಲ್ ಇಟ್ಟುಕೊಂಡೇ ಗಾಂಧಿನಗರದ ತುಂಬೆಲ್ಲಾ ತಮಟೆ ಬಾರಿಸಿದ '+' ಚಿತ್ರದ ಹೀರೋ ಅನಂತ್ ನಾಗ್ ಅಂತ ನಾವೇ ನಿಮಗೆ ಹೇಳಿದ್ವಿ.

ಸೂಪರ್ ಸ್ಟೈಲಿಶ್ ಆಗಿ ಅನಂತ್ ನಾಗ್ ಕಾಣಿಸಿಕೊಂಡಿರುವ '+' ಸಿನಿಮಾದ ಫೋಟೋಗಳು ಈಗಾಗಲೇ ಜನಪ್ರಿಯವಾಗಿವೆ. ಸದ್ದಿಲ್ಲದೇ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ '+' ಚಿತ್ರತಂಡದ ಕಡೆಯಿಂದ ಗೂಗ್ಲಿ ಬಾಲೊಂದು ನಿಮ್ಮ ಅಂಗಳಕ್ಕೆ ಬಿದ್ದಿದೆ. ಅದೇ ಈ ಮೇಕಿಂಗ್ ಟೀಸರ್.


Watch Kannada movie Plus making teaser

ಯೋಗರಾಜ್ ಮೂವೀಸ್ ನಲ್ಲಿ ನಿರ್ಮಾಣವಾಗುತ್ತಿರುವ '+' ಸಿನಿಮಾದ ಎರಡು ಪ್ಲಸ್ ಪಾಯಿಂಟ್ಸ್ ಇರುವ ಮೇಕಿಂಗ್ ಟೀಸರ್ ಬಿಡುಗಡೆಯಾಗಿದೆ. 'Introducing' ಅನ್ನುವ ಕ್ಯಾಪ್ಷನ್ ನೊಂದಿಗೆ ರಿಲೀಸ್ ಆಗಿರುವ ಈ ಟೀಸರ್ ನಲ್ಲಿ ಇಬ್ಬರು ಯುವ ಪ್ರತಿಭೆಗಳು ಮಾಡುತ್ತಿರುವ ಕಸರತ್ತನ್ನ ಹೈಲೈಟ್ ಮಾಡಲಾಗಿದೆ. [ವಾವ್, ಅನಂತನಾಗ್ ಹೀರೋ ಅಟ್ ಅರುವತ್ತಾರು!]


ಉದ್ದ ಗೂದಲು, ಸಿಕ್ಸ್ ಪ್ಯಾಕ್ ಬಾಡಿ, ಹಗಲು-ರಾತ್ರಿ '+' ಸಿನಿಮಾಗಾಗಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಇಬ್ಬರು ಯುವಕರೇ '+' ಸಿನಿಮಾದ ಪ್ಲಸ್ ಪಾಯಿಂಟ್ಸ್.


ಟೀಸರ್ ನಲ್ಲಿ ಇಬ್ಬರ ಬಾಡಿಯನ್ನ ಮಾತ್ರ ನೋಡಿರುವ ನಿಮಗೆ, ಅವರಿಬ್ಬರ ಪರಿಚಯ ಏಪ್ರಿಲ್ 2 ರಂದು ಆಗುವುದು ಖಚಿತ. ಅದ್ಹೇಗೆ ಅಂದ್ರೆ, '+' ಸಿನಿಮಾ ಅಫೀಶಿಯಲ್ ಥಿಯೇಟ್ರಿಕಲ್ ಟೀಸರ್ ಇದೇ ಗುರುವಾರ ರಿಲೀಸ್ ಆಗುತ್ತಿದೆ.


Watch Kannada movie Plus making teaser

ಯೋಗರಾಜ್ ಭಟ್ ನಿರ್ದೇಶನದ 'ವಾಸ್ತುಪ್ರಕಾರ' ಚಿತ್ರದ ಜೊತೆಗೆ '+' ಟ್ರೇಲರ್ ಕೂಡ ರಾಜ್ಯಾದ್ಯಂತ ಪ್ರದರ್ಶನವಾಗಲಿದೆ. ''ಯೋಗರಾಜ್ ಭಟ್ರ ಗರಡಿಯಲ್ಲಿ ಪಳಗಿದವರು ನಾವು. '+' ಸಿನಿಮಾಗೆ ಅವ್ರೇ ಪ್ರೊಡ್ಯೂಸರ್. 'ವಾಸ್ತುಪ್ರಕಾರ' ಈ ವಾರ ರಿಲೀಸ್ ಆಗುತ್ತಿದೆ. ಹೀಗಾಗಿ, ಅಂದೇ ನಮ್ಮ ಚಿತ್ರದ ಎರಡು ಲೀಡ್ ಕ್ಯಾರೆಕ್ಟರ್ಸ್ ನ ರಿವೀಲ್ ಮಾಡುತ್ತಿದ್ದೇವೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಗಡ್ಡ ವಿಜಿ ಹೇಳಿದ್ರು.


ದೇಹವನ್ನ ದಂಡಿಸಿರುವ ಈ ಉದಯೋನ್ಮುಖ ಪ್ರತಿಭೆಗಳು '+' ಸಿನಿಮಾದ ನಾಯಕರು ಅಂತ ಭಾವಿಸುವುದು ತಪ್ಪು. ಇವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಅಷ್ಟು ಬಿಟ್ಟರೆ, ಹೀರೋಗಳಲ್ಲ. [ಅಂದು ಸೊಸೆ! ಇಂದು ಅನಂತ್ ಗೆ ಸುಧಾರಾಣಿ ಜೋಡಿ]


ನಾಯಕ ಅನಂತ್ ನಾಗ್ ಅವರ ಜೊತೆ ಸುಧಾರಾಣಿ ನಾಯಕಿಯಾಗಿರುವುದು ಖಚಿತ ಮಾಹಿತಿ. ಉಳಿದಂತೆ '+' ಹಿಂದೆ ಮುಂದೆ ತಿಳಿದುಕೊಳ್ಳಬೇಕಂದ್ರೆ 'ವಾಸ್ತುಪ್ರಕಾರ' ಭವಿಷ್ಯದಲ್ಲಿ ಕಾದುನೋಡಬೇಕು. (ಫಿಲ್ಮಿಬೀಟ್ ಕನ್ನಡ)

English summary
Kannada Actor Ananth Nag and Sudharani starrer '+' movie making teaser is out. The video shows the Introduction of two new faces to the Sandalwood, whom will be revealed on April 2nd, along with 'Vaasthu Prakara' release. '+' is produced by Yogaraj Bhat and directed by Gadda Viji. Watch the video here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada