ಬಣ್ಣ ಹಚ್ಚಿ ಶೂಟಿಂಗ್ ಗೆ ಹಾಜರಾದ ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್

By Bharath Kumar

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಅವರ ಬಗ್ಗೆ ಕಳೆದ ಕೆಲ ತಿಂಗಳ ಹಿಂದೆ ಹೊಸ ಸುದ್ದಿಯೊಂದು ಕೇಳಿ ಬಂದಿತ್ತು. ಈಗ ಆ ಸುದ್ದಿ ನಿಜವಾಗಿದ್ದು, ಆ ಕೆಲಸದಲ್ಲಿ ಪ್ರಜ್ವಲ್ ಪತ್ನಿ ಈಗಾಗಲೇ ತೊಡಗಿಕೊಂಡಿದ್ದಾರೆ.

ಹೌದು, ಮಾಡೆಲಿಂಗ್ ಲೋಕದಲ್ಲಿ ಯಶಸ್ಸು ಕಂಡಿದ್ದ ರಾಗಿಣಿ ಚಂದ್ರನ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅದರ ಮೊದಲ ಹೆಜ್ಜೆ ಎನ್ನುವಂತೆ ಕಿರುಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಕಿರುಚಿತ್ರವನ್ನ ಕನ್ನಡದ ಖ್ಯಾತ ನಟಿ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ರಾಗಿಣಿ ಚಂದ್ರನ್ ಹಣ್ಣ ಹಚ್ಚಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಅದರ ಫೋಟೋ ಈಗ ರಿವಿಲ್ ಆಗಿದ್ದು, ಮುಂದಿದೆ ನೋಡಿ....

ಚಿತ್ರೀಕರಣದಲ್ಲಿ ರಾಗಿಣಿ ಚಂದ್ರನ್

ಚಿತ್ರೀಕರಣದಲ್ಲಿ ರಾಗಿಣಿ ಚಂದ್ರನ್

ರಾಗಿಣಿ ಚಂದ್ರನ್ ಅಭಿನಯಿಸುತ್ತಿರುವ ಕಿರುಚಿತ್ರದ ಶೂಟಿಂಗ್ ಶುರುವಾಗಿದ್ದು, ಚಿತ್ರೀಕರಣದಲ್ಲಿ ಪ್ರಜ್ವಲ್ ದೇವರಾಜ್ ಪತ್ನಿ ಪಾಲ್ಗೊಂಡಿದ್ದಾರೆ.[ದೇವರಾಜ್ ಸೊಸೆ ರಾಗಿಣಿ ಚಂದ್ರನ್ ಬಗ್ಗೆ ಗಾಂಧಿನಗರದಲ್ಲಿ ಕಿವಿಗೆ ಬಿದ್ದ ಹೊಸ ಸುದ್ದಿ ಇದು.!]

ಸಂಪ್ರದಾಯಸ್ಥ ಹುಡುಗಿ

ಸಂಪ್ರದಾಯಸ್ಥ ಹುಡುಗಿ

ಚೆಂದದ ಬೊಂಬೆ ರಾಗಿಣಿ ಚಂದ್ರನ್ ಅವರು, ಈ ಕಿರುಚಿತ್ರದಲ್ಲಿ ಸಂಪ್ರದಾಯಸ್ಥ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀರೆಯುಟ್ಟು, ಮೈ ತುಂಬಾ ಆಭರಣಗಳನ್ನ ತೊಟ್ಟು ಟ್ರಡಿಷ್ನಲ್ ಲುಕ್ ನಲ್ಲಿ ಮದುಮಗಳಂತೆ ಮಿಂಚುತ್ತಿದ್ದಾರೆ. ಈ ವೇಳೆ ನಟ ಸಿಹಿಕಹಿ ಚಂದ್ರ ಅವರು ಕೂಡ ರಾಗಿಣಿ ಚಂದ್ರನ್ ಗೆ ಸಾಥ್ ಕೊಟ್ಟಿದ್ದಾರೆ.[ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಜ್ವಲ್- ರಾಗಿಣಿ ಚಂದ್ರನ್ ಜೋಡಿ]

ಆರ್ ಜೆ ಮಯೂರ್ ಆಕ್ಷನ್ ಕಟ್

ಆರ್ ಜೆ ಮಯೂರ್ ಆಕ್ಷನ್ ಕಟ್

ಅಂದ್ಹಾಗೆ, ರಾಗಿಣಿ ಚಂದ್ರನ್ ಅಭಿನಯಿಸುತ್ತಿರುವ ಕಿರುಚಿತ್ರದ ಹೆಸರು 'ರಿಷಭಾಪ್ರಿಯ'. ಇದೊಂದು ಮ್ಯೂಸಿಕಲ್ ಕಿರುಚಿತ್ರವಾಗಿದ್ದು, ಆರ್ ಜೆ ಮಯೂರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.[ಪ್ರಜ್ವಲ್ ದೇವರಾಜ್ ಮನದನ್ನೆ ರಾಗಿಣಿ ಚಂದ್ರನ್ ಕುರಿತು...]

ರಚಿತಾ ರಾಮ್ ನಿರ್ಮಾಣ

ರಚಿತಾ ರಾಮ್ ನಿರ್ಮಾಣ

ಇನ್ನು ಈ ಕಿರುಚಿತ್ರದ ಸ್ಪೆಷಲ್ ಅಂದ್ರೆ, ರಾಗಿಣಿ ಚಂದ್ರನ್ ಅಭಿನಯಿಸುತ್ತಿರುವ ಈ ಶಾರ್ಟ್ ಮೂವಿಯನ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Kannada Actor Prajwal Devaraj Wife Ragini Chandran Starrer RishabaPriya Short Film Shooting Starts. the Movie Directed by RJ Mayur and Produced By Actress Rachita Ram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X