»   » ಪ್ರಜ್ವಲ್ ದೇವರಾಜ್ ಮನದನ್ನೆ ರಾಗಿಣಿ ಚಂದ್ರನ್ ಕುರಿತು...

ಪ್ರಜ್ವಲ್ ದೇವರಾಜ್ ಮನದನ್ನೆ ರಾಗಿಣಿ ಚಂದ್ರನ್ ಕುರಿತು...

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಎಲಿಜೆಬಲ್ ಬಾಚ್ಯುಲರ್ ಪ್ರಜ್ವಲ್ ದೇವರಾಜ್ ಗೆ ವಿವಾಹ ನಿಶ್ಚಯವಾಗಿದೆ. ತಮ್ಮ ಬಾಲ್ಯದ ಗೆಳತಿ ರಾಗಿಣಿ ಚಂದ್ರನ್ ಜೊತೆ ಪ್ರಜ್ವಲ್ ದೇವರಾಜ್ ಮುಂದಿನ ತಿಂಗಳು ಹಸೆಮಣೆ ಏರಲಿದ್ದಾರೆ.

ಪ್ರಜ್ವಲ್ ದೇವರಾಜ್ ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋ ಅನ್ನೋದು ನಿಮಗೆಲ್ಲರಿಗೂ ಗೊತ್ತು. ಆದ್ರೆ, ಪ್ರಜ್ವಲ್ ದೇವರಾಜ್ ಕೈಹಿಡಿಯುತ್ತಿರುವ ರಾಜಕುಮಾರಿಯ ಕುರಿತು ನಿಮಗೆ ಕುತೂಹಲ ಇದ್ದೇ ಇರುತ್ತೆ. ಆ ಕುತೂಹಲಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಮಾಡಿದೆ.

Details on Kannada Actor Prajwal Devaraj fiance Ragini Chandran

ರಾಗಿಣಿ ಚಂದ್ರನ್ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ನೃತ್ಯ ಅಂದ್ರೆ ರಾಗಿಣಿ ಚಂದ್ರನ್ ಗೆ ಅಚ್ಚುಮೆಚ್ಚು. ನಾಲ್ಕು ವರ್ಷದ ಪುಟ್ಟ ಬಾಲಕಿಯಾಗಿರುವಾಗಲೇ ಭರತನಾಟ್ಯ ಕಲಿಯುವುದಕ್ಕೆ ರಾಗಿಣಿ ಚಂದ್ರನ್ ಆರಂಭಿಸಿದರು. ನಂತರ ಶೈಮಕ್ ದಾವರ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಮತ್ತು ಇಮ್ರಾನ್ ಸರ್ದಾರಿಯಾ ಡ್ಯಾನ್ಸ್ ಕ್ಲಾಸ್ ನಲ್ಲಿ Contemporary ಮತ್ತು ಫ್ರೀ ಸ್ಟೈಲ್ ನೃತ್ಯ ಕಲಿತರು.

ರಾಗಿಣಿ ಚಂದ್ರನ್ ಗೆ ಪ್ರಜ್ವಲ್ ದೇವರಾಜ್ ಪರಿಚಯವಾಗಿದ್ದು ಈ ಸಮಯದಲ್ಲೇ. ಅದು ಇಮ್ರಾನ್ ಸರ್ದಾರಿಯಾ ಡ್ಯಾನ್ಸ್ ಕ್ಲಾಸ್ ನಲ್ಲಿ. ['ರೀಲ್' ಹೀರೋ ಪ್ರಜ್ವಲ್ ದೇವರಾಜ್ 'ರಿಯಲ್' ಪ್ರೇಮ್ ಕಹಾನಿ]

Details on Kannada Actor Prajwal Devaraj fiance Ragini Chandran

ಸದ್ಯಕ್ಕೆ ಖ್ಯಾತ ನೃತ್ಯಗಾರ್ತಿ ಶ್ರೀಮತಿ.ನಿರುಪಮ ರಾಜೇಂದ್ರ ಮತ್ತು ಶ್ರೀ.ರಾಜೇಂದ್ರ ರವರ ಅಭಿನವ ಡ್ಯಾನ್ಸ್ ಕಂಪನಿಯಲ್ಲಿ ರಾಗಿಣಿ ಚಂದ್ರನ್ ಕಥಕ್ ಡ್ಯಾನ್ಸರ್ ಆಗಿದ್ದಾರೆ. ವಿಶ್ವದಾದ್ಯಂತ ಕಥಕ್ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ.

ಕಳೆದ ಕೆಲ ವರ್ಷಗಳ ಹಿಂದೆಯಷ್ಟೆ ಮಾಡೆಲಿಂಗ್ ಲೋಕಕ್ಕೆ ಅಡಿಯಿಟ್ಟ ರಾಗಿಣಿ ಚಂದ್ರನ್ Khazana Jewellers, GRT Jewellers, 3M Nexcare, Colortree, Lulu International Mall ಗಾಗಿ ಟಿವಿ ಜಾಹೀರಾತು ಮತ್ತು ಪ್ರಿಂಟ್ ಆಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Details on Kannada Actor Prajwal Devaraj fiance Ragini Chandran

ಪ್ರಜ್ವಲ್ ದೇವರಾಜ್ ಜೊತೆ ಸೇರಿ ಯು-ರಿಧಮಿಕ್ಸ್ ಅನ್ನುವ ಡ್ಯಾನ್ಸ್ ಮತ್ತು ಫಿಟ್ನೆಸ್ ಸ್ಟುಡಿಯೋ ಕೂಡ ಶುರುಮಾಡಿದ್ದಾರೆ ರಾಗಿಣಿ ಚಂದ್ರನ್. ಮಾಡೆಲಿಂಗ್ ನಿಂದ ಸ್ಯಾಂಡಲ್ ವುಡ್ ಗೂ ಕಾಲಿಡುವುದಕ್ಕೆ ರಾಗಿಣಿ ಚಂದ್ರನ್ ರೆಡಿಯಿದ್ದಾರೆ. [ಪ್ರಜ್ವಲ್ ದೇವರಾಜ್ ಪೀ..ಪೀ..ಪೀ..ಡುಂ..ಡುಂಗೆ ರೆಡಿ]

Details on Kannada Actor Prajwal Devaraj fiance Ragini Chandran

ರಾಗಿಣಿ ಚಂದ್ರನ್ ಜೊತೆ ಒಂದು ಸಿನಿಮಾ ಮಾಡುವ ಹಂಬಲ ಪ್ರಜ್ವಲ್ ದೇವರಾಜ್ ಗೆ ಇದ್ಯಂತೆ. ಹೀಗಾಗಿ ಉತ್ತಮ ಸ್ಕ್ರಿಪ್ಟ್ ಸಿಕ್ಕರೆ, ಪ್ರಜ್ವಲ್ ಗೆ ರೀಲ್ ನಲ್ಲಿ ನಾಯಕಿಯಾಗುವುದಕ್ಕೂ ಸಿದ್ಧ ಅಂತ ಹೇಳ್ತಾರೆ ರಾಗಿಣಿ ಚಂದ್ರನ್.

English summary
Kannada Actor Prajwal Devaraj is getting married to Model cum Dancer Ragini Chandran this October. But who is Ragini Chandran? What is her background? Read the article to know.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada