For Quick Alerts
  ALLOW NOTIFICATIONS  
  For Daily Alerts

  ದೇವರಾಜ್ ಸೊಸೆ ರಾಗಿಣಿ ಚಂದ್ರನ್ ಬಗ್ಗೆ ಗಾಂಧಿನಗರದಲ್ಲಿ ಕಿವಿಗೆ ಬಿದ್ದ ಹೊಸ ಸುದ್ದಿ ಇದು.!

  By Harshitha
  |

  ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ವರ್ಷದ ಮೇಲಾಗಿದೆ. ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಮಾಡೆಲ್ ಕಮ್ ಡ್ಯಾನ್ಸರ್ ಎಂಬುದು ನಿಮಗೆಲ್ಲ ಗೊತ್ತಿರುವ ವಿಚಾರವೇ.[ಪ್ರಜ್ವಲ್ ದೇವರಾಜ್ ಮನದನ್ನೆ ರಾಗಿಣಿ ಚಂದ್ರನ್ ಕುರಿತು...]

  ಈಗಾಗಲೇ Khazana Jewellers, GRT Jewellers, ಬ್ರೂ ಸೇರಿದಂತೆ ಹಲವಾರು ಜಾಹೀರಾತುಗಳಲ್ಲಿ ಮಿಂಚಿರುವ ರಾಗಿಣಿ ಚಂದ್ರನ್ ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಲು ಮನಸ್ಸು ಮಾಡಿದ್ದಾರಂತೆ.

  ರಾಗಿಣಿ ಚಂದ್ರನ್ ಮುಂದಿನ ಹೆಜ್ಜೆ

  ರಾಗಿಣಿ ಚಂದ್ರನ್ ಮುಂದಿನ ಹೆಜ್ಜೆ

  ಮಾಡೆಲಿಂಗ್ ಲೋಕದ ಕೋಲ್ಮಿಂಚು ರಾಗಿಣಿ ಚಂದ್ರನ್ ಇದೀಗ ಚಿತ್ರರಂಗಕ್ಕೆ ಕಾಲಿಡಲು ನಿರ್ಧರಿಸಿದ್ದಾರಂತೆ ಎಂಬ ಸುದ್ದಿ ಎಲ್ಲೆಡೆ ಕೇಳಿಬರುತ್ತಿದೆ.[ಚಿತ್ರಗಳು; ಪ್ರಜ್ವಲ್ ದೇವರಾಜ್-ರಾಗಿಣಿ ಆರತಕ್ಷತೆಯಲ್ಲಿ ಗಣ್ಯರ ದಂಡು]

  ಯಾವ ಚಿತ್ರ.?

  ಯಾವ ಚಿತ್ರ.?

  ರಾಗಿಣಿ ಚಂದ್ರನ್ ಚಿತ್ರರಂಗಕ್ಕೆ ಕಾಲಿಡುತ್ತಿರಬಹುದು. ಆದ್ರೆ, ಬಿಗ್ ಬಜೆಟ್... ಕಮರ್ಶಿಯಲ್ ಸಿನಿಮಾದಲ್ಲಿ ನಟಿಸುತ್ತಿಲ್ಲ. ಬದಲಾಗಿ ಕಿರುಚಿತ್ರ (ಶಾರ್ಟ್ ಫಿಲ್ಮ್) ಒಂದರಲ್ಲಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರಂತೆ.[ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಮದುವೆಯ ಫೋಟೋ ಆಲ್ಬಂ]

  'ರಿಷಭಾಪ್ರಿಯ'

  'ರಿಷಭಾಪ್ರಿಯ'

  ರಾಗಿಣಿ ಚಂದ್ರನ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿರುವ 'ರಿಷಭಾಪ್ರಿಯ' ಕಿರುಚಿತ್ರಕ್ಕೆ ಆರ್.ಜೆ ಮಯೂರ್ ರಾಘವೇಂದ್ರ ಡೈರೆಕ್ಟರ್.

  ಪ್ರಜ್ವಲ್ ದೇವರಾಜ್ ಗೆ ಇಷ್ಟವಾಗಿದೆ ಕಥೆ

  ಪ್ರಜ್ವಲ್ ದೇವರಾಜ್ ಗೆ ಇಷ್ಟವಾಗಿದೆ ಕಥೆ

  ಕೆಲವೇ ದಿನಗಳ ಹಿಂದೆ ಪ್ರಜ್ವಲ್ ದೇವರಾಜ್ ರವರನ್ನ ಮಯೂರ್ ರಾಘವೇಂದ್ರ ಮೀಟ್ ಮಾಡಿ 'ರಿಷಭಾಪ್ರಿಯ' ಕಿರುಚಿತ್ರದ ಸ್ಕ್ರಿಪ್ಟ್ ವಿವರಿಸಿದ್ರಂತೆ. ಕಥೆ ಇಷ್ಟವಾಗಿದ್ರಿಂದ ಪ್ರಜ್ವಲ್ ದೇವರಾಜ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟರಂತೆ.

  ಬಣ್ಣದ ಲೋಕ ಹೊಸದೇನೂ ಅಲ್ಲ.!

  ಬಣ್ಣದ ಲೋಕ ಹೊಸದೇನೂ ಅಲ್ಲ.!

  ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಗೆ ಬಣ್ಣದ ಬದುಕು ಹೊಸದೇನೂ ಅಲ್ಲ. ಮಾಡೆಲ್ ಆಗಿದ್ದ ರಾಗಿಣಿ ಚಂದ್ರನ್ ರವರಿಗೆ ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಈ ಹಿಂದೆಯೂ ಬಂದಿತ್ತು. ಅದ್ಯಾವುದಕ್ಕೂ ಒಪ್ಪಿಕೊಳ್ಳದ ರಾಗಿಣಿ ಈಗ ಕಿರುಚಿತ್ರದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ.

  English summary
  Ragini Chandran, wife of Kannada Actor Prajwal Devaraj is all set act in Short Film 'Rishabhapriya', directed by RJ Mayur Raghavendra

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X