For Quick Alerts
  ALLOW NOTIFICATIONS  
  For Daily Alerts

  'ರಾಜಕುಮಾರ'ನ ಮುಂದೆ ಮಂಡಿಯೂರಿದ 'ಬಾಹುಬಲಿ-2'

  By Suneel
  |

  ಸಂತೋಷ್ ಆನಂದ್ ರಾಮ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಈಗಾಗಲೇ 75 ದಿನಗಳನ್ನು ಪೂರೈಸಿ ಶತ ದಿನಗಳತ್ತ ಕಾಲಿರಿಸಿದೆ. ಅಲ್ಲದೇ 'ಬೊಂಬೆ ಹೇಳುತೈತೆ' ಹಾಡು ಯೂಟ್ಯೂಬ್ ನಲ್ಲಿ 2 ಕೋಟಿ ವೀಕ್ಷಣೆ ಪಡೆಯುವುದರೊಂದಿಗೆ ಹೊಸ ದಾಖಲೆ ಬರೆದಿದೆ.[ಪುನೀತ್ 'ರಾಜಕುಮಾರ'ನಿಗೆ ಶತ್ರುವಾದ 'ಆ' ಕೇಬಲ್ ಚಾನಲ್.!]

  ಕನ್ನಡದ ಖ್ಯಾತ ಖಾಸಗಿ ಚಾನೆಲ್ ಗೆ ಸ್ಯಾಟೆಲೈಟ್ ಹಕ್ಕು ಸೇಲ್ ಆಗಿದ್ದ 'ರಾಜಕುಮಾರ' ಚಿತ್ರ, ಸನ್‌ ನೆಟ್‌ವರ್ಕ್‌ ನ ತಾಂತ್ರಿಕ ದೋ‍ಷದಿಂದ ಸಿನಿಮಾದ ದೃಶ್ಯಗಳು ಆನ್‌ಲೈನ್ ನಲ್ಲಿ ಸೋರಿಕೆಯಾಗಿವೆ ಎಂದು ನಿನ್ನೆಯಷ್ಟೇ ಸುದ್ದಿಯಾಗಿತ್ತು. ಆದರೆ 'ರಾಜಕುಮಾರ' ಚಿತ್ರ ಆನ್‌ಲೈನ್ ನಲ್ಲಿ ಸೋರಿಕೆ ಆದರೂ ಸಹ ಕನ್ನಡ ಕಲಾರಸಿಕರು ಚಿತ್ರವನ್ನು ಥಿಯೇಟರ್ ನಲ್ಲಿಯೇ ನೋಡುತ್ತಿದ್ದು ಕನ್ನಡತನವನ್ನು ಮೆರೆದಿದ್ದಾರೆ. ಅಂದಹಾಗೆ 'ರಾಜಕುಮಾರ' ಬಗ್ಗೆ ಲೇಟೆಸ್ಟ್ ಸುದ್ದಿ ಏನಂದ್ರೆ ಬೆಂಗಳೂರಿನಲ್ಲಿ ಈ ಚಿತ್ರ 'ಬಾಹುಬಲಿ-2' ಚಿತ್ರಕ್ಕೆ ಸೆಡ್ಡು ಹೊಡೆದು ಅತಿಹೆಚ್ಚು ಶೋಗಳ ಪ್ರದರ್ಶನ ಕಾಣುತ್ತಿದೆ. ಮುಂದೆ ಓದಿರಿ...

  'ಬಾಹುಬಲಿ' ಧೂಳಿಪಟ ಮಾಡಿದ 'ರಾಜಕುಮಾರ'

  'ಬಾಹುಬಲಿ' ಧೂಳಿಪಟ ಮಾಡಿದ 'ರಾಜಕುಮಾರ'

  ವರನಟ ಡಾ. ರಾಜ್ ಕುಮಾರ್ ಹೆಸರು ಉಳಿಸಿದ 'ರಾಜಕುಮಾರ' ಚಿತ್ರವೀಗ ಕರ್ನಾಟಕದಲ್ಲಿ ಕನ್ನಡ ಚಿತ್ರಗಳದ್ದೇ ಮೇಲುಗೈ ಎಂಬುದನ್ನು ಸಾಭೀತು ಪಡಿಸಿದೆ. ವಿಶ್ವದಾದ್ಯಂತ ಸಿನಿ ಪ್ರಿಯರ ಕಣ್ಣರಳಿಸಿದ 'ಬಾಹುಬಲಿ-2' ಚಿತ್ರಕ್ಕಿಂತ ಹೆಚ್ಚಿನ ಶೋಗಳ ಪ್ರದರ್ಶನವನ್ನು ಬೆಂಗಳೂರಿನಲ್ಲಿ 'ರಾಜಕುಮಾರ' ಚಿತ್ರ ಪಡೆಯುತ್ತಿದೆ.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

  ರಾಜಕುಮಾರನ ಮುಂದೆ ಮಂಡಿಯೂರಿದ ಬಾಹುಬಲಿ

  ರಾಜಕುಮಾರನ ಮುಂದೆ ಮಂಡಿಯೂರಿದ ಬಾಹುಬಲಿ

  ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರಕ್ಕೆ ಕ್ರಿಯೇಟ್ ಆಗಿದ್ದ ಹೈಪ್ ನೋಡಿದರೆ ಬೆಂಗಳೂರಿನಲ್ಲಿ ಅನ್ಯಭಾಷಿಕರೇ ಹೆಚ್ಚಿರುವ ಕಾರಣ ಕನ್ನಡ ಚಿತ್ರಗಳಿಗಿಂತ ಹೆಚ್ಚು ಪ್ರದರ್ಶನ ಕಾಣಬೇಕಿತ್ತು. ಆದರೆ ಬೆಂಗಳೂರಿನಲ್ಲಿ 'ರಾಜಕುಮಾರ' ಚಿತ್ರವೇ ಮೈಲುಗೈ ಸಾಧಿಸಿದ್ದು ಪ್ರತಿದಿನ 35 ಕ್ಕೂ ಹೆಚ್ಚು ಶೋ ಪ್ರದರ್ಶನ ಪಡೆಯುತ್ತಿದೆ. 'ಬಾಹುಬಲಿ-2' ಚಿತ್ರ ಕೇವಲ 21 ಶೋಗಳ ಪ್ರದರ್ಶನ ಪಡೆಯುತ್ತಿದೆ ಎಂಬುದು ಮೂಲಗಳಿಂದ ತಿಳಿದಿದೆ.[2 ಕೋಟಿ ವೀಕ್ಷಕರನ್ನ ಪಡೆದ ಪುನೀತ್ ರಾಜ್ ಕುಮಾರ್ ಹಾಡು]

  ಸಂತೋಷಗೊಂಡ ನಿರ್ದೇಶಕ ಸಂತೋಷ್ ಹೇಳಿದ್ದೇನು?

  ಸಂತೋಷಗೊಂಡ ನಿರ್ದೇಶಕ ಸಂತೋಷ್ ಹೇಳಿದ್ದೇನು?

  'ರಾಜಕುಮಾರ' ಚಿತ್ರ ಬೆಂಗಳೂರಿನಲ್ಲಿ 'ಬಾಹುಬಲಿ-2' ಚಿತ್ರಕ್ಕಿಂತ ಹೆಚ್ಚು ಶೋಗಳ ಪ್ರದರ್ಶನ ಕಾಣುತ್ತಿರುವ ಬಗ್ಗೆ ತಿಳಿದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಫುಲ್ ಹ್ಯಾಪಿ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ, "ಜನರು ನಿರೀಕ್ಷೆ ಮಾಡುವ ಉತ್ತಮ ಗುಣಮಟ್ಟದ ಕನ್ನಡ ಸಿನಿಮಾ 'ರಾಜಕುಮಾರ'. ಬಿಡುಗಡೆಗೂ ಮುನ್ನ ಚಿತ್ರದ ಯಶಸ್ಸಿನ ಬಗ್ಗೆ ನಮಗೆ ವಿಶ್ವಾಸವಿತ್ತು. ಕಾರಣ ಕೌಟುಂಬಿಕ ಮೌಲ್ಯಗಳನ್ನು ಈ ಚಿತ್ರ ಒಳಗೊಂಡಿತ್ತು" ಎಂದಿದ್ದಾರೆ.

  ಶತದಿನಗಳತ್ತ ಮುನ್ನುಗ್ಗುತ್ತಿರುವ 'ರಾಜಕುಮಾರ'

  ಶತದಿನಗಳತ್ತ ಮುನ್ನುಗ್ಗುತ್ತಿರುವ 'ರಾಜಕುಮಾರ'

  'ರಾಜಕುಮಾರ' ಚಿತ್ರ ಇಂದಿಗೆ 84 ದಿನಗಳನ್ನು ಪೂರೈಸಿದ್ದು, ನೂರು ದಿನಗಳತ್ತ ದಾಪುಗಾಲಿಡುತ್ತಿದೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೆ ಪ್ರಿಯಾ ಆನಂದ್ ಜೊತೆಯಾಗಿ ನಟಿಸಿದ್ದು, ವಿಜಯ್ ಕಿರಗಂದೂರ್ ಚಿತ್ರ ನಿರ್ಮಾಣ ಮಾಡಿದ್ದಾರೆ.[75 ದಿನಗಳನ್ನು ಪೂರೈಸಿದ 'ರಾಜಕುಮಾರ' ಕನ್ನಡದಲ್ಲಿ ಹಿಸ್ಟರಿ ಸೃಷ್ಟಿಸಿದ!]

  English summary
  Puneeth Rajkumar Starrer Kannada film 'Raajakumara' now has the highest shows in Bengaluru compared to 'Baahubali 2' Movie. 'Raajkumara' which has now completed 84 days in theaters is now being screened for 35 shows but Baahubali shows has come down to 21 in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X