For Quick Alerts
  ALLOW NOTIFICATIONS  
  For Daily Alerts

  75 ದಿನಗಳನ್ನು ಪೂರೈಸಿದ 'ರಾಜಕುಮಾರ' ಕನ್ನಡದಲ್ಲಿ ಹಿಸ್ಟರಿ ಸೃಷ್ಟಿಸಿದ!

  By Naveen
  |

  ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ 75 ದಿನಗಳನ್ನು ಪೂರೈಸಿದೆ. ಮಾರ್ಚ್ 24ಕ್ಕೆ ರಿಲೀಸ್ ಆಗಿದ್ದ 'ರಾಜಕುಮಾರ' ಚಿತ್ರ ನಿನ್ನೆಗೆ (ಜೂನ್ 6) ಸರಿಯಾಗಿ 75 ದಿನಗಳನ್ನು ಪೂರೈಸಿದೆ.

  ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಸಂತಸದಲ್ಲಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ 'ರಾಜಕುಮಾರ' ಚಿತ್ರದ ದಾಖಲೆ ಬಗ್ಗೆ ಇದೀಗ ಹೇಳಿಕೊಂಡಿದ್ದಾರೆ. ಮುಂದೆ ಓದಿ...[2 ಕೋಟಿ ವೀಕ್ಷಕರನ್ನ ಪಡೆದ ಪುನೀತ್ ರಾಜ್ ಕುಮಾರ್ ಹಾಡು]

  75 ದಿನಗಳು

  75 ದಿನಗಳು

  'ರಾಜಕುಮಾರ' ಸಿನಿಮಾ ಸುಮಾರು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 75 ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

  ಬೆಂಗಳೂರಿನಲ್ಲಿ

  ಬೆಂಗಳೂರಿನಲ್ಲಿ

  ಬೆಂಗಳೂರಿನಲ್ಲಿ 'ರಾಜಕುಮಾರ' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಮುಂದುವರೆದಿದ್ದು, 25ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಗಳಲ್ಲಿ 'ರಾಜಕುಮಾರ' ಚಿತ್ರ ಇಂದಿಗೂ ಪ್ರದರ್ಶನವಾಗುತ್ತಿದೆ.['ರಾಜಕುಮಾರ'ನ 'ಬೊಂಬೆ' ಹಾಡಿಗೆ ಮನಸೋತ ಪಾಕ್ ದೇಶದ ಯುವಕ]

  7185 ಪ್ರದರ್ಶನ

  7185 ಪ್ರದರ್ಶನ

  'ರಾಜಕುಮಾರ' ಸಿನಿಮಾ ಬರಿ ಮಲ್ಟಿಪ್ಲೆಕ್ಸ್ ಗಳಲ್ಲಿ 7185 ಬಾರಿ ಪ್ರದರ್ಶನವನ್ನು ಕಂಡಿದೆ. ಈ ಮೂಲಕ 'ರಾಜಕುಮಾರ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

  ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ

  ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ

  ಬೆಂಗಳೂರಿನ ನರ್ತಕಿ ಚಿತ್ರಮಂದಿರ, ಮೈಸೂರು, ಶಿವಮೊಗ್ಗ, ದಾವಣಗೆರೆ, ಹೊಸ ಪೇಟೆ, ಚಿತ್ರದುರ್ಗ ಬಹುತೇಕ ಜಿಲ್ಲೆಯ ಚಿತ್ರಮಂದಿರಗಳಲ್ಲಿಯೂ ಸಿನಿಮಾ ಯಶಸ್ವಿಯಾಗಿದೆ.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

  ಖುಷಿ ಹಂಚಿಕೊಂಡ ನಿರ್ದೇಶಕರು

  ಖುಷಿ ಹಂಚಿಕೊಂಡ ನಿರ್ದೇಶಕರು

  'ರಾಜಕುಮಾರ' ಚಿತ್ರ 75 ದಿನಗಳನ್ನು ಪೂರೈಸಿ ಹೊಸ ದಾಖಲೆಯನ್ನು ಮಾಡಿದ್ದ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.

  ಅಪ್ಪು ಅಭಿಮಾನಿಗಳ ಸಂಭ್ರಮ

  ಅಪ್ಪು ಅಭಿಮಾನಿಗಳ ಸಂಭ್ರಮ

  ಪುನೀತ್ ಅಭಿಮಾನಿಗಳು ವಿಶೇಷವಾದ ಪೋಸ್ಟರ್ ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ 'ರಾಜಕುಮಾರ' ಸಿನಿಮಾದ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.['ರಾಜಕುಮಾರ' ಚಿತ್ರ ನೋಡಿ 'ಪುನೀತ'ರಾದ ಮಾಜಿ ಪ್ರಧಾನಿ ದೇವೇಗೌಡ್ರು]

  100ನೇ ದಿನದತ್ತ

  100ನೇ ದಿನದತ್ತ

  'ರಾಜಕುಮಾರ' ಸಿನಿಮಾ ಸದ್ಯದಲ್ಲೇ 100 ದಿನಗಳನ್ನು ಕಂಪ್ಲೀಟ್ ಮಾಡಲಿದೆ. 'ಚೌಕ 'ಚಿತ್ರದ ನಂತರ ಈ ವರ್ಷ ಶತಕ ಬಾರಿಸುತ್ತಿರುವ ಎರಡನೇ ಚಿತ್ರ ಇದಾಗಿದೆ.['ಪೋಸ್ ಲೈಕ್ ರಾಜಕುಮಾರ' ಸ್ಪರ್ಧೆಯಲ್ಲಿ ಗೆದ್ದಿದ್ದು ಇವರ ಪೋಸ್]

  English summary
  Power Star Puneeth Rajkumar Starrer 'Raajakumara' movie completes 75 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X