»   » 2 ಕೋಟಿ ವೀಕ್ಷಕರನ್ನ ಪಡೆದ ಪುನೀತ್ ರಾಜ್ ಕುಮಾರ್ ಹಾಡು

2 ಕೋಟಿ ವೀಕ್ಷಕರನ್ನ ಪಡೆದ ಪುನೀತ್ ರಾಜ್ ಕುಮಾರ್ ಹಾಡು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸದ್ಯ, 75 ದಿನಗಳನ್ನ ಪೂರೈಸಿರುವ 'ರಾಜಕುಮಾರ' 100ನೇ ದಿನದತ್ತ ಮುನ್ನಗ್ಗುತ್ತಿದೆ. ಹೀಗಿರುವಾಗ, ಅಪ್ಪು ಅವರ ಹಾಡು ಹೊಸ ದಾಖಲೆ ನಿರ್ಮಿಸಿದೆ.[ಅಣ್ಣಾವ್ರ ವರ್ಷನ್ ನಲ್ಲಿ ರಿಲೀಸ್ ಆಯ್ತು 'ಬೊಂಬೆ ಹೇಳುತೈತೆ' ಹಾಡು]

ಹೌದು, 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡು ಯ್ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಮಾಡಿದೆ. ಇಲ್ಲಿಯವರೆಗೂ (ಜೂನ್ 5) ಯ್ಯೂಟ್ಯೂಬ್ ನಲ್ಲಿ ಈ ಹಾಡು 2 ಕೋಟಿ ವೀಕ್ಷಕರನ್ನ ಹೊಂದಿದೆ. ಮಾರ್ಚ್ 9 ರಂದು 'ಬೊಂಬೆ ಹೇಳುತೈತೆ' ಮೇಕಿಂಗ್ ಹಾಡು ಯ್ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿತ್ತು.[ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.!]


2 Crore Viewers For Bombe Heluthaithe Song

ಸಂತೋಷ್ ಆನಂದ್ ರಾಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಗಾಯಕ ವಿಜಯ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿತ್ತು. ವಿ.ಹರಿಕೃಷ್ಣ ಅವರ ಸಂಗೀತ ಒಳಗೊಂಡಿದೆ. ಇದಕ್ಕೂ ಮುಂಚೆ 'ಕಿರಿಕ್ ಪಾರ್ಟಿ' ಚಿತ್ರದ 'ಬೆಳಗೆದ್ದು ಯಾರ ಮುಖವಾ ನಾನು ನೋಡಲಿ' ಹಾಡು ಕೂಡ ಯ್ಯೂಟ್ಯೂಬ್ ವೀಕ್ಷಕರ ಸಂಖ್ಯೆಯನ್ನ 2 ಕೋಟಿ ಹೆಚ್ಚಿಸಿಕೊಂಡು 3 ಕೋಟಿಯತ್ತ ಹೋಗುತ್ತಿದೆ.['ಬೊಂಬೆ ಹೇಳುತೈತೆ' ಹಾಡಿಗೆ ಹರಿಕೃಷ್ಣ ಟ್ಯೂನ್ ಮಾಡಿದ ವಿಡಿಯೋ ನೋಡಿ!]


'ರಾಜಕುಮಾರ' ಚಿತ್ರದ ಬೊಂಬೆ ಹೇಳುತೈತೆ ಹಾಡು ಮುಂದೆ ಇದೆ ಕೇಳಿ.............


English summary
Puneeth Rajkumar's Bombe Heluthaithe Song Gets 2 Crore Viewers in Youtube. The Song Released on March 9th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada