»   » ಪುನೀತ್ 'ರಾಜಕುಮಾರ' ಬಿಡುಗಡೆಗೆ ಡೇಟ್ ಫಿಕ್ಸ್

ಪುನೀತ್ 'ರಾಜಕುಮಾರ' ಬಿಡುಗಡೆಗೆ ಡೇಟ್ ಫಿಕ್ಸ್

Posted By:
Subscribe to Filmibeat Kannada

'ಕನ್ನಡ ರಾಜರತ್ನ' ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಹೈ ವೋಲ್ಟೇಜ್ ಟ್ರೈಲರ್, ಬಹುದೊಡ್ಡ ತಾರಾಬಳಗ, ಪದೇ ಪದೇ ಕೇಳಬೇಕೆನಿಸುವ ಹಾಡುಗಳು ಹೀಗೆ ಹಲವು ವಿಶೇಷತೆಗಳಿಂದ ಸ್ಯಾಂಡಲ್ ವುಡ್ ಮಾತ್ರವಲ್ಲದೇ, ಪರಭಾಷೆಯಲ್ಲೂ ಜೋರಾಗಿ ಸದ್ದು ಮಾಡುತ್ತಿದೆ. ಜೊತೆಗೆ ಪರಭಾಷಿಗರು ಚಿತ್ರ ನೋಡುವಂತೆ ಕ್ರೇಜ್ ಹೆಚ್ಚಿಸಿದೆ.[ಪರಭಾಷೆಯಲ್ಲಿ 'ರಾಜಕುಮಾರ'ನ ಹವಾ ಹೇಗಿದೆ ನೋಡಿ ಸ್ವಾಮಿ!]

ಕನ್ನಡ ಕಲಾಭಿಮಾನಿಗಳಲ್ಲಿ ಬಹು ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರ ತೆರೆ ಮೇಲೆ ಯಾವಾಗ ಬರುತ್ತೆ ಅನ್ನೋ ಕುತೂಹಲ ದಿನದಿಂದ ದಿನಕ್ಕೇ ಹೆಚ್ಚಾಗುತ್ತಲೇ ಇತ್ತು. ಈ ಕ್ಯೂರಿಯಾಸಿಟಿಗೆ ಈಗ ಬ್ರೇಕ್ ಬಿದ್ದಿದ್ದು, 'ರಾಜಕುಮಾರ' ಚಿತ್ರ ರಿಲೀಸ್ ಗೆ ದಿನಗಣನೆ ಶುರುವಾಗಿದೆ.


Puneeth Rajkumar Starrer 'Rajakumara' Movie releasing on March 24

ಹೌದು, 'ರಾಜಕುಮಾರ' ಬಿಡುಗಡೆ ದಿನಾಂಕ ರಿವೀಲ್ ಆಗಿದ್ದು, ಚಿತ್ರತಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಯುಗಾದಿ ಹಬ್ಬಕ್ಕೆ ಉಡುಗೊರೆಯಾಗಿ ಮಾರ್ಚ್ 24 ರಂದು ಚಿತ್ರವನ್ನು ತೆರೆ ಮೇಲೆ ತರುತ್ತಿದೆ. ರಾಜ್ಯಾದ್ಯಂತ 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ರಾಜಕುಮಾರ' ಬಿಡುಗಡೆ ಆಗುತ್ತಿದೆ.['ಯ್ಯೂಟ್ಯೂಬ್'ನಲ್ಲಿ 'ರಾಜಕುಮಾರ' ನಂಬರ್-1]


ಈ ಹಿಂದೆ 'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಂತೋಷ್ ಆನಂದ್ ರಾಮ್ 'ರಾಜಕುಮಾರ' ನಿರ್ದೇಶನ ಮಾಡಿದ್ದಾರೆ. ವಿ.ಹರಿಕೃಷ್ಣ ಸಂಗೀತವಿದ್ದು, ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಮಾಡಿದೆ.[ಬಿಡುಗಡೆಯಾದ ಮೊದಲ ದಿನವೇ ದಾಖಲೆ ಬರೆದ 'ರಾಜಕುಮಾರ' ಹಾಡು!]


ಇದೇ ಮೊದಲ ಬಾರಿಗೆ ಸೌತ್ ಸುಂದರಿ ಪ್ರಿಯಾ ಆನಂದ್ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಚೊಚ್ಚಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಡಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರೈ, ತಮಿಳು ನಟ ಶರತ್ ಕುಮಾರ್, ಅನಂತ್ ನಾಗ್, ರಂಗಾಯಣ ರಘು, ದತ್ತಣ್ಣ, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ ಹಾಗೂ 'ಮಾಸ್ತಿುಡಿ' ಚಿತ್ರದ ಕ್ಲೈಮ್ಯಾಕ್ಸ್ ದುರಂತದಲ್ಲಿ ಸಾವುಗೀಡಾಗಿದ್ದ ಖಳನಟ ಅನಿಲ್ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

English summary
Anand Ram Santhosh Directorial, Puneeth Rajkumar Starrer 'Rajakumara' releasing on March 24.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada