»   » ಬಿಡುಗಡೆಯಾದ ಮೊದಲ ದಿನವೇ ದಾಖಲೆ ಬರೆದ 'ರಾಜಕುಮಾರ' ಹಾಡು!

ಬಿಡುಗಡೆಯಾದ ಮೊದಲ ದಿನವೇ ದಾಖಲೆ ಬರೆದ 'ರಾಜಕುಮಾರ' ಹಾಡು!

Written By:
Subscribe to Filmibeat Kannada
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ರಾಜಕುಮಾರ' ಚಿತ್ರದ ಟೈಟಲ್ ಸಾಂಗ್ ನಿನ್ನೆ (ಫೆಬ್ರವರಿ 17) ರಿಲೀಸ್ ಆಗಿತ್ತು. ಇದೀಗ ರಿಲೀಸ್ ಆದ ಮೊದಲ ದಿನವೇ ಈ ಹಾಡು ಹೊಸ ದಾಖಲೆ ಬರೆದಿದೆ.

ಶುಕ್ರವಾರ ಸಂಜೆ 4 ಗಂಟೆಗೆ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದ 'ರಾಜಕುಮಾರ' ಚಿತ್ರದ ಟೈಟಲ್ ಹಾಡನ್ನ ಕೇವಲ 6 ಗಂಟೆಗಳಲ್ಲಿ 1 ಲಕ್ಷ ಜನ ವೀಕ್ಷಿಸಿದ್ದಾರೆ. ಇದು ಕನ್ನಡದ ಮಟ್ಟಿಗೆ ಅತಿ ವೇಗವಾಗಿ 1 ಲಕ್ಷ ಜನ ನೋಡಿರುವ ಹಾಡು ಎಂಬ ಹೊಸ ದಾಖಲೆಯಾಗಿದೆ ಎನ್ನಲಾಗುತ್ತಿದೆ. ಇನ್ನೂ 17 ಗಂಟೆಗಳಲ್ಲಿ 'ರಾಜರ ರಾಜ' ಹಾಡನ್ನ ಸುಮಾರು 2 ಲಕ್ಷಕ್ಕಿಂತ ಅಧಿಕ ಜನರು ವೀಕ್ಷಿಸಿದ್ದಾರೆ.[ಎಕ್ಸ್ ಕ್ಲೂಸಿವ್: 'ರಾಜಕುಮಾರ' ಚಿತ್ರದ 'ರಾಜರ ರಾಜ' ಹಾಡು ರಿಲೀಸ್]

Raajakumara' Movie Title Song Create Record

'ಯಾರಿವನು ಕನ್ನಡದವನು.......' ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿಗೆ ಚಿತ್ರದ ನಿರ್ದೇಶಕರೇ ಆಗಿರುವ ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿದ್ದು, ತೆಲುಗು ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀ ಪ್ರಸಾದ್ ಹಾಡಿದ್ದಾರೆ. ಇನ್ನೂ ಈ ಹಾಡಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.[ಪರಭಾಷೆ ನಿರ್ದೇಶಕರ ಪ್ರೀತಿಗೆ ಪಾತ್ರರಾದ 'ಪವರ್ ಸ್ಟಾರ್' ಪುನೀತ್]

ಪುನೀತ್ ರಾಜ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ತಮಿಳು ನಟ ಶರತ್ ಕುಮಾರ್,, ಪ್ರಕಾಶ್ ರೈ, ಅನಂತ್ ನಾಗ್, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು ಸೇರಿದಂತೆ ಹಲವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

English summary
Kannada Actor Puneeth Rajkumar Starrer 'Raajakumara' Title Song Releasing Yesterday (February 17th). Now Song Create A New Record in Youtube. The songs, that were released on YouTube Friday, garnered more than 2 lakh views in less than 24 hour...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada