ಡಬ್ಬಿಂಗ್ : ಶಿವಣ್ಣ ಬಗ್ಗೆ ರಾಜೇಂದ್ರ ಸಿಂಗ್ ಬಾಬು
'ಸ್ಟ್ರೇಟ್ ಹಿಟ್' ಕಾರ್ಯಕ್ರಮದಲ್ಲಿ ಮಾತು ಮುಂದುವರಿಸುತ್ತಾ ರಾಜೇಂದ್ರ ಸಿಂಗ್ ಬಾಬು, ಕನ್ನಡ ಚಿತ್ರೋದ್ಯಮದ ಅಭಿವೃದ್ದಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಲು ಮುಖ್ಯಮಂತ್ರಿಗಳು ಸಿದ್ದರಾಗಿದ್ದಾರೆ.
ಮೈಸೂರಿನಲ್ಲಿ ಚಿತ್ರ ನಿರ್ಮಾಣಕ್ಕೆ ಸಂಬಂಧಪಟ್ಟ ಚಟುವಟಿಕೆಗೆ ಇಪ್ಪತ್ತು ಎಕರೆ ನೀಡಲು ಸರಕಾರಕ್ಕೆ ಮನವಿ ಮಾಡಲಾಗಿದೆ. ಸಿಎಂ ಇದಕ್ಕೆ ಸೂಕ್ತವಾಗಿ ಸ್ಪಂಧಿಸಿದ್ದಾರೆಂದು ಬಾಬು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಡಬ್ಬಿಂಗ್ ಬಗ್ಗೆ ತನ್ನ ನಿಲುವೇನು ಎಂದು ಸ್ಪಷ್ಟ ಪಡಿಸದ ಬಾಬು, ಅಡ್ಡಗೋಡೆಯ ಮೇಲೆ ದೀಪವನ್ನಿಟ್ಟಿದ್ದಾರೆ. ಡಬ್ಬಿಂಗ್ ಬೇಕೋ ಅಥವಾ ಬೇಡವೋ ಎನ್ನುವುದರ ಬಗ್ಗೆ ಬಾಬು ಅವರಿಂದ ಸೂಕ್ತ ಉತ್ತರ ಬರಲಿಲ್ಲ.

ಡಬ್ಬಿಂಗ್ ವಿಚಾರದಲ್ಲಿ ನನಗೆ ಮತ್ತು ಶಿವಣ್ಣ ನಡುವೆ ಮನಸ್ತಾಪ ಇದೆ ಎನ್ನುವ ಮಾತನ್ನು ಬಾಬು ಕಾರ್ಯಕ್ರಮದಲ್ಲಿ ಅಲ್ಲಗಳೆದಿದ್ದಾರೆ. ಶಿವಣ್ಣ ತನ್ನ ನಿಲುವನ್ನು ಪ್ರಕಟಿಸಿದ್ದಾರೆ. ನನ್ನ ಬಗ್ಗೆ ಎಷ್ಟೋ ಬಾರಿ, ಡಬ್ಬಿಂಗ್ ವಿಚಾರದಲ್ಲಿ ಬಾಬು ಅವರ ನಿಲುವು ಅವರ ವೈಯಕ್ತಿಕ ಅಭಿಪ್ರಾಯ ಎಂದು ಶಿವಣ್ಣ ಹೇಳಿದ್ದನ್ನು ಕಾರ್ಯಕ್ರಮದಲ್ಲಿ ಬಾಬು ಸ್ಮರಿಸಿಕೊಂಡಿದ್ದಾರೆ.
ನಾನು ಎಷ್ಟೋ ಸಿನಿಮಾಗಳನ್ನು ನಿರ್ಮಿಸಿದ್ದೇನೆ. ಎಂಬತ್ತು, ತೊಂಬತ್ತರ ದಶಕದಲ್ಲಿದ್ದ ಕಥೆಯಲ್ಲಿನ ತಾಕತ್ತು ಈಗಿನ ಕನ್ನಡ ಚಿತ್ರಗಳಿಗಿಲ್ಲ. ಚಿತ್ರಗಳು ಪದೇ ಪದೇ ಸೋಲುತ್ತಿರುವುದಕ್ಕೆ ಸೂಕ್ತ ಕಥೆ ಇಲ್ಲದೇ ಇರುವುದು ಒಂದು ಕಾರಣ ಎಂದು ಬಾಬು ಅಭಿಪ್ರಾಯ ಪಟ್ಟಿದ್ದಾರೆ.
ಚಿತ್ರ ನಿರ್ಮಾಣ ಎನ್ನುವುದು ಈಗ ವ್ಯಾಪಾರ ವಾಗಿರುವುದೂ ಇದಕ್ಕೆ ಕೊಡಬಹುದಾದ ಮತ್ತೊಂದು ಕಾರಣ. ಅತಿಯಾದ ರಿಮೇಕ್ ಚಿತ್ರಗಳಿಂದ ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಿಲ್ಲ ಎನ್ನುವುದು ನನ್ನ ಅನಿಸಿಕೆ ಎಂದು ಬಾಬು ಕಾರ್ಯಕ್ರಮದಲ್ಲಿ ಖೇದ ವ್ಯಕ್ತ ಪಡಿಸಿದ್ದಾರೆ.


Click it and Unblock the Notifications











