»   » 15 ಭಾಷೆಗಳಲ್ಲಿ ಬರಲಿದೆ ಸೂಪರ್ ಸ್ಟಾರ್ ರಜನಿಕಾಂತ್ '2.0' ಸಿನಿಮಾ

15 ಭಾಷೆಗಳಲ್ಲಿ ಬರಲಿದೆ ಸೂಪರ್ ಸ್ಟಾರ್ ರಜನಿಕಾಂತ್ '2.0' ಸಿನಿಮಾ

Posted By:
Subscribe to Filmibeat Kannada

'2.0' ಚಿತ್ರ ಸ್ಟೈಲ್ ಕಿಂಗ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿ ಮಾಡಿದೆ. ಇದೀಗ ಚಿತ್ರತಂಡದಿಂದ ಮತ್ತೊಂದು ದೊಡ್ಡ ಸುದ್ದಿ ಹೊರ ಬಂದಿದೆ.

ರಜನಿ ಅವರ '2.0' ಸಿನಿಮಾ ಬರೋಬ್ಬರಿ 15 ಭಾಷೆಗಳಲ್ಲಿ ಬಿಡುಗಡೆ ಆಗಲಿದೆಯಂತೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ 15 ಭಾಷೆಗಳಲ್ಲಿ ಸಿನಿಮಾವನ್ನು ಡಬ್ ಮಾಡಿ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆಯಂತೆ.[ರಜಿನಿ ಕಾಂತ್ ಅಭಿನಯದ '2.0' ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್]

Rajinikanth starrer '2.0' to release in 15 languages.

'ಬಾಹುಬಲಿ' ಮತ್ತು 'ದಂಗಲ್' ಸಿನಿಮಾಗಳು ಚೀನಾ ಸೇರಿದಂತೆ ವಿದೇಶಿ ಭಾಷೆಗಳಲ್ಲಿಯೂ ಕೋಟಿ ಕೋಟಿ ಹಣ ಗಳಿಸಿತ್ತು. ಅದೇ ಕಾರಣದಿಂದ ಈಗ '2.0' ಸಿನಿಮಾವನ್ನು 15 ವಿವಿಧ ಭಾಷೆಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.['2.0' ಚಿತ್ರದಲ್ಲಿ ರಜನಿ ಹೀರೋ ಅಲ್ಲ, ಅಕ್ಷಯ್ ಹೀರೋ ಅಂತೆ]

Rajinikanth starrer '2.0' to release in 15 languages.

ಶಂಕರ್ ನಿರ್ದೇಶಕದ ಈ ಸಿನಿಮಾ ಭಾರತ ಚಿತ್ರರಂಗದ ದೊಡ್ಡ ಸಿನಿಮಾಗಳಲ್ಲಿ ಒಂದಾಗಿದೆ. ಚಿತ್ರ ಬರೋಬ್ಬರಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ಆಮಿ ಜಾಕ್ಸನ್ ರಜನಿಕಾಂತ್ ಅವರಿಗೆ ನಾಯಕಿಯಾಗಿದ್ದಾರೆ.[ರಜನಿಕಾಂತ್ '2.0' ಚಿತ್ರದ ಫಸ್ಟ್ ಲುಕ್ ರಿಲೀಸ್]

English summary
Rajinikanth starrer '2.0' movie planning to be release in 15 languages. the movie is directed by Shankar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada