»   » ರಜಿನಿ ಕಾಂತ್ ಅಭಿನಯದ '2.0' ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

ರಜಿನಿ ಕಾಂತ್ ಅಭಿನಯದ '2.0' ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

Written By:
Subscribe to Filmibeat Kannada

ಸೂಪರ್ ಸ್ಟಾರ್ ರಜಿನಿ ಕಾಂತ್ ಮತ್ತು ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ, ಬಹುನಿರೀಕ್ಷಿತ ಸಿನಿಮಾ 'ಎಂಧಿರನ್ 2.0' ಚಿತ್ರದ ಟೀಸರ್ ಮತ್ತು ಟ್ರೈಲರ್ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಪ್ರಸ್ತುತದಲ್ಲಿ ಸಿನಿಮಾ ದ ಅಂತಿಮ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡ ರಜಿನಿ ಕಾಂತ್ ಅವರ ಅಭಿಮಾನಿಗಳಿಗಾಗಿ ಈ ಆಶ್ಚರ್ಯಕರ ಮಾಹಿತಿ ನೀಡಿದೆ.['ಐ' ಸುಂದರಿ ಆಮಿ ಜಾಕ್ಸನ್ ಬಿಕಿನಿ ಬಿನ್ನಾಣ ಬೆಡಗು]

ಸ್ಟಾರ್ ಡೈರೆಕ್ಟರ್ ಶಂಕರ್ ಆಕ್ಷನ್ ಕಟ್ ಹೇಳುತ್ತಿರುವ, ಅಕ್ಷಯ್ ಕುಮಾರ್ ವಿಲನ್ ಸೇಡ್ ನಲ್ಲಿ ಕಾಣಿಸಿಕೊಂಡಿರುವ 'ಎಂಧಿರನ್ 2.0' ಚಿತ್ರದ ಮೊದಲ ಟ್ರೈಲರ್ ಅನ್ನು ತಮಿಳಿನ ಹೊಸ ವರ್ಷ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತಿದೆಯಂತೆ. 'ಎಂಧಿರನ್ 2.0' ಟ್ರೈಲರ್ ಬಿಡುಗಡೆ ದಿನಾಂಕ ಮತ್ತು ಚಿತ್ರದ ವಿಶೇಷತೆ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿ..

'ಎಂಧಿರನ್ 2.0' ಟ್ರೈಲರ್

ಭಾರೀ ಕುತೂಹಲ ಕೆರಳಿಸಿರುವ ಸೂಪರ್ ಸ್ಟಾರ್ ರಜಿನಿ ಕಾಂತ್ ಅಭಿನಯದ 'ಎಂಧಿರನ್ 2.0' ಚಿತ್ರದ ಮೊದಲ ಟ್ರೈಲರ್ ಅನ್ನು ಚಿತ್ರತಂಡ ಏಪ್ರಿಲ್ 14 ರಂದು ತಮಿಳಿನ ಹೊಸ ವರ್ಷದ ಸಂದಭ್ರದಲ್ಲಿ ಬಿಡುಗಡೆ ಮಾಡಲಿದೆಯಂತೆ.['2.0' ಚಿತ್ರದಲ್ಲಿ ರಜನಿ ಹೀರೋ ಅಲ್ಲ, ಅಕ್ಷಯ್ ಹೀರೋ ಅಂತೆ]

ದುಬಾರಿ ಬಜೆಟ್ ಸಿನಿಮಾ

ಭಾರತೀಯ ಚಿತ್ರರಂಗದಲ್ಲೇ ಮೊಟ್ಟ ಮೊದಲು ಅತೀ ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಸಿನಿಮಾ 'ಎಂಧಿರನ್ 2.0'. ರಜಿನಿ ಕಾಂತ್ ಅವರ 'ಎಂಧಿರನ್ 2.0' ಚಿತ್ರದ ಬಜೆಟ್ ಬರೋಬ್ಬರಿ 350 ಕೋಟಿ ಆಗಿದ್ದು, 'ಬಾಹುಬಲಿ 2' ಚಿತ್ರಕ್ಕಿಂತ ಎರಡು ಪಟ್ಟು ಬಂಡವಾಳ ಹೂಡಲಾಗಿದೆ. 'ಬಾಹುಬಲಿ-ದಿ ಕನ್ ಕ್ಲೂಶನ್' ಚಿತ್ರವನ್ನು 200 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿದೆ.[ಸೂಪರ್ ಸ್ಟಾರ್ ರಜಿನಿ ಕೈ ಹಿಡಿದ ಬಿಗ್ ಬಿ ಅಮಿತಾಭ್ ಬಚ್ಚನ್]

ಹುಚ್ಚು ಸೈನ್ ಟಿಸ್ಟ್ ಅಕ್ಷಯ್ ಕುಮಾರ್

'ಎಂಧಿರನ್ 2.0' ಚಿತ್ರದಲ್ಲಿ ಅಕ್ಷಯ್ ಕುಮಾರ್ ಡಾ.ರಿಚ್ಚರ್ಡ್ ಎಂಬ ಹುಚ್ಚು ಸೈನ್‌ ಟಿಸ್ಟ್ ಆಗಿ, ರಜಿನಿ ಕಾಂತ್ ಅವರಿಗೆ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ಹಿಂದಿನ ಪಾತ್ರದಲ್ಲೇ ಮುಂದುವರೆದಿದ್ದಾರೆ ರಜಿನಿ

'ಎಂದಿರನ್' ಚಿತ್ರದಲ್ಲಿ ನಿರ್ವಹಿಸಿದ್ದ ಡಾ ವಸೀಗರನ್ ಮತ್ತು ಕಿಟ್ಟಿ ಪಾತ್ರವನ್ನೇ ರಜಿನಿ ಅವರು 'ಎಂಧಿರನ್ 2.0' ಚಿತ್ರದಲ್ಲಿಯೂ ಮುಂದುವರೆಸಿದ್ದಾರೆ.

'ಎಂಧಿರನ್ 2.0' ಚಿತ್ರದ ನಟಿ ಇವರು..

ಬ್ರಿಟಿಷ್ ನಟಿ ಕಮ್ ಮಾಡೆಲ್ ಆಮಿ ಜಾಕ್ಸನ್ ಅವರು ತಮಿಳು ನಟ ವಿಕ್ರಂ ಅವರ ಜೊತೆ 'ಐ' ಚಿತ್ರದ ಮೂಲಕ ಕಾಣಿಸಿಕೊಂಡ ನಂತರ ಈಗ ಮತ್ತೊಮ್ಮೆ ಕಾಲಿವುಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, 'ಎಂಧಿರನ್ 2.0' ಚಿತ್ರದಲ್ಲಿ ಫೀಮೇಲ್ ಲೀಡ್ ರೋಲ್ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ನೀಡಿದ್ದಾರೆ.

English summary
The date for the much awaited teaser trailer of Akshay Kumar, Rajinikanth's '2.0' is out! According to the reports, the makers of the film are all set to release the first trailer of the film on occasion of Tamil New Year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada