For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ '2.0' ಚಿತ್ರದ ಫಸ್ಟ್ ಲುಕ್ ರಿಲೀಸ್

  By Bharath Kumar
  |

  ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ '2.0 ('ರೋಬೋ-2) ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

  2010 ರಲ್ಲಿ ಬಿಡುಗಡೆಯಾಗಿದ್ದ 'ಎಂಥಿರನ್' ಚಿತ್ರದ ಮುಂದುವರೆದ ಭಾಗ ಇದಾಗಿದ್ದು, ವಿಶ್ವದಾದ್ಯಂತ ಕುತೂಹಲ ಹುಟ್ಟುಹಾಕಿದೆ. ಖ್ಯಾತ ನಿರ್ದೇಶಕ ಶಂಕರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಭಾರತೀಯ ಚಿತ್ರರಂಗದ ಅತಿ ದೊಡ್ಡ ಬಜೆಟ್ ಸಿನಿಮಾವಾಗಿ ಮೂಡಿಬರುತ್ತಿರುವ '2.0', ತನ್ನ ಮೊದಲ ಪೋಸ್ಟರ್ ನಿಂದ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಮುಂದೆ ಓದಿ....

  '2.0' ಫಸ್ಟ್ ಲುಕ್ ರಿಲೀಸ್

  '2.0' ಫಸ್ಟ್ ಲುಕ್ ರಿಲೀಸ್

  ಸಿನಿಮಾ ಶುರುವಾದಗನಿಂದ ಚಿತ್ರಜಗತ್ತಿನಲ್ಲಿ ಬಾರಿ ಕುತೂಹಲ ಹುಟ್ಟುಹಾಕಿದ್ದ '2.0' ಚಿತ್ರದ ಫಸ್ಟ್ ಲುಕ್ ನಿನ್ನೆ (ನವೆಂಬರ್ 20) ಮುಂಬೈ ನಲ್ಲಿ ಬಿಡುಗಡೆಯಾಗಿದೆ.

  ಫಸ್ಟ್ ಲುಕ್ ರಿಲೀಸ್ ಮಾಡಿದ ರಜನಿ

  ಫಸ್ಟ್ ಲುಕ್ ರಿಲೀಸ್ ಮಾಡಿದ ರಜನಿ

  '2.0' ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ನ ಸೂಪರ್ ಸ್ಟಾರ್ ರಜನಿಕಾಂತ್ ರಿಲೀಸ್ ಮಾಡಿದರು.

  ಸಲ್ಮಾನ್ ಖಾನ್ ಗೆಸ್ಟ್

  ಸಲ್ಮಾನ್ ಖಾನ್ ಗೆಸ್ಟ್

  ಬಹುನಿರೀಕ್ಷಿತ 'ರೋಬೋ-2' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅತಿಥಿಯಾಗಿ ಆಗಮಿಸಿದ್ದರು. ಈ ಹಿಂದೆ ಕಮಲ್ ಹಾಸನ್, ಹಾಗೂ ಶಾರುಖ್ ಖಾನ್ ಬರುತ್ತಾರೆ ಎನ್ನಲಾಗಿತ್ತು. ಆದ್ರೆ, ಅವರಿಬ್ಬರ ಅನುಪಸ್ಥಿತಿಯಲ್ಲಿ ಸಲ್ಲು ಬಾಯ್ ಆಗಮಿಸಿದ್ದರು.

  6 ಕೋಟಿ ವೆಚ್ಚ

  6 ಕೋಟಿ ವೆಚ್ಚ

  '2.0' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮಕ್ಕೆ ಬರೋಬ್ಬರಿ 6 ಕೋಟಿಯನ್ನ ಚಿತ್ರತಂಡ ಖರ್ಚು ಮಾಡಿದೆ.

  ಕರಣ್ ಜೋಹರ್ ನಿರೂಪಣೆ

  ಕರಣ್ ಜೋಹರ್ ನಿರೂಪಣೆ

  ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ '2.0' ಕಾರ್ಯಕ್ರಮವನ್ನ, ಬಾಲಿವುಡ್ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಿರೂಪಣೆ ಮಾಡಿದ್ದು, ವಿಶೇಷವಾಗಿತ್ತು.

  '2.0' ಪೋಸ್ಟರ್ ಸ್ಪೆಷಾಲಿಟಿ

  '2.0' ಪೋಸ್ಟರ್ ಸ್ಪೆಷಾಲಿಟಿ

  ನಿನ್ನೆ (ನವೆಂಬರ್ 20) ಬಿಡುಗಡೆಯಾದ ಫಸ್ಟ್ ಪೋಸ್ಟರ್ ತುಂಬಾ ಸ್ಪೆಷಲ್ ಆಗಿದೆ. '2.0' ಅಂತಾ ಚಿತ್ರದ ಟೈಟಲ್ ಜೊತೆಗೆ ಸೂಪರ್ ಸ್ಟಾರ್ ರಜನಿಕಾಂತ್, ಅಕ್ಷಯ್ ಕುಮಾರ್, ನಿರ್ದೇಶಕ ಶಂಕರ್ ಹಾಗೂ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರ ಹೆಸರನ್ನ ಒಳಗೊಂಡಿದ್ದು, ಅಕ್ಷಯ್ ಕುಮಾರ್ ಅವರ ಗೆಟಪ್ ಕೂಡ ಪೋಸ್ಟರ್ ಮೇಲಿದೆ.

  'ಬಾಹುಬಲಿ' ದಾಖಲೆ ಮುರಿದ '2.0'

  'ಬಾಹುಬಲಿ' ದಾಖಲೆ ಮುರಿದ '2.0'

  ಇದುವರೆಗೂ ಭಾರತೀಯ ಚಿತ್ರರಂಗದಲ್ಲಿ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿತ್ತು. ಆದ್ರೆ, ಈಗ ರಜನಿ ಅಬಿನಯದ '2.0', ಅದಕ್ಕಿಂತ ದೊಡ್ಡ ಬಜೆಟ್ ಸಿನಿಮಾ ಆಗಿ ಮೂಡಿಬರುತ್ತಿದೆ.

  360 ಕೋಟಿ ವೆಚ್ಚದ '2.0'

  360 ಕೋಟಿ ವೆಚ್ಚದ '2.0'

  'ಬಾಹುಬಲಿ' ಚಿತ್ರದ ಬಜೆಟ್ 250 ಕೋಟಿ. ಆದ್ರೆ, ಶಂಕರ್ ನಿರ್ದೇಶನ ಮಾಡಿರುವ '2.0' ಚಿತ್ರದ ಬಜೆಟ್ ಸುಮಾರು 360 ಕೋಟಿ ಆಗಿದೆ ಎನ್ನಲಾಗಿದೆ.

  ಮತ್ತೆ 'ರೋಬೋ' ಆದ ರಜನಿ

  ಮತ್ತೆ 'ರೋಬೋ' ಆದ ರಜನಿ

  'ಕಬಾಲಿ' ಚಿತ್ರದ ನಂತರ ರಜನಿಕಾಂತ್ ಅಭಿನಯದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ '2.0'. ಈ ಹಿಂದೆ 'ಎಂಥಿರನ್' ಚಿತ್ರದಲ್ಲಿ 'ವಸಿಗರನ್' ಹಾಗೂ 'ಚಿಟ್ಟಿ'ಯಾಗಿ ಕಮಾಲ್ ಮಾಡಿದ್ದ ರಜನಿಕಾಂತ್, '2.0 'ಚಿತ್ರದಲ್ಲೂ ಮತ್ತೆ ರೋಬೋ ಅವತಾರದಲ್ಲಿ ಎಂಟ್ರಿ ಕೊಡುತ್ತಿದ್ದಾರೆ.

  ಅಕ್ಷಯ್ ಕುಮಾರ್ ವಿಲನ್

  ಅಕ್ಷಯ್ ಕುಮಾರ್ ವಿಲನ್

  '2.0' ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅಭಿನಯಿಸಿದ್ದು, ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಭಾರಿಗೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಅಕ್ಕಿ, ಈ ಚಿತ್ರದ ಮೇನ್ ಅಟ್ರ್ಯಾಕ್ಷನ್.

  ಆಮಿ ಜಾಕ್ಸನ್ ನಾಯಕಿ

  ಆಮಿ ಜಾಕ್ಸನ್ ನಾಯಕಿ

  'ಎಂಥಿರನ್' ಚಿತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈಗ 'ರೋಬೋ-2 'ಚಿತ್ರದಲ್ಲಿ ಆಮಿ ಜಾಕ್ಸನ್ ರಜನಿಕಾಂತ್ ಗೆ ಜೋಡಿಯಾಗಿದ್ದಾರೆ.

  ಶಂಕರ್ ನಿರ್ದೇಶನ

  ಶಂಕರ್ ನಿರ್ದೇಶನ

  '2.0' ಚಿತ್ರವನ್ನ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ಅನ್ನಿಯನ್', 'ಶಿವಾಜಿ', 'ಎಂಥಿರನ್', 'ಐ', ಅಂತಹ ಅದ್ಬುತ ಚಿತ್ರಗಳನ್ನ ನಿರ್ದೇಶನ ಮಾಡಿದ ಹೆಗ್ಗಳಿಕೆ ಶಂಕರ್ ಅವರದ್ದು.

  ಎ ಆರ್ ರೆಹಮಾನ್

  ಎ ಆರ್ ರೆಹಮಾನ್

  'ಎಂಥಿರನ್' ಚಿತ್ರದ ಮೋಡಿ ಮಾಡಿದ್ದ ಎ ಆರ್ ರೆಹಮಾನ್ ಸಂಗೀತ ಈ ಚಿತ್ರದಲ್ಲೂ ಮುಂದುವರೆದಿದೆ. ಚಿತ್ರದ ಹಿನ್ನಲೆ ಸಂಗೀತ ಹಾಗೂ ಸಂಗೀತವನ್ನ ಎ ಆರ್ ರೆಹಮಾನ್ ಒದಗಿಸಿದ್ದಾರೆ. ಇನ್ನೂ ಲೈಕಾ ನಿರ್ಮಾಣ ಸಂಸ್ಥೆಯಡಿ '2.0' ನಿರ್ಮಾಣವಾಗಿದೆ.

  ರಿಲೀಸ್ ಯಾವಾಗ?

  ರಿಲೀಸ್ ಯಾವಾಗ?

  '2.0' ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ತಯಾರಾಗಿದ್ದು, 2016, ಏಪ್ರಿಲ್ ತಿಂಗಳಲ್ಲಿ ಜಗತ್ತಿನಾದ್ಯಂತ '2.0' ತೆರೆಕಾಣಲಿದೆ.

  '2.0' ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಹೇಗಿದೆ ಅಂತಾ ನೋಡಿದ್ರಾ? ಈ ಕ್ಲಿಕ್ ಮಾಡಿ, '2.0' ಫಸ್ಟ್ ಲುಕ್ ನೋಡಿ

  English summary
  Rajinikanth’s 2.0 first look launched On Sunday (November 20) evening at Mumabi. Rajinikanth, Akshay Kumar, amy jackson are in the lead role. The movie directed by Shankar, and music composed by AR Rahman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X