»   » ಸಚಿನ್ ಚಿತ್ರದಲ್ಲಿ ಮಿಂಚಿದ ಈ ಪುಟ್ಟ ಬಾಲಕ ಯಾರು?

ಸಚಿನ್ ಚಿತ್ರದಲ್ಲಿ ಮಿಂಚಿದ ಈ ಪುಟ್ಟ ಬಾಲಕ ಯಾರು?

Posted By:
Subscribe to Filmibeat Kannada

ಗುಂಗುರು ಕೂದಲು, ದುಂಡು ಕೆನ್ನೆಗಳು, ಮಿಲಿಯನ್ ಡಾಲರ್ ಸ್ಮೈಲ್. ಚಿಕ್ಕವರಿದ್ದಾಗ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಹೀಗೇ ಕಾಣಿಸುತ್ತಾ ಇದ್ದರು. ಅಷ್ಟಕ್ಕೂ ಈ ಪುಟ್ಟ ಬಾಲಕ ಯಾರು ಎಂದು ಯೋಚನೆ ಮಾಡ್ಬೇಡಿ. ಈತ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರದಲ್ಲಿ ಪುಟ್ಟ ತೆಂಡೂಲ್ಕರ್ ಆಗಿ ಅಭಿನಯಿಸಿರುವ ಬಾಲಕ.[ವಿಮರ್ಶೆ: 'ಕ್ರಿಕೆಟ್ ದೇವರ' ಅದ್ಭುತ ಆಟಕ್ಕೆ ಪ್ರೇಕ್ಷಕ ಮೂಕವಿಸ್ಮಿತ]

ಹೆಸರು ಮೈಕೆಲ್ ಗಾಂಧಿ. ಮೂಲತಃ ಮುಂಬೈ ಬಾಲಕ. 4ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆಡಿಶನ್ ಗೆ ಬಂದಿದ್ದ 300 ಮಕ್ಕಳ ಪೈಕಿ ಮೈಕೆಲ್ ಗೆ ಸಚಿನ್ ಪಾತ್ರ ಮಾಡುವ ಅವಕಾಶ ಸಿಕ್ಕಿತ್ತು. ತೆರೆಮೇಲೆ ಅದ್ಭುತವಾಗಿ ನಟಿಸಿರುವ ಮೈಕೆಲ್ ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.[ಸಚಿನ್ ಬಯೋಪಿಕ್ ನೋಡಿ ಮೆಚ್ಚಿಕೊಂಡ ಭಾರತೀಯ ಯೋಧರು]

Sachin Meets Mikail Gandhi

ಇನ್ನು ಕಳೆದ ವಾರ 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ಚಿತ್ರದ ಪ್ರೀಮಿಯರ್ ಶೋನಲ್ಲಿ ಸಚಿನ್ ಅವರನ್ನ ಭೇಟಿ ಮಾಡಿದ್ದ ಮೈಕೆಲ್ ಸಿಕ್ಕಾಪಟ್ಟೆ ಖುಷಿಪಟ್ಟಿದ್ದರು. ಸಚಿನ್ ಪಾತ್ರದಲ್ಲಿ ಅಭಿನಯಿಸಿದ್ದ ಮೈಕೆಲ್ ಗೆ, ವಿರಾಟ್ ಕೊಹ್ಲಿ, ಧೋನಿ ಹಾಗೂ ಸುರೇಶ್ ರೈನಾ ಕೂಡ ಅಚ್ಚುಮೆಚ್ಚಿನ ಕ್ರಿಕೆಟಿಗರು.[4 ದಿನಕ್ಕೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಸಚಿನ್ ಎ ಬಿಲಿಯನ್ ಡ್ರೀಮ್ಸ್']

ಅಂದ್ಹಾಗೆ, ಮೈಕೆಲ್ ತೆರೆ ಮೇಲೆ ಕಾಣಿಸಿಕೊಂಡಿರೋದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಜಾಹೀರಾತುಗಳಲ್ಲಿ ನಟಿಸಿದ್ದು, 'ಸುಪ್ರೀಂ' ಎಂಬ ತೆಲುಗು ಚಿತ್ರದಲ್ಲೂ ಮೈಕೆಲ್ ಬಣ್ಣ ಹಚ್ಚಿದ್ದಾರೆ. 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

English summary
Eight-year-old Mikail on watching himself play little Sachin in cricketer's biopic; met his idol for the first time last week - at the film's premiere

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada