»   » ಸಚಿನ್ ಬಯೋಪಿಕ್ ನೋಡಿ ಮೆಚ್ಚಿಕೊಂಡ ಭಾರತೀಯ ಯೋಧರು

ಸಚಿನ್ ಬಯೋಪಿಕ್ ನೋಡಿ ಮೆಚ್ಚಿಕೊಂಡ ಭಾರತೀಯ ಯೋಧರು

Posted By:
Subscribe to Filmibeat Kannada

ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರ ಇದೇ ವಾರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಸಚಿನ್ ತೆಂಡೂಲ್ಕರ್ ಭಾರತೀಯ ವಾಯು ಸೇನೆ, ನೌಕಾಪಡೆ ಮತ್ತು ಸೈನಿಕರಿಗಾಗಿ ತಮ್ಮ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು.

ದೆಹಲಿಯಲ್ಲಿರುವ ಭಾರತೀಯ ವಾಯುಪಡೆ ಆಡಿಟೋರಿಯಂನಲ್ಲಿ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರದ ವಿಶೇಷ ಸ್ಕ್ರೀನಿಂಗ್ ಮಾಡಲಾಗಿತ್ತು. ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಸೇರಿದಂತೆ ಹಲವು ಸೈನಿಕರು ಹಾಗೂ ಸೈನಿಕರ ಕುಟುಂಬಸ್ಥರು ಸಚಿನ್ ಅವರ ಸಿನಿಮಾ ನೋಡಿದರು. ಮುಂದೆ ಓದಿ....

ಸಚಿನ್ ಗೆ ಸೈನಿಕರಿಂದ ಗೌರವ

'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರವನ್ನ ನೋಡಿದ ಸೈನಿಕರು, ಸಚಿನ್ ತೆಂಡೂಲ್ಕರ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಕ್ರಿಕೆಟ್ ಗಾಗಿ ಸಚಿನ್ ಸಲ್ಲಿಸಿದ ಸೇವೆಗೆ ಯೋಧರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಚಿನ್ ಬಯೋಪಿಕ್ ಗೆ ಮೆಚ್ಚುಗೆ

ಸಿನಿಮಾ ನೋಡಿದ ಏರ್ ಚೀಫ್ ಮಾರ್ಷಲ್ ಬಿ.ಎಸ್ ಧನೋವಾ ''ಇದೊಂದು ಅತ್ಯುತ್ತಮ ಚಿತ್ರ. ಸಚಿನ್ ಕ್ರಿಕೆಟ್ ಕೆರಿಯರ್ ಆರಂಭಿಸುವ ಮೊದಲೇ ನಾನು ವಾಯುಸೇನೆಯಲ್ಲಿದ್ದೆ. ಹಾಗಾಗಿ ಅವರ ವೃತ್ತಿ ಜೀವನದ ಬಗ್ಗೆ ನನಗೆ ಗೊತ್ತು. ಅವರ ಜೀವನ ಸ್ಪೂರ್ತಿದಾಯಕವಾಗಿದೆ'' ಎಂದಿದ್ದಾರೆ.

ಮೋದಿ ಭೇಟಿ ಮಾಡಿದ್ದ ತೆಂಡೂಲ್ಕರ್

ಇದಕ್ಕೂ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ್ದ ಸಚಿನ್ ತೆಂಡೂಲ್ಕರ್, 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರದ ಬಗ್ಗೆ ಖುಷಿ ಹಂಚಿಕೊಂಡು, ಚಿತ್ರ ವೀಕ್ಷಿಸುವಂತೆ ಮನವಿ ಮಾಡಿದ್ದರು.

ಮೇ 26ಕ್ಕೆ ಸಿನಿಮಾ ಬಿಡುಗಡೆ

ಅಂದ್ಹಾಗೆ,'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರವನ್ನ ಜೇಮ್ಸ್ ಎರ್ಸ್ಕೈನ್ ನಿರ್ದೇಶನ ಮಾಡಿದ್ದು, ಸ್ವತಃ ತೆಂಡೂಲ್ಕರ್ ತಮ್ಮ ಪಾತ್ರವನ್ನೇ ತಾವೇ ನಿಭಾಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಎಂ.ಎಸ್ ಧೋನಿ ಕೂಡ ಅಭಿನಯಿಸಿದ್ದಾರೆ. ಉಳಿದಂತೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ಮೇ 26 ರಂದು ಸಿನಿಮಾ ತೆರೆಕಾಣುತ್ತಿದ್ದು, ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಬದುಕಿನ ರೋಚಕ ಸಂಗತಿಗಳು ಈ ಚಿತ್ರದಲ್ಲಿ ಅನಾವರಣವಾಗಲಿದೆ.

English summary
Sachin Tendulkar conducted a special screening of his biopic, 'Sachin A Billion Dreams' for the Indian Armed Forces personnel on May 20.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada