»   » 'ಬಿಕಿನಿ' ಫೋಟೋ ಹಾಕಿದ ಸಮಂತಾ: ಇನ್ಸ್ಟಾಗ್ರಾಮ್ ನಲ್ಲಿ ಹಿಗ್ಗಾಮುಗ್ಗಾ ಉಗಿತ.!

'ಬಿಕಿನಿ' ಫೋಟೋ ಹಾಕಿದ ಸಮಂತಾ: ಇನ್ಸ್ಟಾಗ್ರಾಮ್ ನಲ್ಲಿ ಹಿಗ್ಗಾಮುಗ್ಗಾ ಉಗಿತ.!

Posted By:
Subscribe to Filmibeat Kannada

ಸೆಲೆಬ್ರಿಟಿಗಳಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ತಮ್ಮನ್ನ ಲಕ್ಷಾಂತರ ಜನ ಫಾಲೋ ಮಾಡುತ್ತಾರೆ ಎನ್ನುವುದು ಗೊತ್ತಿರುವಾಗ, ಮೈ ತುಂಬಾ ನಿಗಾ ಇರಬೇಕು. ಸಾಮಾಜಿಕ ಜಾಲತಾಣಗಳು ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿರುವ ಈಗಿನ ಕಾಲದಲ್ಲಿ ಎಚ್ಚರವಾಗಿರಬೇಕು. ಸ್ವಲ್ಪ ಯಾಮಾರಿದ್ರೂ, ಅಭಿಮಾನಿಗಳೇ ತಿರುಗಿ ಬೀಳುತ್ತಾರೆ. ವಯಸ್ಸು, ಸಾಧನೆ... ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ, ಜನ ಬಾಯಿಗೆ ಬಂದಂತೆ ಹಿಗ್ಗಾಮುಗ್ಗಾ ಉಗಿಯುತ್ತಾರೆ. ಸದ್ಯ ಟಾಲಿವುಡ್ ನಟಿ ಸಮಂತಾ ರುತ್ ಪ್ರಭುಗೆ ಆಗಿರುವುದು ಇದೇ.!

ಗ್ಲಾಮರ್ ಲೋಕದಲ್ಲಿ ಸದಾ ಮಿಂದೇಳುವ ನಟಿ ಸಮಂತಾ ರುತ್ ಪ್ರಭು ಇನ್ಸ್ಟಾಗ್ರಾಮ್ ನಲ್ಲಿ ಒಂದು 'ಬಿಕಿನಿ' ಫೋಟೋ ಹಾಕಿದ್ದರು. ಅದನ್ನ ಕಂಡ ಕೆಲ ಮಡಿವಂತರ ಕಣ್ಣು ಕೆಂಪಗಾಗಿದೆ. ಪರಿಣಾಮ, ಇನ್ಸ್ಟಾಗ್ರಾಮ್ ನಲ್ಲಿ ದೊಡ್ಡ ಯುದ್ಧವೇ ನಡೆಯುತ್ತಿದೆ. ಮುಂದೆ ಓದಿ...

ಮೂರು ದಿನಗಳ ಹಿಂದೆ

ಕೇವಲ ಮೂರು ದಿನಗಳ ಹಿಂದೆಯಷ್ಟೇ, ತಮ್ಮ ಇನ್ಸ್ಟಾ ಗ್ರಾಮ್ ಅಕೌಂಟ್ ನಲ್ಲಿ ನಟಿ ಸಮಂತಾ, ಟೂ ಪೀಸ್ (ಬಿಕಿನಿ) ಇರುವ ಒಂದು ಫೋಟೋ ಅಪ್ ಲೋಡ್ ಮಾಡಿದ್ದರು.

ಹಾಲಿಡೇ ಮೂಡ್ ನಲ್ಲಿದ್ದ ಸಮಂತಾ

ಹಾಲಿಡೇ ಮೂಡ್ ನಲ್ಲಿದ್ದ ಸಮಂತಾ, ''ಮಿನಿ ವೆಕೇಷನ್ ಇವತ್ತಿಂದ ಶುರು'' ಎಂದು ಬಿಕಿನಿ ಫೋಟೋ ಒಂದನ್ನ ಶೇರ್ ಮಾಡಿದ್ದರು. ಇದಕ್ಕೆ ಹಲವರು ಕೋಪಗೊಂಡಿದ್ದಾರೆ.

ಟೀಕೆಗಳ ಮಹಾಪೂರ

'ಟೂ ಪೀಸ್' ಫೋಟೋ ಹಾಕಿರುವ ಸಮಂತಾ ಬಗ್ಗೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದಾರೆ.

ಅಭಿಮಾನಿಗಳ ಬೇಡಿಕೆ

'ದಯವಿಟ್ಟು ಇಂತಹ ಉಡುಪುಗಳನ್ನು ಧರಿಸಬೇಡಿ' ಎಂದು ಸಮಂತಾ ರವರ ಅಪ್ಪಟ ಅಭಿಮಾನಿಗಳು ಅವರಿಗೆ ಪುಕ್ಕಟೆ ಸಲಹೆ ಕೂಡ ನೀಡಿದ್ದಾರೆ.[ನಾಗ್ ಚೈತನ್ಯ ಮದುವೆ ಆಗಲು ಮತಾಂತರಗೊಂಡರೇ ನಟಿ ಸಮಂತಾ?]

ನಡೆಯುತ್ತಿದೆ ದೊಡ್ಡ ಯುದ್ಧ

ಒಂದು ಬಿಕಿನಿ ಫೋಟೋದಿಂದಾಗಿ ಇನ್ಸ್ಟಾ ಗ್ರಾಮ್ ನಲ್ಲಿ ದೊಡ್ಡ ವಾಕ್ಸಮರ ನಡೆಯುತ್ತಿದೆ. ಅದಕ್ಕೆ ಸಾಕ್ಷಿ ಈ ಕಾಮೆಂಟ್ಸ್....

ನಿಶ್ಚಿತಾರ್ಥ ಮಾಡಿಕೊಂಡಿರುವ ಸಮಂತಾ

ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ ಜೊತೆ ಸಮಂತಾ ನಿಶ್ಚಿತಾರ್ಥ ನಡೆದಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಈ ಜೋಡಿ ದಂಪತಿಗಳಾಗುತ್ತಾರೆ.[ಚಿತ್ರಗಳು: ಟಾಲಿವುಡ್ ಪ್ರೇಮಪಕ್ಷಿ ಸಮಂತಾ-ನಾಗಚೈತನ್ಯ ನಿಶ್ಚಿತಾರ್ಥ]

ನಾಗಾರ್ಜುನ ಸೊಸೆ

ಇನ್ನೇನು ಮದುವೆ ಆಗಿಲಿರುವ ಸಮಂತಾ, 'ಟೂ ಪೀಸ್' ಫೋಟೋ ಹಾಕಿರುವ ಕಾರಣಕ್ಕೆ ಕೆಲವರು ಸಿಡಿಮಿಡಿಗೊಂಡಿದ್ದಾರೆ. ''ಅಕ್ಕಿನೇನಿ ಫ್ಯಾಮಿಲಿ ಇದನ್ನೆಲ್ಲ ಸಹಿಸುವುದಿಲ್ಲ'' ಎಂದೂ ಕೆಲವರು ಅತಿರೇಕದ ಕಾಮೆಂಟ್ಸ್ ಮಾಡಿದ್ದಾರೆ. ಇದನ್ನೆಲ್ಲ ನೋಡಿದ್ಮೇಲೆ, ಸಮಂತಾ ಪಿತ್ತ ನೆತ್ತಿಗೇರಿರುವುದು ಕೂಡ ಅಷ್ಟೇ ಸತ್ಯ.[ಫಿಕ್ಸ್ ಆಯ್ತು 'ಸಮಂತಾ-ನಾಗಚೈತನ್ಯ' ಜೋಡಿಯ ಮದುವೆ ದಿನಾಂಕ]

English summary
Tollywood Actress Samantha shared a photo of two-piece bikini on her Instagram, which was slammed by her fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada