»   » ನಾಗ್ ಚೈತನ್ಯ ಮದುವೆ ಆಗಲು ಮತಾಂತರಗೊಂಡರೇ ನಟಿ ಸಮಂತಾ?

ನಾಗ್ ಚೈತನ್ಯ ಮದುವೆ ಆಗಲು ಮತಾಂತರಗೊಂಡರೇ ನಟಿ ಸಮಂತಾ?

Posted By: Sony
Subscribe to Filmibeat Kannada

ಟಾಲಿವುಡ್ ನಲ್ಲಿ ಸದ್ಯಕ್ಕೆ ಟಾಕ್ ಆಫ್ ದ ಟಾಪಿಕ್ ಆಗಿರುವ ಜೋಡಿ ಎಂದರೆ ಅದು ನಟಿ ಸಮಂತಾ ರುತ್ ಪ್ರಭು ಮತ್ತು ನಟ ನಾಗ ಚೈತನ್ಯ. ಇನ್ನೇನು ಸದ್ಯದಲ್ಲೇ ಈ ಜೋಡಿ ಧಾಂ ಧೂಂ ಆಗಿ ಮದುವೆ ಆಗಲಿದ್ದಾರೆ ಅನ್ನೋದು ಯುನಿವರ್ಸಲ್ ಟ್ರುತ್.

ಅಂದಹಾಗೆ ನಟಿ ಸಮಂತಾ ಅವರು ತಮ್ಮ ಪ್ರೀತಿಗೋಸ್ಕರ ತಮ್ಮ ಧರ್ಮವನ್ನು ಕೂಡ ಬಿಟ್ಟು ಕೊಡಲು ತಯಾರಾಗಿದ್ದಾರೆ, ಅಂತ ಸದ್ಯಕ್ಕೆ ಇಡೀ ಟಾಲಿವುಡ್ ಅಂಗಳದಲ್ಲಿ ಗುಲ್ಲೆದ್ದಿದೆ.[ನಾಗಾರ್ಜುನ ಕುಟುಂಬದಲ್ಲಿ ಬರುವ ವರ್ಷ ಧಾಂ-ಧೂಂ ಮದುವೆ]

ಅಷ್ಟಕ್ಕೂ ಈ ಅಂತೆ-ಕಂತೆ ಸುದ್ದಿಗೆ ರೆಕ್ಕೆ-ಪುಕ್ಕ ಹುಟ್ಟಲು ಪ್ರಮುಖ ಕಾರಣ ನಟಿ ಸಮಂತಾ ರುತ್ ಅವರು, ಅಕ್ಕಿನೇನಿ ನಾಗಚೈತನ್ಯ ಅವರ ಮನೆಯಲ್ಲಿ ಪೂಜೆಯೊಂದರಲ್ಲಿ ಭಾಗಿಯಾಗಿದ್ದು. ಈ ವಿಶೇಷ ಪೂಜೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.

ಇನ್ನು ನಟಿ ಸಮಂತಾ ಅವರು ಎಲ್ಲಿ?, ಯಾವ ಪೂಜೆ?, ಯಾರ ಜೊತೆಯಲ್ಲಿ ಪಾಲ್ಗೊಂಡರು?, ಏನ್ಕತೆ, ಈ ಎಲ್ಲಾ ಕಥೆಗಳನ್ನು ನೋಡಲು ಮುಂದೆ ಓದಿ...

ಅಕ್ಕಿನೇನಿ ಮನೆಯಲ್ಲಿ ಸಮಂತಾ

ಇತ್ತೀಚೆಗೆ ನಟಿ ಸಮಂತಾ ರುತ್ ಪ್ರಭು ಅವರು ಅಕ್ಕಿನೇನಿ ನಾಗಾರ್ಜುನ ಅವರ ಮನೆಯಲ್ಲಿ ನಡೆದ ಪೂಜೆಯೊಂದರಲ್ಲಿ ಭಾಗವಹಿಸಿದ್ದರು. ಪೂಜೆಗೆ ನಟ ಸುಮಂತಾ ಮತ್ತು ನಾಗ ಚೈತನ್ಯ ಅವರು ಕುಳಿತಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲವಾರು ಅಂತೆ-ಕಂತೆ ಪುರಾಣಕ್ಕೆ ಕಾರಣವಾಗಿದೆ.[ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಒಲವನ್ನು ಬಯಲು ಮಾಡಿದ ಸಮಂತಾ]

ಮತಾಂತರಗೊಂಡ್ರಾ ನಟಿ ಸಮಂತಾ

ಮೂಲ ಕ್ರಿಶ್ಚಿಯನ್ ಧರ್ಮದವರಾಗಿರುವ ನಟಿ ಸಮಂತಾ ಅವರು ನಾಗ ಚೈತನ್ಯ ಅವರಿಗೋಸ್ಕರ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರಂತೆ. ಅದಕ್ಕಾಗಿ ನಾಗ ಚೈತನ್ಯ ಅವರ ತಂದೆ ನಟ ಅಕ್ಕಿನೇನಿ ನಾಗಾರ್ಜುನ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಏರ್ಪಾಡು ಮಾಡಲಾಗಿತ್ತು. ಆ ಪೂಜೆಯಲ್ಲಿ ಸಮಂತಾ ಅವರು ಪಾಲ್ಗೊಂಡಿದ್ದರು, ಅಂತ ಎಲ್ಲಾ ಕಡೆ ಭಾರಿ ಸುದ್ದಿಯಾಗಿದೆ.[ಸೂಪರ್ ಸ್ಮೈಲ್ ಕ್ವೀನ್ ಸಮಂತಾ ಹೊಸ ಕಿರಿಕ್]

ಕುಜದೋಷ ಪೂಜೆ

ಆದ್ರೆ ಇನ್ನೊಂದು ಮೂಲಗಳ ಪ್ರಕಾರ, ನಟಿ ಸಮಂತಾ ಅವರು ಮತಾಂತರಗೊಳ್ಳುವ ಪ್ರಕ್ರಿಯೆಗಾಗಿ ಪೂಜೆ ನೆರೆವೇರಿಸುತ್ತಿಲ್ಲ, ಬದ್ಲಾಗಿ ಕುಜ ದೋಷ ಪರಿಹಾರಕ್ಕೆ ಇಬ್ಬರೂ ಸೇರಿ ಪೂಜೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಕುಜ ದೋಷದಿಂದ ಇವರಿಬ್ಬರ ಮದುವೆ ಡಿಲೇ ಆಗುತ್ತಿದೆ, ಆ ಕಾರಣದಿಂದ ಖುದ್ದು ನಾಗಾರ್ಜುನ ಅವರೇ ನಿಂತು, ಹಲವಾರು ಪಂಡಿತರ ಕೈಯಿಂದ ಕುಜ ದೋಷ ಪರಿಹಾರಕ್ಕೆ ವಿಶೇಷ ಪೂಜೆ ನೆರವೇರಿಸಿದ್ದಾರೆ ಎನ್ನಲಾಗುತ್ತಿದೆ.

ಸಮಂತಾ, ಸಿದ್ದಾರ್ಥ್ ಜೊತೆ ಕೂಡ ಪೂಜೆ ಮಾಡಿದ್ದರು

ಅಂದಹಾಗೆ ನಟಿ ಸಮಂತಾ ಅವರು ಕ್ರೈಸ್ತ ಮತದವರಾದರೂ ಅವರಿಗೆ, ಈ ಹಿಂದು ಧರ್ಮದವರ ಪೂಜೆ-ಪುನಸ್ಕಾರಗಳು ಹೊಸದೇನಲ್ಲ. ಯಾಕೆಂದರೆ ಈ ಮೊದಲು ಕೂಡ ನಟ ಸಿದ್ದಾರ್ಥ್ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ, ಅವರ ಕುಟುಂಬದವರ ಜೊತೆ ನಾಗ ದೋಷ ಪರಿಹಾರದ ಪೂಜೆಯಲ್ಲಿ ಪಾಲ್ಗೊಂಡಿದ್ದರು.[ಸಮಂತಾ ಮನದಲ್ಲಿ ಸಿದ್ದಾರ್ಥ್ ಪ್ರೀತಿ ಹಚ್ಚೆ]

ಯಾವುದು ನಿಜ-ಯಾವುದು ಸುಳ್ಳು

ಸದ್ಯಕ್ಕೆ ಸಮಂತಾ ಅವರ ಬಗ್ಗೆ ಭಾರಿ ಗಾಸಿಪ್ ಕ್ರಿಯೇಟ್ ಆಗಿದ್ದಂತೂ ಸತ್ಯ. ಅಷ್ಟಕ್ಕೂ ಭಾವಿ ಜೋಡಿಯಾದ ಸಮಂತಾ ಮತ್ತು ನಾಗಚೈತನ್ಯ ಅವರು ಒಟ್ಟಾಗಿ ಪೂಜೆ ಮಾಡಿದ್ದಾದರೂ ಯಾಕೆ?. ಕುಜ ದೋಷ ಪರಿಹಾರಾನಾ?, ಅಥವಾ ಸಮಂತಾ ಕ್ರಿಶ್ಚಿಯನ್ ಧರ್ಮದಿಂದ ಹಿಂದು ಧರ್ಮಕ್ಕೆ ಮತಾಂತರಗೊಳ್ಳೋದಿಕ್ಕೆನಾ?. ಇದಕ್ಕೆಲ್ಲಾ ಉತ್ತರವನ್ನು ಖುದ್ದು ಅವರಿಬ್ಬರೇ ನೀಡಬೇಕು. ಆದ್ರೆ ಇವರ ಈ ವಿಶೇಷ ಪೂಜೆಯಿಂದ ಟಾಲಿವುಡ್ ಅಂಗಳದಲ್ಲಿ ಭಾರಿ ಗುಲ್ಲೆದ್ದಿದ್ದಂತೂ ವಿಪರ್ಯಾಸವೇ ಸರಿ.[ಸಿದ್ದಾರ್ಥ್ ಗೆ ಸಮಂತಾ ಕಿರು ಬೆರಳು ಬೇಡ್ವಂತೆ]

ಮದುವೆ ಯಾವಾಗ?

ನಾಗ ಚೈತನ್ಯ ಮತ್ತು ಸಮಂತಾ ಅವರ ಜೊತೆ, ಅಕ್ಕಿನೇನಿಯ ಮತ್ತೊಂದು ಕುಡಿ ಅಖಿಲ್ ಅಕ್ಕಿನೇನಿ ಅವರ ಮದುವೆ ಕೂಡ ನೆರವೇರಿಸಲು ಪ್ಲ್ಯಾನ್ ಮಾಡಿರುವ ನಾಗಾರ್ಜುನ ಅವರು, ಮುಂದಿನ ವರ್ಷಕ್ಕೆ ಅದ್ಧೂರಿ ಮದುವೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಆದ್ದರಿಂದ ಎರಡು ಜೋಡಿಯ ಸಂಭ್ರಮದ, ಗ್ರ್ಯಾಂಡ್ ಮದುವೆ ಸಮಾರಂಭಕ್ಕೆ ಇಡೀ ಟಾಲಿವುಡ್ ಚಿತ್ರರಂಗ ಸಾಕ್ಷಿಯಾಗಲಿದೆ.

ಮತ್ತೆ ತೆರೆಯ ಮೇಲೆ ಭಾವಿ ಜೋಡಿ

ಇನ್ನೊಂದು ಸುದ್ದಿಯ ಪ್ರಕಾರ ನಟಿ ಸಮಂತಾ ಮತ್ತು ನಾಗಚೈತನ್ಯ ಅವರು ಮತ್ತೆ ತೆರೆಯ ಮೇಲೆ ಒಂದಾಗಿ ರೋಮ್ಯಾನ್ಸ್ ಮಾಡಲಿದ್ದಾರಂತೆ. ಹಿಂದಿಯ '2 ಸ್ಟೇಟ್ಸ್' ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿದ್ದು, ಈ ಚಿತ್ರದಲ್ಲಿ ಭಾವಿ ಜೋಡಿ ರೋಮ್ಯಾನ್ಸ್ ಮಾಡಿದರೆ ಹೇಗಿರುತ್ತೆ ಅನ್ನೋ ಐಡಿಯಾ ನಿರ್ಮಾಪಕರ ತಲೆಯಲ್ಲಿದೆ. 'ಮನಂ' ಚಿತ್ರದ ನಂತರ ಸಮಂತಾ-ನಾಗಚೈತನ್ಯ ಮತ್ತೆ ಒಂದಾಗಿಲ್ಲ. ಇದೀಗ ಮತ್ತೆ ಒಂದಾದ್ರು ಆಶ್ಚರ್ಯ ಇಲ್ಲ ಬಿಡಿ.

ಜಾಲಿ ಮೂಡ್ ನಲ್ಲಿ ಹೊಸ ಜೋಡಿ

ಇನ್ನು ಇವರಿಬ್ಬರ ಮದುವೆಗೆ ನಟ ನಾಗಾರ್ಜುನ್ ಅವರು ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ, ಈ ನೂತನ ಜೋಡಿ ಆಗಾಗ ಶಾಪಿಂಗ್ ಮಾಲ್, ಕಾಫಿ ಶಾಪ್, ಸಿನಿಮಾ ಅಂತ ಎಲ್ಲೆಂದರಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದಾರೆ. ಆಗಾಗ ಶಾಪಿಂಗ್ ಮಾಡುವ ಸಮಂತಾ-ನಾಗ ಚೈತನ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.

English summary
Telugu Actor Naga Chaitanya and Actress Samantha performing a pooja at a house has been doing the rounds in the social media. Interestingly, Akkineni Nagarjuna is also seen in this pooja. It’s the Kuja dosha pooja being done before they tie the knot.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X