For Quick Alerts
  ALLOW NOTIFICATIONS  
  For Daily Alerts

  ಫಿಕ್ಸ್ ಆಯ್ತು 'ಸಮಂತಾ-ನಾಗಚೈತನ್ಯ' ಜೋಡಿಯ ಮದುವೆ ದಿನಾಂಕ

  By Bharath Kumar
  |

  ಟಾಲಿವುಡ್ ನ ಮುದ್ದು ಜೋಡಿ ಸಮಂತಾ ಮತ್ತು ನಟ ನಾಗಚೈತನ್ಯ ಅವರ ಮದುವೆ ದಿನಾಂಕ ಫಿಕ್ಸ್ ಆಗಿದೆ. ವರ್ಷದ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ತಾರಾಜೋಡಿ ಯಾವಾಗ ಸಪ್ತಪದಿ ತುಳಿಯಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳನ್ನ ಕಾಡಿತ್ತು. ಇದೀಗ, ಈ ಕುತೂಹಲಕ್ಕೆ ತೆರೆ ಬಿದ್ದಿದೆ.

  ಸದ್ಯ, ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಮದುವೆ ಡೇಟ್ ಫಿಕ್ಸ್ ಆಗಿದೆ. ಅಷ್ಟರೊಳಗೆ ಕೈಯಲ್ಲಿರುವ ಚಿತ್ರಗಳನ್ನ ಮುಗಿಸಿ, ವೈವಾಹಿಕ ಜೀವನಕ್ಕೆ ರೆಡಿಯಾಗಬೇಕಿದೆ.[ಚಿತ್ರಗಳು: ಟಾಲಿವುಡ್ ಪ್ರೇಮಪಕ್ಷಿ ಸಮಂತಾ-ನಾಗಚೈತನ್ಯ ನಿಶ್ಚಿತಾರ್ಥ]

  ಅಷ್ಟಕ್ಕೂ, ಸಮ್ಮು ಮತ್ತು ಚೈತನ್ಯ ಮದುವೆ ಯಾವಾಗ? ಎಲ್ಲಿ? ಎಂಬ ಮಾಹಿತಿ ಮುಂದೆ ಇದೆ ಓದಿ.....

  ಅಕ್ಟೋಬರ್ ತಿಂಗಳಲ್ಲಿ ಮದುವೆ!

  ಅಕ್ಟೋಬರ್ ತಿಂಗಳಲ್ಲಿ ಮದುವೆ!

  ಟಾಲಿವುಡ್ ಪ್ರಣಯ ಪಕ್ಷಿಗಳಾದ ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಅವರ ಮದುವೆ ಇದೇ ವರ್ಷ ಅಕ್ಟೋಬರ್ 6 ರಂದು ನಿಶ್ಚಯವಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

  ಮದುವೆ ಎಲ್ಲಿ?

  ಮದುವೆ ಎಲ್ಲಿ?

  ತೆಲುಗು ಸಿನಿಲೋಕದ ತಾರಾ ಜೋಡಿಯ ಮದುವೆ ಹೈದ್ರಾಬಾದ್ ನಲ್ಲಿ ನೆರವೇರಿಸಲು ನಿರ್ಧಾರ ಮಾಡಲಾಗಿದೆಯಂತೆ. ಸದ್ಯದ ಮಾಹಿತಿ ಪ್ರಕಾರ ಇಬ್ಬರ ನಿಶ್ಚಿತಾರ್ಥ ಆದ ಸ್ಥಳದಲ್ಲೇ ಮದುವೆ ಕೂಡ ಆಗಲಿದೆಯಂತೆ.

  ಹನಿಮೂನ್ ಗೂ ಪ್ಲಾನ್ ಆಗಿದೆ!

  ಹನಿಮೂನ್ ಗೂ ಪ್ಲಾನ್ ಆಗಿದೆ!

  ನಾಗಚೈತನ್ಯ ಹಾಗೂ ಸಮಂತಾ ಮದುವೆ ದಿನಾಂಕ ನಿಗಧಿಯಾಗಿರುವ ಬೆನ್ನಲ್ಲೆ ಹನಿಮೂನ್ ಪ್ಲಾನ್ ಕೂಡ ಆಗಿದೆ. ಮೂಲಗಳ ಪ್ರಕಾರ ಈ ಇಬ್ಬರು ಹನಿಮೂನ್ ಗಾಗಿ ನ್ಯೂಯಾರ್ಕ್ ತಲುಪಲಿದ್ದಾರಂತೆ. ಯಾಕಂದ್ರೆ, ಇವರಿಬ್ಬರ ಜರ್ನಿ ಶುರುವಾದ 'ಏ ಮಾಯೆ ಚೇಸುವೆ' ಚಿತ್ರದ ಸಕ್ಸಸ್ ಗೆ ನಾಂದಿಯಾಗಿದ್ದು ಅಲ್ಲೆ ಎಂಬ ಕಾರಣಕ್ಕೆ.

  ಜನವರಿಯಲ್ಲಿ ನಿಶ್ಚಿತಾರ್ಥ ಆಗಿತ್ತು

  ಜನವರಿಯಲ್ಲಿ ನಿಶ್ಚಿತಾರ್ಥ ಆಗಿತ್ತು

  ಅಂದ್ಹಾಗೆ, ಜನವರಿ 29 ರಂದು ಸಮಂತಾ ಹಾಗೂ ನಾಗಚೈತನ್ಯ ಅವರ ಎಂಗೇಜ್ ಮೆಂಟ್ ಹೈದ್ರಾಬಾದ್ ನಲ್ಲಿ ನೆರವೇರಿತ್ತು. ನಟ ನಾಗಾರ್ಜುನ ಕುಟುಂಬ ಹಾಗೂ ಸಮಂತಾ ಕುಟುಂಬ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು.

  ಸ್ಯಾಮ್-ಚೈತು ಕೈಯಲ್ಲಿ ಯಾವ ಸಿನಿಮಾಗಳಿವೆ

  ಸ್ಯಾಮ್-ಚೈತು ಕೈಯಲ್ಲಿ ಯಾವ ಸಿನಿಮಾಗಳಿವೆ

  ಸುಕುಮಾರ್ ನಿರ್ದೇಶನ ಮಾಡುತ್ತಿರುವ ರಾಮ್ ಚರಣ್ ಅವರ ಇನ್ನು ಹೆಸರಿಡದ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನ 4 ಚಿತ್ರಗಳು, ತೆಲುಗಿನ 2 ಚಿತ್ರಗಳಲ್ಲಿ ಸಮಂತಾ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಮತ್ತೊಂದೆಡೆ ನಾಗಚೈತನ್ಯ, ಕಲ್ಯಾಣ್ ಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.

  English summary
  Ever since Tollywood's favourite couple Samantha and Naga Chaitanya have finalised their wedding date. The couple, who got engaged earlier this year, will get married on October 6.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X