»   » 'ಅಕಿರ' ಅನಿಶ್ ಚಿತ್ರದಲ್ಲಿ 'ಕಿರಿಕ್ ಪಾರ್ಟಿ' ಬೆಡಗಿ ನಾಯಕಿ

'ಅಕಿರ' ಅನಿಶ್ ಚಿತ್ರದಲ್ಲಿ 'ಕಿರಿಕ್ ಪಾರ್ಟಿ' ಬೆಡಗಿ ನಾಯಕಿ

Posted By:
Subscribe to Filmibeat Kannada

ಶೈನ್ ಡ್ಯಾನ್ಸರ್ ಅನಿಶ್ ತೇಜೇಶ್ವರ್ 'ನಮ್ ಏರಿಯಲ್ ಒಂದ್ ದಿನ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟರು ಸಹ ಅವರಿಗೆ ಬಿಗ್ ಬ್ರೇಕ್ ನೀಡಿದ್ದು 'ಅಕಿರ' ಸಿನಿಮಾ. ಈ ಸಿನಿಮಾ ನಂತರ ಎಲ್ಲಪ್ಪಾ ಹೋಗ್ ಬಿಟ್ರು ಅನಿಶ್.. ಅವರ ಸುಳಿವೇ ಇಲ್ಲವಲ್ಲ.. ಅನ್ನೋ ಪ್ರಶ್ನೆ ಸ್ಯಾಂಡಲ್ ವುಡ್ ಸಿನಿ ಪ್ರಿಯರಲ್ಲಿ ಕಾಡುತ್ತಿತ್ತು. 'ಅಕಿರ' ಚಿತ್ರದಲ್ಲಿ ತಮ್ಮ ಅಭಿನಯದಿಂದ ಉತ್ತಮ ರೆಸ್ಪಾನ್ಸ್ ಪಡೆದಿದ್ದ ಅನಿಶ್ ಈಗ ಮತ್ತೆ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ.[ನಾಲ್ಕು ತಿಂಗಳಲ್ಲಿ ನಾಲ್ಕೇ ಸಲ ಊಟ ಮಾಡಿದ್ರಂತೆ ಅನಿಶ್]

ವಿಶೇಷ ಅಂದ್ರೆ ಅನಿಶ್ ತೇಜೇಶ್ವರ್ ಅಭಿನಯದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾದಲ್ಲಿ 'ಕಿರಿಕ್ ಪಾರ್ಟಿ' ಬೆಡಗಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..

ಅನಿಶ್ ತೇಜೇಶ್ವರ್ ಹೊಸ ಸಿನಿಮಾ

'ಅಕಿರ' ಖ್ಯಾತಿಯ ಅನಿಶ್ ತೇಜೇಶ್ವರ್ ಅಭಿನಯದಲ್ಲಿ ಮೂಡಿ ಬರಲಿರುವ ಸಿನಿಮಾ ಹೆಸರು 'ವಾಸು -ನಾನ್ ಪಕ್ಕಾ ಕಮರ್ಷಿಯಲ್'.['ಅಕಿರ' ಖ್ಯಾತಿಯ ನಟನಿಗೆ ಹುಟ್ಟುಹಬ್ಬದ ಸಂಭ್ರಮ]

'ವಾಸು' ಗೆ 'ಕಿರಿಕ್ ಪಾರ್ಟಿ' ಹುಡುಗಿ ನಾಯಕಿ

ಅಂದಹಾಗೆ 'ವಾಸು- ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದಲ್ಲಿ ಅನಿಶ್ ತೇಜೇಶ್ವರ್ ಗೆ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಅಭಿನಯಿಸಿದ್ದ ಸಂಯುಕ್ತ ಹೆಗಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆಂದು ಅನಿಶ್ ತೇಜೇಶ್ವರ್ ಫೇಸ್ ಬುಕ್ ಪೇಜ್ ನಲ್ಲಿ ಬರೆಯಲಾಗಿದೆ.['ಕಿರಿಕ್ ಪಾರ್ಟಿ' ಹುಡುಗಿ ಪ್ರತಿಭೆಗೆ ಮನಸೋತ 'ರೋಡೀಸ್' ಗ್ಯಾಂಗ್ ಲೀಡರ್ಸ್]

ಕಥೆ-ಚಿತ್ರಕಥೆ- ನಿರ್ದೇಶನ

'ವಾಸು- ನಾನ್ ಪಕ್ಕಾ ಕಮರ್ಷಿಯಲ್' ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಇದೇ ಮೊದಲ ಬಾರಿಗೆ ಅಜಿತ್ ವಾಸನ್ ಉಗ್ಗಿನ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.

ಸಂಗೀತ

'ಕಿರಿಕ್ ಪಾರ್ಟಿ' ಚಿತ್ರದ ಬೆಡಗಿ ಲೀಡ್ ರೋಲ್ ನಲ್ಲಿ ನಟಿಸಲಿರುವ 'ವಾಸು' ನಾನ್ ಪಕ್ಕಾ ಕಮರ್ಷಿಯಲ್' ಚಿತ್ರಕ್ಕೆ 'ಉಳಿದವರು ಕಂಡಂತೆ', 'ರಂಗಿತರಂಗ', 'ಕಿರಿಕ್ ಪಾರ್ಟಿ' ಮತ್ತು ಇತರೆ ಹಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ನೀಡಿರುವ ಬಿ.ಅಜನೀಶ್ ಲೋಕನಾಥ್ ಸಂಗೀತವಿರಲಿದೆ.

ಚಿತ್ರದ ತಾರಾಬಳಗ

''WINKWHISTLE' ಪ್ರೊಡಕ್ಷನ್ ಅಡಿಯಯಲ್ಲಿ ನಿರ್ಮಾಣವಾಗಲಿರುವ ಚಿತ್ರ ಪ್ರಸ್ತುತ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರಕ್ಕೆ ನಾಯಕ-ನಾಯಕಿ ಅಷ್ಟೆ ಫೈನಲೈಸ್ ಆಗಿದೆ. ಇತರೆ ತಾರಾಬಳಗಕ್ಕಾಗಿ ಚಿತ್ರತಂಡ ಕಲಾವಿದರಿಗಾಗಿ ಹುಡುಕಾಟ ನಡೆಸಿದೆ.

English summary
Kirik Party girl Samyuktha Hegde will soon be seen opposite Anish Tejeshwar in the actor's maiden Kannada production. Titled 'Vasu - Naanu Pukka Commercial, the film will be directed by debutant Ajit Vasan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada