»   » 'ಕಿರಿಕ್ ಪಾರ್ಟಿ' ಹುಡುಗಿ ಪ್ರತಿಭೆಗೆ ಮನಸೋತ 'ರೋಡೀಸ್' ಗ್ಯಾಂಗ್ ಲೀಡರ್ಸ್

'ಕಿರಿಕ್ ಪಾರ್ಟಿ' ಹುಡುಗಿ ಪ್ರತಿಭೆಗೆ ಮನಸೋತ 'ರೋಡೀಸ್' ಗ್ಯಾಂಗ್ ಲೀಡರ್ಸ್

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಕ್ಸಸ್ ಬೆನ್ನಲ್ಲೇ ತಮ್ಮ ಬಾಲ್ಯದ ದಿನಗಳ ಕನಸನ್ನು ನಟಿ ಸಂಯುಕ್ತ ಹೆಗಡೆ ನನಸು ಮಾಡಿಕೊಂಡಿದ್ದಾರೆ. MTV ವಾಹಿನಿಯ ಸ್ಟಾರ್ ಆಂಕರ್ ರಣ್ ವಿಜಯ್ ಸಿಂಗ್ ಗ್ಯಾಂಗ್ ನಲ್ಲಿ ಸ್ಥಾನ ಪಡೆದುಕೊಂಡು ನಟಿ ಸಂಯುಕ್ತ ಹೆಗಡೆ 'ರೋಡೀ' ಆಗಿದ್ದಾರೆ.

ಹೌದು, MTV ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ರೋಡೀಸ್' ಹದಿನಾಲ್ಕನೇ ಆವೃತ್ತಿ 'ರೋಡೀಸ್ ರೈಸಿಂಗ್'ಗೆ ಕನ್ನಡತಿ ಸಂಯುಕ್ತ ಹೆಗಡೆ ಸೆಲೆಕ್ಟ್ ಆಗಿದ್ದಾರೆ.[ಹಿಂದಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ 'ಕಿರಿಕ್ ಪಾರ್ಟಿ' ಹೀರೋಯಿನ್]

'ರೋಡೀಸ್' ಕಾರ್ಯಕ್ರಮಕ್ಕೆ ಸೆಲೆಕ್ಟ್ ಆಗುವುದು ಅಂದ್ರೆ ಸುಲಭದ ಮಾತಲ್ಲ. ಅದ್ರಲ್ಲೂ, ಆಡಿಷನ್ ನಲ್ಲಿ ಗ್ಯಾಂಗ್ ಲೀಡರ್ ಗಳನ್ನ ಮೆಚ್ಚಿಸುವುದಂತೂ ಕಷ್ಟ ಸಾಧ್ಯ. ಅಂಥದ್ರಲ್ಲಿ, ಕನ್ನಡತಿ ಸಂಯುಕ್ತ ಹೆಗಡೆ 'ರೋಡೀ' ಆಗಿದ್ದಾರೆ ಅಂದ್ರೆ ನೀವೇ ಊಹಿಸಿ...

'ರೋಡೀಸ್ ರೈಸಿಂಗ್' ಆಡಿಷನ್ ನಲ್ಲಿ ಸಂಯುಕ್ತ ಹೆಗಡೆ

''ನಾನು ಇಲ್ಲಿ ಎಲ್ಲರಿಗಿಂತ ಚಿಕ್ಕವಳು'' ಅಂತ ನಗುಮೊಗದಿಂದ ಹೇಳ್ತಾ ಆಡಿಷನ್ ರೂಮ್ ಒಳಗೆ ಸಂಯುಕ್ತ ಕಾಲಿಟ್ಟರು. ಆಗ ಸಂಯುಕ್ತಗೆ ಪ್ರಶ್ನೆಗಳ ಬಾಣ ಸುರಿಸಿದವರು 'MTV ವಾಹಿನಿಯ ಸ್ಟಾರ್' ರಣ್ ವಿಜಯ್ ಸಿಂಗ್.

ಜೀವನದಲ್ಲಿ ಸಮಸ್ಯೆ ಇಲ್ಲ.!

''ನಿಮ್ಮ ಜೀವನದಲ್ಲಿ ಯಾವುದೇ ಪ್ರಾಬ್ಲಂ ಇಲ್ಲ ಅಲ್ವಾ.?'' ಅಂತ ರಣ್ ವಿಜಯ್ ಸಿಂಗ್ ಕೇಳಿದ್ದಕ್ಕೆ ''ಆ ತರಹ ಏನಿಲ್ಲ. ಸಮಸ್ಯೆಗಳು ಇವೆ. ಆದ್ರೆ ದೊಡ್ಡದು ಅನ್ನೋ ತರಹ ಯಾವುದೂ ಇಲ್ಲ'' ಅಂತ ಸಂಯುಕ್ತ ಹೇಳಿದರು.

'ರೋಡೀಸ್' ಯಾಕೆ ಬೇಕು.?

ರಣ್ ವಿಜಯ್ ಸಿಂಗ್ - ''ಕೆಲಸ ಮಾಡುತ್ತೀರಾ.?''
ಸಂಯುಕ್ತ - ''ಹೌದು ಕೆಲಸ ಮಾಡ್ತೀನಿ''
ರಣ್ ವಿಜಯ್ ಸಿಂಗ್ - ''ಏನು ಕೆಲಸ''
ಸಂಯುಕ್ತ - ''ನಟನೆ''
ರಣ್ ವಿಜಯ್ ಸಿಂಗ್ - ''ಅದಕ್ಕೆ ದುಡ್ಡು ಕೊಡ್ತಿಲ್ವ.?''
ಸಂಯುಕ್ತ - ''ಕೊಡ್ತಿದ್ದಾರೆ. ನನ್ನ ಸಿನಿಮಾ ಮುಂದಿನ ತಿಂಗಳು ರಿಲೀಸ್ ಅಗುತ್ತಿದೆ''
ನೇಹಾ ಧೂಪಿಯಾ - ''ಹೌದು, ಆಕೆ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ''
ರಣ್ ವಿಜಯ್ ಸಿಂಗ್ - ''ಆದ್ರೆ ರೋಡೀಸ್ ಗೆ ಯಾಕೆ ಬಂದಿದ್ದೀರಾ.?''
ಸಂಯುಕ್ತ - ''ನಾನು ಎಂಟು ವರ್ಷ ಇದ್ದಾಗಿನಿಂದಲೂ ರೋಡೀಸ್ ನೋಡ್ತಿದ್ದೇನೆ. ಹತ್ತು ವರ್ಷಗಳಿಂದ ರೋಡೀಸ್ ಫಾಲೋ ಮಾಡ್ತಿದ್ದೇನೆ. ರಣ್ ವಿಜಯ್ ಸಿಂಗ್ ರವರನ್ನ ನಾನು ನೋಡಬೇಕಿತ್ತು... ಮುಖ್ಯವಾಗಿ''

ವಿವಿಧ ಶೈಲಿಯ ನೃತ್ಯ ಪ್ರದರ್ಶಿಸಿದ ಸಂಯುಕ್ತ

ಪ್ರಶ್ನೆಗಳ ಸುರಿಮಳೆ ಬಳಿಕ ವಿವಿಧ ಶೈಲಿಯ ನೃತ್ಯಗಳನ್ನು ಸಂಯುಕ್ತ ಹೆಗಡೆ ಪ್ರದರ್ಶಿಸಿದರು. ಜೊತೆಗೆ ಗ್ಯಾಂಗ್ ಲೀಡರ್ ಪ್ರಿನ್ಸ್ ನರುಲಾ ಜೊತೆ ಡ್ಯಾನ್ಸ್ ಕೂಡ ಮಾಡಿದರು.

ಕ್ಲೀನ್ ಬೌಲ್ಡ್ ಆದ ರಣ್ ವಿಜಯ್ ಮತ್ತು ನೇಹಾ ಧೂಪಿಯಾ

ಸಂಯುಕ್ತ ಹೆಗಡೆ ರವರ ನೃತ್ಯ ಪ್ರದರ್ಶನ ನೋಡಿ ರಣ್ ವಿಜಯ್ ಸಿಂಗ್ ಮತ್ತು ನೇಹಾ ಧೂಪಿಯಾ ಕ್ಲೀನ್ ಬೌಲ್ಡ್ ಆದರು.

ಸಂಯುಕ್ತಗೆ ಮನಸೋತ ಮೂವರು ಗ್ಯಾಂಗ್ ಲೀಡರ್ಸ್

ಸಂಯುಕ್ತ ರವರಲ್ಲಿ ಅಡಗಿದ ಪ್ರತಿಭೆಗೆ ಗ್ಯಾಂಗ್ ಲೀಡರ್ ಗಳಾದ ರಣ್ ವಿಜಯ್ ಸಿಂಗ್, ನೇಹಾ ಧೂಪಿಯಾ ಮತ್ತು ಪ್ರಿನ್ಸ್ ನರುಲಾ ಮನಸೋತು ಸೆಲೆಕ್ಟ್ ಮಾಡಿದರು.

ರಣ್ ವಿಜಯ್ ಸಿಂಗ್ ಗ್ಯಾಂಗ್ ಆಯ್ದು ಕೊಂಡ ಸಂಯುಕ್ತ

ಸಂಯುಕ್ತ ರವರನ್ನು ರಣ್ ವಿಜಯ್ ಸಿಂಗ್, ನೇಹಾ ಧೂಪಿಯಾ ಮತ್ತು ಪ್ರಿನ್ಸ್ ಸೆಲೆಕ್ಟ್ ಮಾಡಿದರು. ಆದ್ರೆ, ಈ ಮೂವರ ಪೈಕಿ ಯಾರ ಗ್ಯಾಂಗ್ ನಲ್ಲಿರಬೇಕು ಎಂಬ ನಿರ್ಧಾರ ಸಂಯುಕ್ತ ರವರೇ ಮಾಡಬೇಕಿತ್ತು. ಆಗ ಸಂಯುಕ್ತ ಆಯ್ಕೆ ಮಾಡಿದ್ದು ರಣ್ ವಿಜಯ್ ಸಿಂಗ್ ರವರ ಗ್ಯಾಂಗ್.

'ರೋಡೀಸ್ ರೈಸಿಂಗ್'ನಲ್ಲಿ ನಾಲ್ಕು ಗ್ಯಾಂಗ್

'ರೋಡೀಸ್ ರೈಸಿಂಗ್' ರಿಯಾಲಿಟಿ ಶೋನಲ್ಲಿ ನಾಲ್ಕು ಗ್ಯಾಂಗ್ ಇರಲಿವೆ. ಒಂದೊಂದು ಗ್ಯಾಂಗ್ ನಲ್ಲಿ ಐವರಂತೆ ಒಟ್ಟು 20 ಸ್ಪರ್ಧಿಗಳು 'ಅಲ್ಟಿಮೇಟ್ ರೋಡೀ' ಪಟ್ಟಕ್ಕಾಗಿ ಸೆಣಸಾಡಲಿದ್ದಾರೆ. ಗ್ಯಾಂಗ್ ಲೀಡರ್ ಆಗಿ ರಣ್ ವಿಜಯ್ ಸಿಂಗ್, ನೇಹಾ ಧೂಪಿಯಾ, ಪ್ರಿನ್ಸ್ ನರುಲಾ ಮತ್ತು ಕರಣ್ ಕುಂದ್ರಾ ಇದ್ದಾರೆ. ಈ ಬಾರಿ 'ರೋಡೀಸ್' ಗೆ ಗೂಗ್ಲಿ ಎಸೆಯಲು ಹರಭಜನ್ ಸಿಂಗ್ ಎಂಟ್ರಿಕೊಟ್ಟಿದ್ದಾರೆ.

'ರೋಡೀಸ್' ಕುರಿತು

MTV ವಾಹಿನಿಯ ಅತ್ಯಂತ ಜನಪ್ರಿಯ ಶೋ 'ರೋಡೀಸ್'. 2003ರಲ್ಲಿ ಆರಂಭವಾದ ಈ ಶೋ ಇಲ್ಲಿಯವರೆಗೂ ಹದಿಮೂರು ಆವೃತ್ತಿಗಳನ್ನು ಯಶಸ್ವಿ ಆಗಿ ಪೂರೈಸಿದೆ. ಸದ್ಯ ಗ್ಯಾಂಗ್ ಲೀಡರ್ ಆಗಿರುವ ರಣ್ ವಿಜಯ್ ಸಿಂಗ್ ಮೊಟ್ಟ ಮೊದಲ 'ರೋಡೀಸ್' ಆವೃತ್ತಿಯ ವಿನ್ನರ್. ಇನ್ನೂ ಪ್ರಿನ್ಸ್ ನರುಲಾ ಕೂಡ 'ರೊಡೀಸ್ X2' ವಿನ್ನರ್.

English summary
Samyuktha Hegde of 'Kirik Party' fame is exploring new avenues. She recently auditioned for Roadies Rising in Pune. Here is the Highlights of Samyuktha Hegde's audition in Roadies Rising.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada