ಏಪ್ರಿಲ್ ತಿಂಗಳಲ್ಲಿ ಮಕಾಡೆ ಮಲಗಿದ ಸ್ಟಾರ್ ಸಿನಿಮಾಗಳು
ಮಾರ್ಚ್ ತಿಂಗಳಿಗೆ ಬಂದ್ರೆ ಸ್ಟಾರ್ ಸಿನಿಮಾಗಳೇ ತೆರೆಕಂಡ್ವು....ದುನಿಯಾ ವಿಜಿ ಅಭಿನಯದ ರಜಿನಿಕಾಂತ-ಉಪ್ಪಿ ಅಭಿನಯದ ಟೋಪಿವಾಲ-ಜಗ್ಗೇಶ್ ಅಭಿನಯದ ಸಿಐಡಿ ಈಶ-ಪ್ರಜ್ವಲ್ ದೇವರಾಜ್ ಅಭಿನಯದ ಜಿದ್ದಿ-ಮಾಲಾಶ್ರೀ ಅಭಿನಯದ ವೀರ....ದುರಾದೃಷ್ಟ ಅಂದ್ರೆ ಈ 5 ಸ್ಟಾರ್ ಸಿನಿಮಾಗಳು ಹೇಳಿಕೊಳ್ಳೋಂಥ ಸಕ್ಸಸ್ ಕಾಣ್ಲಿಲ್ಲ.
ಮಾರ್ಚ್ ತಿಂಗಳಲ್ಲಿ ಸ್ಟಾರ್ಸ್ ಸಿನಿಮಾಗಳೇ ತಕ್ಕಮಟ್ಟಿಗೆ ಹೆಸ್ರು ಮಾಡಿದ್ರೆ-ಹೊಸಬರ ಸಿನಿಮಾ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸೆಂಚುರಿ ಬಾರಿಸಿದ್ದು ಖುಷಿಯ ವಿಚಾರ. ಒಟ್ನಲ್ಲಿ ಮೊದಲ 3 ತಿಂಗಳಲ್ಲೇ ಚಾರ್ಮಿನಾರ್-ಮೈನಾ -ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಶತದಿನೋತ್ಸವ ಆಚರಿದ್ವು. (ಸಿಂಪಲ್ಲಾಗ್ ಚಿತ್ರ ವಿಮರ್ಶೆ)

ಪರಾರಿ -ಛತ್ರಿಗಳು ಸಾರ್ ಛತ್ರಿಗಳು ಅವರೇಜ್ ಸಿನಿಮಾಗಳಾದ್ರೆ-ಜಟಾಯು, ಜನ್ಮ, ಗಜೇಂದ್ರ ಕುಂಟ್ತಾನೇಯಿತ್ತು. ಇದೆಲ್ಲದ್ರ ನಡುವೆ 50 ದಿನ ಪೂರೈಸಿದ್ದು ಮಾತ್ರ ಸುದೀಪ್ ಅಭಿನಯದ 'ಬಚ್ಚನ್' ಸಿನಿಮಾ.
ಇನ್ನು ಮೇ ತಿಂಗಳಲ್ಲಿ ರಿಲೀಸ್ ಕುಂಭರಾಶಿ -ಆನೆಪಟಾಕಿ-ಎಲೆಕ್ಷನ್ -ಜಿಂಕೆಮರಿ ಅವರೇಜ್ ಅನಿಸಿಕೊಳ್ತು-ಪಗಡೆ-ನಾವು ಗೆಳೆಯರು ಹಾಗೋಹೀಗೋ ಎರಡು ವಾರ ತಳ್ಳಿದ್ರೆ -ಮದರಂಗಿ ಮತ್ತು ಬುಲ್ ಬುಲ್ ಸಿನಿಮಾಗಳು ಹಾಫ್ ಸೆಂಚೂರಿ ಬಾರಿಸ್ತು. ಆದ್ರೆ ಇದೇ ಮೇ 31 ರಂದು ರಿಲೀಸ್ ಆದ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ ಡೈರೆಕ್ಟರ್ ಸ್ಪೆಷಲ್ ನಿರೀಕ್ಷೆ ಮಟ್ಟ ತಲುಪಲಿಲ್ಲ.


Click it and Unblock the Notifications











