twitter
    For Quick Alerts
    ALLOW NOTIFICATIONS  
    For Daily Alerts

    ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ವಿಮರ್ಶೆ

    By Rajendra
    |

    Rating:
    2.5/5
    ಹೊಸಬರ ಮೊದಲ ಪ್ರಯತ್ನವನ್ನು ನೋಡಲು ಥಿಯೇಟರ್ ಭರ್ತಿಯಾಗಿತ್ತು. ಚಿತ್ರದಲ್ಲಿ ಹೊಸತನ ಇದೆ ಎಂದರೆ ನಮ್ಮ ಕನ್ನಡಿಗರು ಬೆಳಗಿನ ತಿಂಡಿ ಕೂಡ ಮರೆತು ಬರುತ್ತಾರೆ. ಚಿತ್ರಮಂದಿರದರೆಗೂ ಪ್ರೇಕ್ಷಕರನ್ನು ಸೆಳೆಯುವಲ್ಲಿ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರ ಸಾಕಷ್ಟು ಶ್ರಮಿಸಿದೆ. ಆದರೆ ಚಿತ್ರ ಹೇಗಿದೆ?

    ಚಿತ್ರದಲ್ಲಿ ಕಚಗುಳಿ ಇಡುವ ಡೈಲಾಗ್ ಗಳಿವೆ. ಕಣ್ಣಿಗೆ ತಂಪೆರೆಯುವ ಛಾಯಾಗ್ರಹಣವಿದೆ. ಕಿವಿಗೆ ಹಿತವಾಗಿರುವ ಕೆಲವು ಹಾಡುಗಳಿವೆ. ಆದರೆ ಕಥೆಯಲ್ಲಿ ಬಿಗಿ ಇಲ್ಲದೆ ಪ್ರೇಕ್ಷಕರು ಡೈಲಾಗ್ ಗಳಿಗಷ್ಟೇ ತೃಪ್ತಿ ಪಡಬೇಕಾಗುತ್ತದೆ.

    ಕುಶಾಲ್ (ರಕ್ಷಿತ್ ಶೆಟ್ಟಿ) ಮತ್ತು ಖುಷಿ (ಶ್ವೇತಾ ಶ್ರೀವಾತ್ಸವ್) ನಡುವಿನ ಕಥೆಯಿದು. ಇಬ್ಬರೂ ತಂತಮ್ಮ ಹಳೆ ಲವ್ ಸ್ಟೋರಿ ಹೇಳಿಕೊಳ್ಳುತ್ತಾ ಕಥೆ ಸಾಗುತ್ತದೆ. ಖುಷಿಯೇ ತನ್ನ ಲವರ್ ಎಂದು ಕಲ್ಪಿಸಿಕೊಂಡು ತನ್ನ ಕಥೆ ಹೇಳುತ್ತಾನೆ ಕುಶಾಲ್. ಖುಷಿ ಸಹ ಅಷ್ಟೇ ತನ್ನ ಲವ್ ಸ್ಟೋರಿ ಹೇಳುತ್ತಾಳೆ. ಆದರೆ ಅಲ್ಲೂ ಕುಶಾಲ್ ಕಾಣಿಸುತ್ತಾನೆ.

    ಚಿತ್ರ: ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ
    ನಿರ್ದೇಶನ: ಸುನಿ
    ನಿರ್ಮಾಪಕ: ಹೇಮಂತ್
    ಸಂಗೀತ: ಬಿ.ಜೆ.ಭರತ್
    ಛಾಯಾಗ್ರಹಣ: ಮನೋಹರ್ ಜೋಶಿ
    ಪಾತ್ರವರ್ಗ: ರಕ್ಷಿತ್ ಶೆಟ್ಟಿ, ಶ್ವೇತಾ ಶ್ರೀವಾತ್ಸವ್, ಶ್ರೀನಗರ ಕಿಟ್ಟಿ, ಆರ್ ಜೆ ರಚನಾ, ನೆ.ಲ.ನರೇಂದ್ರಬಾಬು ಮುಂತಾದವರು.

    ಫ್ಲ್ಯಾಶ್ ಬ್ಯಾಕ್ ನಲ್ಲಿ ಎಡವಿದ ಕಥೆ

    ಫ್ಲ್ಯಾಶ್ ಬ್ಯಾಕ್ ನಲ್ಲಿ ಎಡವಿದ ಕಥೆ

    ಕಥೆ ಹೇಳುತ್ತಲೇ ಇಬ್ಬರೂ ಒಬ್ಬರಿಗೊಬ್ಬರು ಹತ್ತಿರವಾಗುತ್ತಾರೆ. ಪ್ರೇಮಿಗಳಿಬ್ಬರೂ ತಮ್ಮ ಪ್ರೇಮವನ್ನು ನಿವೇದಿಸಿಕೊಳ್ಳುತ್ತಾರೆ. ಅಲ್ಲಿಗೆ ಚಿತ್ರದ ಒಂದು ಅಂಕ ಮುಗಿದಿರುತ್ತದೆ. ಇನ್ನೇನು ಎಲ್ಲವೂ ಓಕೆ ಎಂದುಕೊಂಡಾಗಲೇ ಕಥೆ ಮತ್ತೊಂದು ತಿರುವು ಪಡೆಯುತ್ತದೆ.

    ಖುಷಿಗೆ ಮರೆವಿನ ಕಾಯಿಲೆ?

    ಖುಷಿಗೆ ಮರೆವಿನ ಕಾಯಿಲೆ?

    ಖುಷಿಗೆ Anterograde amnesia ಎಂಬ ಮರೆವಿನ ಕಾಯಿಲೆ ಇದೆ ಎಂದು ಗೊತ್ತಾಗುತ್ತದೆ. ಇಂದು ನಡೆದದ್ದು ನಾಳೆ ನೆನಪಿರಲ್ಲ. ಇದೂ ಒಂದು ದುರಂತ ಎಂದು ಕುಶಾಲ್ ಭಾವಿಸುತ್ತಾನೆ. ಕಡೆಗೆ ನಾಯಕಿ ಕುಶಾಲ್ ನನ್ನು ಮರೆಯುತ್ತಾಳಾ? ಇಲ್ಲವೇ? ಎಂಬುದೇ ಚಿತ್ರದ ಕಥಾಹಂದರ.

    ಚಿತ್ರದ ತಾಂತ್ರಿಕತೆ ಹೇಗಿದೆ?

    ಚಿತ್ರದ ತಾಂತ್ರಿಕತೆ ಹೇಗಿದೆ?

    ಇದಿಷ್ಟನ್ನು ಸಿಂಪಲ್ಲಾಗಿಯೇ ನಿರ್ದೇಶಕ ಸುನಿ ಹೇಳಿಕೊಂಡು ಹೊರಟಿದ್ದಾರೆ. ಆದರೆ ಪಾತ್ರಗಳಲ್ಲಿ ವೈವಿಧ್ಯತೆ ಇಲ್ಲದಿರುವುದು ಎದ್ದು ಕಾಣುವ ಅಂಶ. ಉಳಿದಂತೆ ಸಂಭಾಷಣೆ, ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಬಿ.ಜೆ ಭರತ್ ಅವರ ಸಂಗೀತವೂ ಹಿತವಾಗಿದೆ. ಮಲೆನಾಡಿನ ಚಿತ್ರಗಳನ್ನು ಸೆರೆ ಹಿಡಿಯುವಲ್ಲಿ ಮನೋಹರ್ ಜೋಶಿ (ಛಾಯಾಗ್ರಹಣ) ಗೆದ್ದಿದ್ದಾರೆ.

    ಹಾಲಿವುಡ್ '50 First Dates' ಚಿತ್ರದ ನೆನಪು

    ಹಾಲಿವುಡ್ '50 First Dates' ಚಿತ್ರದ ನೆನಪು

    ಅಂದಹಾಗೆ ಈ ಚಿತ್ರ ಸ್ವಮೇಕ್ ಆದರೂ 2004ರಲ್ಲಿ ತೆರೆಕಂಡ ಅಮೆರಿಕಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರ '50 First Dates' ಎಂಬ ಚಿತ್ರವನ್ನು ನೆನಪಿಸುವಂತಿದೆ. ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಚಿತ್ರಕ್ಕೆ '50 First Dates' ಸ್ಫೂರ್ತಿಯಾಗಿರಲೂಬಹುದು.

    ರಕ್ಷಿತ್, ಶ್ವೇತಾ ಅಭಿನಯ ಚಿಲಿಪಿಲಿ ಅಭಿನಯ

    ರಕ್ಷಿತ್, ಶ್ವೇತಾ ಅಭಿನಯ ಚಿಲಿಪಿಲಿ ಅಭಿನಯ

    ರಕ್ಷಿತ್ ಹಾಗೂ ಶ್ವೇತಾ ಅವರ ಚಿಲಿಪಿಲಿ ಅಭಿನಯ ಸೊಗಸಾಗಿದೆ. ಸಂಭಾಷಣೆ ಮೇಲಿನ ಹಿಡಿತ ನಿರ್ದೇಶನದ ಮೇಲೆ ಸುನಿ ಅವರಿಗೆ ಸಿಕ್ಕಿಲ್ಲ. ಮೊದಲರ್ಧ ಜಾಲಿಯಾಗಿ ಸಾಗಿದರೆ, ದ್ವಿತೀಯಾರ್ಧದಲ್ಲಿ ಕಥೆ ಬಿಗಿತನ ಕಳೆದುಕೊಳ್ಳುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಒಂಚೂರು ಕುತೂಹಲ ಉಳಿಸಿಕೊಳ್ಳುತ್ತದೆ.

    ಡೈಲಾಗ್ ಏರಿಗೆ, ಕಥೆ ನೀರಿಗೆ

    ಡೈಲಾಗ್ ಏರಿಗೆ, ಕಥೆ ನೀರಿಗೆ

    ಶ್ರೀನಗರಕಿಟ್ಟಿ, ಮಹಾಲಕ್ಷ್ಮಿ ಲೇಔಟ್ ಶಾಸಕ ನೆ.ಲ.ನರೇಂದ್ರ ಬಾಬು ಹಾಗೂ ರೇಡಿಯೋ ಜಾಕಿ ರಚನಾ ಅವರದು ಅಮೋಘ ಅಭಿನಯ ಅಲ್ಲದಿದ್ದರೂ ಸಾಂದರ್ಭೋಚಿತವಾಗಿದೆ. ಸಿಂಪಲ್ಲಾಗ್ ಹೇಳ್ಬೇಕು ಅಂದ್ರೆ ಡೈಲಾಗ್ ಏರಿಗೆ, ಕಥೆ ನೀರಿಗೆ.

    English summary
    Kannada film 'Simple aag Ondu Love Story' Review. The film has Rakshit Shetty and Shwetha Srivatsav in lead roles. Directed by Sunil Kumar, the film created waves after the trailer of the film was released on a video-sharing website. The movie inspired from American romantic comedy '50 First Dates' (2004).
    Friday, April 26, 2013, 17:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X