»   » ಯಶ್ 'ಕೆ.ಜಿ.ಎಫ್' ಚಿತ್ರದ ಲೇಟೆಸ್ಟ್ ಸುದ್ದಿ ಕೇಳಿದ್ರಾ?

ಯಶ್ 'ಕೆ.ಜಿ.ಎಫ್' ಚಿತ್ರದ ಲೇಟೆಸ್ಟ್ ಸುದ್ದಿ ಕೇಳಿದ್ರಾ?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಲಿರುವ ಬಹುಕೋಟಿ ವೆಚ್ಚದ 'ಕೆ.ಜಿ.ಎಫ್' ಸಿನಿಮಾ ಗೆ ಮೂಹೂರ್ತ ನಡೆದು 8 ತಿಂಗಳು ಕಳೆದಿವೆ. ಆದರೆ ಸಿನಿಮಾ ಚಿತ್ರೀಕರಣ ಇನ್ನೂ ಶುರುವಾಗ್ಲೇ ಇಲ್ಲವಲ್ಲ ಅನ್ನೋ ಪ್ರಶ್ನೆ ಯಶ್ ಅಭಿಮಾನಿಗಳಲ್ಲಿ ಕಾಡುತ್ತಿತ್ತು.['ಕೆ.ಜಿ.ಎಫ್'ಗಾಗಿ ಯಶ್ ಅವರ ಹೊಸ ಲುಕ್ ನೋಡಿ]

'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದ ನಂತರ ಮದುವೆ ಬಿಜಿ ಮತ್ತು 'ಯಶೋಮಾರ್ಗ ಫೌಂಡೇಶನ್' ಮೂಲಕ ರೈತರಿಗಾಗಿ ಒಳ್ಳೆ ಕೆಲಸಗಳನ್ನು ಮಾಡುವಲ್ಲಿ ತೊಡಗಿಕೊಂಡಿದ್ದ ಯಶ್, ಜೊತೆಗೆ 'ಕೆ.ಜಿ.ಎಫ್' ಚಿತ್ರಕ್ಕಾಗಿ ವರ್ಕೌಟ್ ಸಹ ಮಾಡುತ್ತಿದ್ದರು. ಸ್ಪೆಷಲ್ ಹೇರ್ ಸ್ಟೈಲ್ ಮಾಡಿಕೊಂಡು ರೆಡಿಯಾಗಿದ್ದ ಯಶ್, 'ಕೆ.ಜಿ.ಎಫ್' ಚಿತ್ರೀಕರಣ ಆರಂಭ ಯಾವಾಗ ಎಂಬ ಕುತೂಹಲಕ್ಕೆ ಈಗ ಕಂಪ್ಲೀಟ್ ಬ್ರೇಕ್ ಹಾಕಿದ್ದಾರೆ.


'ಕೆ.ಜಿ,ಎಫ್'ಗೆ ಇಂದಿನಿಂದ ಚಾಲನೆ

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರ 'ಕೆ.ಜಿ.ಎಫ್' ಚಿತ್ರೀಕರಣ ಇಂದಿನಿಂದ(ಮಾರ್ಚ್ 15) ಶುರುವಾಗಿದೆ.['ಕೆಜಿಎಫ್' ಚಿತ್ರಕ್ಕಾಗಿ ವರ್ಕೌಟ್ ಮಾಡ್ತಿದ್ದಾರಾ ಯಶ್!]


ಚಿತ್ರ ಆರಂಭದ ಬಗ್ಗೆ ಯಶ್ ಟ್ವೀಟ್

ಉದ್ದನೆಯ ಕೂದಲು, ಗಡ್ಡವನ್ನು ಬಿಟ್ಟು ಸಖತ್ ಡಿಫ್ರೆಂಟ್ ಆಗಿ ತಯಾರಾಗಿದ್ದ ಯಶ್, 'ಕೆ.ಜಿ.ಎಫ್' ಚಿತ್ರೀಕರಣ ಆರಂಭವಾಗಿರುವ ಬಗ್ಗೆ ಸ್ವತಃ ತಮ್ಮ ಸೆಲ್ಫಿಯೊಂದಿಗೆ ಟ್ವೀಟ್ ಮಾಡಿದ್ದಾರೆ.[ಕೊಪ್ಪಳದಲ್ಲಿ ಮಹತ್ವದ ಕೆಲಸಕ್ಕೆ ಚಾಲನೆ ಕೊಟ್ಟ ಯಶ್-ರಾಧಿಕಾ ದಂಪತಿ]


ಚಿತ್ರ ಸೆಟ್ ನಲ್ಲಿ ಪ್ರಶಾಂತ್ ನೀಲ್

ಇಂದಿನಿಂದ ಯಶ್ ಗೆ ಆಕ್ಷನ್ ಕಟ್ ಹೇಳಲು ಆರಂಭಿಸಿರುವ 'ಕೆ.ಜಿ.ಎಫ್' ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರ ಸೆಟ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.


ರೆಟ್ರೋ ಸ್ಟೈಲ್ ನಲ್ಲಿ ಯಶ್

'ಕೆಜಿಎಫ್' ಚಿತ್ರ 1970 ರ ದಶಕದ ಚಿತ್ರಕಥೆ ಆಗಿರುವುದರಿಂದ, ಯಶ್ ಈ ಸಿನಿಮಾದಲ್ಲಿ ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ಗೆ ಚಿತ್ರದಲ್ಲಿ ನಾಯಕಿ ಆಗಿ 24 ವರ್ಷದ ಬ್ಯೂಟಿ ಕ್ವೀನ್ ಶ್ರೀನಿಧಿ ಶೆಟ್ಟಿ ನಟಿಸಲಿದ್ದಾರೆ.


ಡಿಸೆಂಬರ್ ನಲ್ಲಿ ಚಿತ್ರ ಬಿಡುಗಡೆ

ಇಂದು ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ 'ಕೆ.ಜಿ.ಎಫ್' ಸಿನಿಮಾವನ್ನು ಕ್ರಿಸ್ ಮಸ್ ಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.


ಕನ್ನಡದ ಅತಿದೊಡ್ಡ ಬಜೆಟ್ ಸಿನಿಮಾ

ಕನ್ನಡ ಚಿತ್ರರಂಗದ ಮಟ್ಟಿಗೆ 'ಕೆ.ಜಿ.ಎಫ್' ಅತಿ ದೊಡ್ಡ ಬಜೆಟ್ ಸಿನಿಮಾ ಆಗಿದ್ದು, 'ಉಗ್ರಂ' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಂಗಂದೂರ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.


English summary
Kannada Actor Yash Starring Most Expensive 'KGF' Movie Shooting Start Today(March 15).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada