twitter
    X
    Home ಚಲನಚಿತ್ರಗಳ ಒಳನೋಟ

    ಮದುವೆಗಾಗಿ ಮತಾಂತರಗೊಂಡ ನಟಿಯರ ಪಟ್ಟಿ ಇಲ್ಲಿದೆ

    Author Sowmya Bairappa | Published: Monday, August 29, 2022, 05:59 PM [IST]

    ಅನೇಕ ನಟಿಯರು ಅಂತರ್‌ ಧರ್ಮೀಯ ವಿವಾಹ ಮಾಡಿಕೊಂಡಿದ್ದಾರೆ. ಇವರಲ್ಲಿ ಹಲವರು ತಮ್ಮ ಧರ್ಮವನ್ನೇ ಪತಿಯ ಧರ್ಮಕ್ಕೆ ಬದಲಾಯಿಸಿಕೊಂಡಿದ್ದಾರೆ. ಅಂತಹ ನಟಿಯರು ಯಾರು ಎಂಬ ಮಾಹಿತಿ ಇಲ್ಲಿದೆ.

    cover image
    ನಯನತಾರ

    ನಯನತಾರ

    1

    ನಯನತಾರಾ ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಆದರೆ, ಅವರು 7 ಆಗಸ್ಟ್ 2011ರಂದು ಚೆನ್ನೈನ ಆರ್ಯ ಸಮಾಜದಲ್ಲಿ ಹಿಂದೂ ಧರ್ಮ ಸ್ವೀಕರಿಸಿದರು. ವೇದಾಚರಣೆಗಳ ಪ್ರಕಾರ 'ಶುದ್ಧಿ ಕರ್ಮ'ದಂತಹ ಎಲ್ಲಾ ಆಚರಣೆಗಳನ್ನು ಅನುಸರಿಸಿ ಹಿಂದೂ ಧರ್ಮಕ್ಕೆ ಪರಿವರ್ತನೆ ಪ್ರಮಾಣಪತ್ರವನ್ನು ಪಡೆದರು. ಇತ್ತೀಚೆಗಷ್ಟೇ ಅವರು ತಮ್ಮ ಗೆಳೆಯ, ತಮಿಳು ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿದ್ದಾರೆ.  

    ಜ್ಯೋತಿಕಾ

    ಜ್ಯೋತಿಕಾ

    2

    ನಟಿ ಜ್ಯೋತಿಕಾ ಅವರ ತಂದೆ ಪಂಜಾಬಿ ಮತ್ತು ತಾಯಿ ಮುಸ್ಲಿಂ. ಇವರ ಅಕ್ಕ ನಟಿ ನಗ್ಮಾ ಅವರ ಕ್ರಿಶ್ಚಿಯನ್‌ ವ್ಯಕ್ತಿಯನ್ನು ಮದುವೆಯಾಗಿದ್ದು, ತಮ್ಮನ್ನು ಕ್ರಿಶ್ಚಿಯನ್ ಎಂದು ಗುರುತಿಸಿಕೊಳ್ಳುತ್ತಾರೆ. ಜ್ಯೋತಿಕಾ ಅವರು ತಮಿಳು ನಟ ಸೂರ್ಯ ಅವರನ್ನು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ. ಈ ದಂಪತಿಗೆ ತಮ್ಮ ಇಬ್ಬರು ಮಕ್ಕಳಿಗೆ ದೇವ್ ಮತ್ತು ದಿಯಾ ಎಂದು ಹೆಸರಿಟ್ಟಿದ್ದಾರೆ.  

    ಆಯೇಶಾ

    ಆಯೇಶಾ

    3

    ಪುರಿ ಜಗನ್ನಾಥ್ ಅವರ ನಿರ್ದೇಶನದ ನಾಗಾರ್ಜುನ ಅಕ್ಕಿನೇನಿ ಅವರ 'ಸೂಪರ್' ಚಿತ್ರದಲ್ಲಿ ನಟಿಸಿರುವ ಟಾಲಿವುಡ್‌ನ ಸೂಪರ್ ಗರ್ಲ್ ಆಯೇಷಾ ಟಾಕಿಯಾ. ಇವರು ನಟಿ ನಗ್ಮಾ ಅವರಂತೆಯೇ ಅಂತರ್ಧರ್ಮೀಯ ಪೋಷಕರಿಗೆ ಜನಿಸಿದವರು. ಅವರ ತಂದೆ ಗುಜರಾತಿ ಹಿಂದೂ ಆಗಿದ್ದರೆ, ತಾಯಿ ಕಾಶ್ಮೀರಿ ಮುಸ್ಲಿಂ. ಆಯೇಶಾ ರೆಸ್ಟೊರೇಟರ್ ಫರ್ಹಾನ್ ಅಜ್ಮಿ ಅವರನ್ನು ವಿವಾಹವಾಗಿದ್ದು, ಅಯೇಷಾ ಸಂಪೂರ್ಣವಾಗಿ ಇಸ್ಲಾಂಗೆ ಮತಾಂತರಗೊಂಡರು. ಅವರು ತಮ್ಮ ಮಗನಿಗೆ ಮಿಕೈಲ್ ಅಜ್ಮಿ ಎಂದು ಹೆಸರಿಟ್ಟಿದ್ದಾರೆ. 

     

    ಖುಷ್ಬೂ

    ಖುಷ್ಬೂ

    4


    ಕಲಿಯುಗ ಪಾಂಡವುಲು ಸಿನಿಮಾ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಖುಷ್ಬು ಸುಂದರ್, ಮುಂಬೈನ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಇವರ ಮೂಲ ಹೆಸರು ನಖತ್ ಖಾನ್.‌ ನಂತರ ಹಿಂದೂ ಧರ್ಮೀಯ ಸುಂದರ್ ಅವರನ್ನು ಮದುವೆಯಾಗುವ ಮುನ್ನ ಅವರು ಹಿಂದೂ ಸಂಪ್ರದಾಯಗಳನ್ನು ಅನುಸರಿಸಿದರು. ದಂಪತಿ ತಮ್ಮ ಮಕ್ಕಳಿಗೆ ಆವಂತಿಕಾ ಮತ್ತು ಆನಂದಿತಾ ಎಂದು ಹೆಸರಿಸಿದ್ದಾರೆ. ಸದ್ಯ ಖುಷ್‌ಬೂ ತಮಿಳುನಾಡಿನ ಭಾರತೀಯ ಜನತಾ ಪಾರ್ಟಿಯಲ್ಲಿ ಕ್ರಿಯಾಶೀಲವಾಗಿದ್ದು, ಇವರಿಗಾಗಿ ಒಂದು ದೇವಾಲಯವನ್ನೂ ಕಟ್ಟಲಾಗಿದೆ.

    ಹೇಮಾಮಾಲಿನಿ

    ಹೇಮಾಮಾಲಿನಿ

    5

     'ಗೌತಮಿಪುತ್ರ ಶಾತಕರ್ಣಿ' ಚಿತ್ರದಲ್ಲಿ ನಟಿಸಿರುವ ನಟಿ ಹೇಮಾಮಾಲಿನಿ ಅವರು ಹುಟ್ಟಿನಿಂದ ಹಿಂದೂ ತಮಿಳು ಅಯ್ಯಂಗಾರ್ ಬ್ರಾಹ್ಮಣರು. ಹಿಂದಿ ನಟ ಧರ್ಮೇಂದ್ರ ಅವರ ಮೊದಲ ಪತ್ನಿ ವಿಚ್ಛೇದನ ನೀಡಲು ನಿರಾಕರಿಸಿದ್ದರಿಂದ ಇಸ್ಲಾಂಗೆ ಮತಾಂತರಗೊಂಡು ಮದುವೆಯಾದರು ಎಂದು ವರದಿಯಾಯಿತು. ಹೇಮಾಮಾಲಿನಿ ಮತ್ತು ಧರ್ಮೇಂದ್ರ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X