X
ಹೋಮ್ ಚಲನಚಿತ್ರಗಳ ಒಳನೋಟ

ಖುಷ್ಬೂ ನಟನೆಯ ಕನ್ನಡದ ಎವರ್ ಗ್ರೀನ್ ಹಾಡುಗಳ ಪಟ್ಟಿ

Author Sowmya Bairappa | Published: Thursday, September 29, 2022, 03:57 PM [IST]

'ರಣಧೀರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಖುಷ್ಬೂ ಸುಂದರ್, ನಟ ರವಿಚಂದ್ರನ್ ಜೊತೆ ಹಲವು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ರಣಧೀರ, ಅಂಜದಗಂಡು, ಯುಗಪುರುಷ, ಶಾಂತಿ ಕ್ರಾಂತಿ, ರುದ್ರ, ಪ್ರೇಮಾಗ್ನಿ, ಒಂಟಿ ಸಲಗ, ಹೃದಯಗೀತೆ, ಗಗನ, ಕಲಿಯುಗ ಭೀಮಾ, ಅಭಿಜಿತ್, ಜೀವನದಿ, ಮಹಾ ಎಡಬಿಡಂಗಿ, ಚಾಮುಂಡಿ, ಆಂಟಿಪ್ರೀತ್ಸೆ, ಪಾಳೇಗಾರ, ಮ್ಯಾಜಿಕ್ ಅಜ್ಜಿ ಕನ್ನಡ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಖುಷ್ಬೂ ನಟನೆಯ ಎವರ್ ಗ್ರೀನ್ ಹಾಡುಗಳ ಪಟ್ಟಿ ಇಲ್ಲಿದೆ.


cover image
Video Thumbnail

ಶಾಂತಿ ಕ್ರಾಂತಿ - ಗಾಳಿಯೋ, ಗಾಳಿಯೋ

1991ರಲ್ಲಿ ಬಿಡುಗಡೆಯಾಗಿದ್ದ ರವಿಚಂದ್ರನ್ ನಿರ್ದೇಶನದ ಶಾಂತಿ-ಕ್ರಾಂತಿ ಸಿನಿಮಾ ಸೂಪರ್ ಹಿಟ್ ಆಗಿತ್ತು.  ಈ ಸಿನಿಮಾವನ್ನು ರವಿಶಂದ್ರನ್ ತಂದೆ ವೀರಾಸ್ವಾಮಿ ನಿರ್ಮಾಣ ಮಾಡಿದ್ದರು.  ಆಗಿನ ಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಬಿಡುಗಡೆಯಾದ ಚಿತ್ರ ಇದು. ಈ ಸಿನಿಮಾದಲ್ಲಿ ರವಿಚಂದ್ರನ್, ರಜನಿ ಕಾಂತ್, ನಾಗಾರ್ಜುನ, ಜೂಹಿ ಚಾವ್ಲಾ, ಖುಷ್ಬೂ, ರಮೇಶ್​ ಅರವಿಂದ್, ಅನಂತ್ ನಾಗ್ ಹೀಗೆ ದಕ್ಷಿಣ ಭಾರತದ  ಅದ್ಬುತ ಕಲಾವಿದರ ದಂಡೇ ಇತ್ತು. ಈ ಸಿನಿಮಾದ ಗಾಳಿಯೋ, ಗಾಳಿಯೋ ಹಾಡು ಕೂಡ ಅಷ್ಟೇ ಹಿಟ್ ಆಗಿತ್ತು.  

Video Thumbnail

Yuga Purusha - ಯಾವುದೋ ಈ ಗೊಂಬೆ ಯಾವುದೋ

ಡಿ. ರಾಜೇಂದ್ರ ಬಾಬು ನಿರ್ದೇಶನದ ಯುಗ ಪುರುಷ ಸಿನಿಮಾ 1989ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಖುಷ್ಬು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇದು ಬಾಲಿವುಡ್ ಚಿತ್ರ ಕಾರ್ಜ್ ರಿಮೇಕ್ ಆಗಿದೆ. ಚಿತ್ರಕ್ಕೆ ಹಂಸಲೇಖ ಸಂಗೀತ ಸಂಯೋಜಿಸಿದ್ದು, ಈ ಸಿನಿಮಾದ 'ಯಾವುದೋ ಈ ಗೊಂಬೆ ಯಾವುದೋ' ಹಿಟ್ ಆಗಿತ್ತು.  

Video Thumbnail

ರಣಧೀರ - ಪ್ರೀತಿ ಮಾಡಬಾರದು

1988ರಲ್ಲಿ ಬಿಡುಗಡೆಯಾದ ಹಿಟ್ ಚಿತ್ರ ರಣಧೀರ. ಈ ಸಿನಿಮಾದಲ್ಲಿ ರವಿಚಂದ್ರನ್ ನಾಯಕನಾಗಿ ಹಾಗೂ ಖುಷ್ಬೂ ನಾಯಕಿಯಾಗಿ ಅಭಿನಯಿಸಿದ್ದರು.  ಈ ಸಿನಿಮಾದ ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು' ಹಾಡು ಸಖತ್ ಫೇಮಸ್ ಆಗಿತ್ತು. ಹಂಸಲೇಖ ಅವರು ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ಸಂಗೀತವನ್ನೂ ಸಂಯೋಜಿಸಿದ್ದರು. 

Video Thumbnail

Ranadheera - ಯಾರೇ ನೀನು ಸುಂದರ ಚೆಲುವೆ

ಯಾರೇ ನೀನು ಸುಂದರ ಚೆಲುವೆ ಕೂಡ 1988ರಲ್ಲಿ ಬಿಡುಗಡೆಯಾದ ರಣಧೀರ ಸಿನಿಮಾದ ಹಾಡು ಈ ಹಾಡು ಕೂಡ ಅಂದಿನ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು. 

Video Thumbnail

Yuga Purusha - ಮುತ್ತೇ ಪ್ರಥಮ.. ಅದುವೇ ಜಗದ ನಿಯಮ

ಮುತ್ತೇ ಪ್ರಥಮ.. ಅದುವೇ ಜಗದ ನಿಯಮ ಹಾಡು ಕೂಡ ಡಿ. ರಾಜೇಂದ್ರ ಬಾಬು ನಿರ್ದೇಶನದ ಯುಗ ಪುರುಷ ಸಿನಿಮಾದ್ದು. ಮುತ್ತೇ ಪ್ರಥಮ ಹಾಡನ್ನು ಎಸ್.ಪಿ.ಬಾಲಸುಬ್ರಮಣ್ಯಂ ಹಾಗೂ ವಾಣಿ ಜಯರಾಮ್ ಹಾಡಿದ್ದರು.  

 

Video Thumbnail

ರಣಧೀರ - ಒಂದಾನೊಂದು ಕಾಲದಲ್ಲಿ ಆರಂಭ

ಒಂದಾನೊಂದು ಕಾಲದಲ್ಲಿ ಆರಂಭ ಹಾಡು ಕೂಡ 1988ರಲ್ಲಿ ಬಿಡುಗಡೆಯಾದ ರಣಧೀರ ಸಿನಿಮಾದ್ದು. ಈ ಹಾಡನ್ನು ರಮೇಶ್ ಹಾಗೂ ಪಿ ಸುಶೀಲ ಅವರು ಹಾಡಿದ್ದರು. 

Video Thumbnail

ಅಂಜದ ಗಂಡು(1988) - ಪ್ರೀತಿಯಲ್ಲಿ ಇರೋ ಸುಖ

ಪ್ರೀತಿಯಲ್ಲಿ ಇರೋ ಸುಖ ಈ ಹಾಡು 1988ರಲ್ಲಿ ಬಿಡುಗಡೆಯಾದ ಅಂಜದ ಗಂಡು ಚಿತ್ರದ್ದು. ಚಿತ್ರದಲ್ಲಿ ರವಿಚಂದ್ರನ್ ನಾಯಕನಾಗಿ ಮತ್ತು ಖುಷ್ಬೂ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ರೇಣುಕಶರ್ಮ ಅವರ ನಿರ್ದೇಶನದಲ್ಲಿ ಮತ್ತು ಹಂಸಲೇಖ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

Video Thumbnail

ಅಂಜದ ಗಂಡು(1988) - ಏಕೆ ಹೀಗಾಯ್ತೋ

ಏಕೆ ಹೀಗಾಯ್ತೋ ಹಾಡು ಕೂಡ ಅಂಜದ ಗಂಡು ಚಿತ್ರದ್ದು. ಈ ಹಾಡನ್ನು ಎಸ್.ಪಿ.ಬಾಲಸುಬ್ರಮಣ್ಯಂ ಹಾಗೂ ಬಿ. ಆರ್ ಛಾಯಾ ಹಾಡಿದ್ದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+