twitter
    X
    Home ಚಲನಚಿತ್ರಗಳ ಒಳನೋಟ

    ಸ್ಯಾಂಡಲ್‌ವುಡ್‌ನ ಪ್ರಮುಖ ಸಿನಿಮಾಗಳಲ್ಲಿ ನಟಿಸಿದ ಕನ್ನಡೇತರ ನಟರಿವರು!

    Author Sowmya Bairappa | Published: Monday, December 12, 2022, 03:29 PM [IST]

    ಕನ್ನಡ ಚಿತ್ರರಂಗದ ಆರಂಭದಿಂದಲೂ ಪರಭಾಷಾ ನಟ-ನಟಿಯರನ್ನು ಇಲ್ಲಿಗೆ ಕರೆತರುವ ಸಂಪ್ರದಾಯವಿದೆ. ಬೇರೆ ಭಾಷೆಯ ಅನೇಕ ನಟ-ನಟಿಯರು ಕನ್ನಡದಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಸದ್ಯ ಪ್ರಶಾಂತ್ ನೀಲ್ ನಿರ್ದೇಶನ ಮತ್ತು ವಿಜಯ್ ಕಿರಂಗದೂರ್ ಅವರ ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ಮೂಡಿಬರುತ್ತಿರುವ 'ಸಲಾರ್' ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರ ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಮೂಡಿಬರಲಿದೆ. ಸಲಾರ್ ಸಿನಿಮಾದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿರುವುದಕ್ಕೆ ಕೆಲ ಕನ್ನಡ ಸಿನಿರಸಿಕರು ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಚಿತ್ರ ನಿರ್ಮಾಪಕರು 'ಸಲಾರ್' ಸಿನಿಮಾಗೆ ಕನ್ನಡದ ನಾಯಕರನ್ನು ಆಯ್ಕೆ ಮಾಡದೆ, ತೆಲುಗು ನಟನನ್ನು ಆಯ್ಕೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು. ಈ ಸಿನಿಮಾದಲ್ಲಿ ಬಹುತೇಕ ಕೆಜಿಎಫ್ ತಂಡವೇ ಇರಲಿದ್ದು, ನಟ-ನಟಿಯನ್ನು ಹೊರತುಪಡಿಸಿದರೆ ಬಹುತೇಕ ಕನ್ನಡ ತಂಡವೇ ಇದೆ. ಹೀಗೆ ಕನ್ನಡದ ಪ್ರಮುಖ ಸಿನಿಮಾಗಳಲ್ಲಿ ನಟಿಸಿದ 5 ಕನ್ನಡೇತರ ನಟ ಪಟ್ಟಿ ಇಲ್ಲಿದೆ.

    cover image
    ಅನಿಲ್ ಕಪೂರ್

    ಅನಿಲ್ ಕಪೂರ್

    1

    ಬಾಲಿವುಡ್ ಸೂಪರ್‌ಸ್ಟಾರ್ ಅನಿಲ್ ಕಪೂರ್ ಅವರು ಮಣಿರತ್ನಂ ಅವರ ಚೊಚ್ಚಲ ಸಿನಿಮಾ 'ಪಲ್ಲವಿ ಅನುಪಲ್ಲವಿ'ಯಲ್ಲಿ ಕಾಣಿಸಿಕೊಂಡಿದ್ದರು.  ಅನಿಲ್ ಕಪೂರ್ ಕನ್ನಡದಲ್ಲಿ ನಟಿಸುವುದಕ್ಕೂ ಮುನ್ನ ಬಾಲಿವುಡ್ ನ ಐದು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಒಬ್ಬ ಯುವಕ ತನಗಿಂತ ಹಿರಿಯಳಾದ ಹಾಗೂ ಒಬ್ಬ ಡೈವೋರ್ಸ್ ಆದ ಹೆಣ್ಣಿನ ಮೋಹದಲ್ಲಿ ಬೀಳುತ್ತಾನೆ. ತನ್ನನ್ನು ಪ್ರೀತಿಸಿ ಮದುವೆ ಕನಸು ಕಾಣುತ್ತಿರುವ ತನ್ನ ವಯಸ್ಸಿನ ಹುಡುಗಿ ಒಂದೆಡೆಯಾದರೆ, ತನ್ನನ್ನು ಆಕರ್ಷಿಸಿರುವ ಹಿರಿಯ ಮಹಿಳೆ ಇನ್ನೊಂದೆಡೆ. ಈ ಮಾನಸಿಕ ತುಮುಲದಲ್ಲಿ ಪ್ರೀತಿ ಮತ್ತು ಆಕರ್ಷಣೆಯ ಅರ್ಥ ಅರಿಯಲೆತ್ನಿಸುವ ನಾಯಕನಾಗಿ ಅನಿಲ್ ಕಪೂರ್ ಗಮನ ಸೆಳೆಯುತ್ತಾರೆ. ಈ ಸಿನಿಮಾದಲ್ಲಿ  ಲಕ್ಷ್ಮಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದ 'ನಗುವ ನಯನ, ಮಧುರ ಮೌನ' ಹಾಡು ಇಂದಿಗೂ ಕೂಡ ಫೇಮಸ್.  

    ನಾಸಿರುದ್ಧೀನ್ ಶಾ

    ನಾಸಿರುದ್ಧೀನ್ ಶಾ

    2

    1977ರಲ್ಲಿ ತೆರೆಗೆ ಬಂದ ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ `ತಬ್ಬಲಿಯು ನೀನಾದೆ ಮಗನೇ' ಸಿನಿಮಾದಲ್ಲಿ ಹಿಂದಿಯ ಖ್ಯಾತ ನಟ ನಾಸಿರುದ್ಧೀನ್ ಶಾ ನಾಯಕನಾಗಿ ನಟಿಸಿದ್ದರು. ಈ ಸಿನಿಮಾವನ್ನು ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತ್ ನಿರ್ದೇಶಿಸಿದ್ದರು. ಭಾರತೀಯ ಸಂಪ್ರದಾಯಸ್ಥ ಕುಟುಂಬದ ಯುವಕನೊಬ್ಬ ಅಮೇರಿಕಾದಲ್ಲಿ ವಿಧ್ಯಾಭ್ಯಾಸ ಮುಗಿಸಿ ಭಾರತಕ್ಕೆ ಮರುಳುತ್ತಾನೆ. ಬರುವಾಗ ಒಬ್ಬ ಅಮೇರಿಕಾ ಯುವತಿಯನ್ನು ಮದುವೆಯಾಗಿ ಕರೆತರುತ್ತಾನೆ. ಈ ಯುವತಿ ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳಲು ಹೇಗೆ ಕಷ್ಟಪಡುತ್ತಾಳೆ ಎಂಬುದನ್ನು ಈ  ಚಿತ್ರ ಚಿತ್ರಿಸುತ್ತದೆ. 

     

    ಚಿರಂಜೀವಿ

    ಚಿರಂಜೀವಿ

    3

    ತೆಲಗು ನಟ ಚಿರಂಜೀವಿ ನಟಿಸಿದ ಪ್ರಥಮ ಕನ್ನಡ ಚಲನಚಿತ್ರ ಸಿಪಾಯಿ. ಈ ಸಿನಿಮಾದಲ್ಲಿ ರವಿಚಂದ್ರನ್ ಮತ್ತು ಚಿರಂಜೀವಿ ನಾಯಕರಾಗಿ ಮತ್ತು ಸೌಂದರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಇಬ್ಬರು ಸೈನಿಕರ ಸ್ನೇಹವನ್ನು ತೋರಿಸುತ್ತದೆ. ಈ ಸಿನಿಮಾವನ್ನು ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದರು.

    ಕಮಲ್ ಹಾಸನ್

    ಕಮಲ್ ಹಾಸನ್

    4

    'ಕೋಕಿಲ' ಕಮಲ್ ಹಾಸನ್ ನಟನೆಯ ಮೊದಲ ಕನ್ನಡ ಸಿನಿಮಾ. ಬಾಲು ಮಹೇಂದ್ರ ನಿರ್ದೇಶನದ ಈ ಚಿತ್ರ 1977ರಲ್ಲಿ ತೆರೆಕಂಡಿತು. 'ಕೋಕಿಲ' ಚಿತ್ರದಲ್ಲಿ ಕಮಲ್‌ ವಿಜಯ್‌ಕುಮಾರ್ ಅನ್ನೋ ಪಾತ್ರ ನಿರ್ವಹಿಸಿದ್ದರು. ಕಮಲ್ ಅವರಿಗೆ ಜೋಡಿಯಾಗಿ ಶೋಭಾ ನಟಿಸಿದ್ದರು. ಈ ಚಿತ್ರದಲ್ಲಿ ಅಭಿನಯಿಸಬೇಕಾದರೆ ಕಮಲ್ ಅವರಿಗೆ ಕನ್ನಡ ಬರುತ್ತಿರಲಿಲ್ಲ. ಆದರೂ ಅವರೇ ಡಬ್ ಮಾಡಿರುವುದು ವಿಶೇಷ. ಇದೇ ಚಿತ್ರ ಮಲಯಾಳಂ ಭಾಷೆಗೆ 'ಊಮ ಕುಯಿಲ್‌' ಎಂದು ರಿಮೇಕ್‌ ಆದರೆ, ಹಿಂದಿಗೆ 'ಔರ್ ಏಕ್‌ ಪ್ರೇಮ್‌ ಕಹಾನಿ' ಹೆಸರಿನಲ್ಲಿ ರಿಮೇಕ್ ಆಗಿತ್ತು. ನಟ ರಮೇಶ್‌ ಅರವಿಂದ್ ಹಿಂದಿ ರಿಮೇಕ್‌ನಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದು ವಿಶೇಷ. ಈ ಸಿನಿಮಾಗೆ ಅತ್ಯುತ್ತಮ ಛಾಯಾಗ್ರಹಣ ರಾಷ್ಟ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಚಿತ್ರಕಥೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಬಳಿಕ ಕಮಲ್ ಹಾಸನ್ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.  

     

    ಜೂಹಿ ಚಾವ್ಲಾ

    ಜೂಹಿ ಚಾವ್ಲಾ

    5

    ಬಾಲಿವುಡ್ ನಟಿ ಜೂಹಿ ಚಾವ್ಲಾ ರವಿಚಂದ್ರನ್ ನಿರ್ದೇಶನದ 'ಪ್ರೇಮಲೋಕ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಂಡಿತ್ತು. ಇದಾದ ಬಳಿಕ ಜೂಹಿ ಚಾವ್ಲಾ ಶಾಂತಿ ಕ್ರಾಂತಿ, ಕಿಂದರಿಜೋಗಿ ಚಿತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳು ಕೂಡ ಹಿಟ್ ಆದವು.  90ರ ದಶಕದ ಪ್ರಮುಖ ನಟಿಯಲ್ಲಿ  ಜೂಹಿ ಚಾವ್ಲಾ ಕೂಡ ಒಬ್ಬರಾಗಿದ್ದರು. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X