ಕನ್ನಡ ಚಿತ್ರರಂಗಕ್ಕೆ ಡಿಫರೆಂಟ್ ಅಂದರೆ ಏನು ಅಂತ ತೋರಿಸಿಕೊಟ್ಟವರು ಉಪೇಂದ್ರ. ರಿಯಲ್ ಸ್ಟಾರ್ ನಾಯಕನಾಗಿ ಮಾತ್ರವಲ್ಲದೆ, ನಿರ್ದೇಶನದ ಮೂಲಕವೂ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ. ಕಾಶಿನಾಥ್ ಅವರ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಬೆಳೆದ ಉಪ್ಪಿ, ಕನ್ನಡ ಚಿತ್ರರಂಗಕ್ಕೆ ಒಂದಕ್ಕಿಂತ ಒಂದು ಶೈಲಿಯ ಚಿತ್ರಗಳನ್ನು ನೀಡಿದ್ದಾರೆ. ಇಲ್ಲಿ ರಿಯಲ್ ಸ್ಟಾರ್ ಉಪ್ಪಿಯವರ ಮುಂಬರುವ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.