ಚಲನಚಿತ್ರಗಳ ಒಳನೋಟ
2006ರಲ್ಲಿ ತೆರೆಕಂಡ ಜಾಕಪಾಟ್ ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಶುಭಾ ಪೂಂಜಾ, ಸದ್ಯ ಪ್ರಮುಖ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮಂಗಳೂರಿನ ತುಳುವ ಕುಟುಂಬದಲ್ಲಿ ಜನಿಸಿದ ಶುಭಾ ಬೆಳೆದಿದ್ದು ಬೆಂಗಳೂರಿನಲ್ಲಿ. ಜಯನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು ಮಾಡೆಲಿಂಗ್ ಮಾಡತೊಡಗಿದರು. ನಂತರ ಹಲವು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. 2003ರಲ್ಲಿ `ಮಿಸ್ ಚೆನ್ನೈ ಟಾಪ್ ಮಾಡೆಲ್' ಟೈಟಲ್‌ಗೆ ಭಾಜನರಾದರು. ಇದೇ ಕಾರಣದಿಂದ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಇಂದು ಶುಭಾ ಪೂಂಜಾ ಹುಟ್ಟುಹಬ್ಬ. ಇಲ್ಲಿ ಅವರ ನಟನೆಯ ಹಿಟ್ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.