ಚಲನಚಿತ್ರಗಳ ಒಳನೋಟ
ಚಿತ್ರರಂಗದ ಹಲವರು ನಿರ್ದೇಶಕರು ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಇನ್ನೂ ಕೆಲವರು ಎರಡನೇ ಬಾರಿಗೆ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಹೊಸ ನಿರ್ದೇಶಕರ ಸಿನಿಮಾ ಒಪ್ಪಿಕೊಳ್ಳುವಾಗ ಸ್ಟಾರ್ ನಟರು ಹಲವಾರು ಬಾರಿ ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಯಾಕೆಂದರೆ, ಸ್ಟಾರ್ ನಟರ ಅವರದ್ದೇಯಾದ ಗಡಿಯನ್ನು ಸೃಷ್ಟಿಸಿಕೊಂಡಿರುತ್ತಾರೆ. ಇದು ಉದ್ದೇಶಪೂರ್ವಕವಲ್ಲ. ಕೆಲವೊಮ್ಮೆ ಕಾರಣಾಂತರಗಳಿಂದ ಸ್ಟಾರ್ ನಟರು ಹೊಸ ನಿರ್ದೇಶಕರ ಸಿನಿಮಾ ಮಾಡಲಾಗುವುದಿಲ್ಲ. ಆದರೆ, ಅದು ಉದ್ದೇಶಪೂರ್ವಕವಾಗಿರುವುದಿಲ್ಲ. ಸ್ಟಾರ್ ನಟರು ತಿರಸ್ಕರಿಸಿದ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿರುವುದನ್ನು ನಾವು ಎಲ್ಲಾ ಚಿತ್ರರಂಗದಲ್ಲೂ ನೋಡಬಹುದು. ಇದಕ್ಕೆ ಕನ್ನಡ ಚಿತ್ರರಂಗವೂ ಹೊರತಾಗಿಲ್ಲ. ಇಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ರಿಜೆಕ್ಟ್ ಮಾಡಿದ ಬ್ಲಾಕ್‌ಬಸ್ಟರ್ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.